ಪೊಲೀಸ್​ರಿಂದ ತಪ್ಪಿಸಿಕೊಳ್ಳಲು ಹೋಗಿ ಜೀಪ್​​ನಿಂದ ಜಿಗಿದು ಬಿದ್ದು ಆರೋಪಿ ಸಾವು

| Updated By: ವಿವೇಕ ಬಿರಾದಾರ

Updated on: Nov 29, 2022 | 6:34 PM

ಆರೋಪಿ ಪೋಲಿಸರಿಂದ ತಪ್ಪಿಸಿಕೊಳ್ಳಲು ಹೋಗಿ ಜೀಪ್​​ನಿಂದ ಜಿಗಿದು ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಾಂಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪೊಲೀಸ್​ರಿಂದ ತಪ್ಪಿಸಿಕೊಳ್ಳಲು ಹೋಗಿ ಜೀಪ್​​ನಿಂದ ಜಿಗಿದು ಬಿದ್ದು ಆರೋಪಿ ಸಾವು
ಸಾಂಧರ್ಬಿಕ ಚಿತ್ರ
Follow us on

ಚಾಮರಾಜನಗರ: ಆರೋಪಿ ಪೋಲಿಸರಿಂದ (Police) ತಪ್ಪಿಸಿಕೊಳ್ಳಲು ಹೋಗಿ ಜೀಪ್​​ನಿಂದ ಜಿಗಿದು ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಾಂಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕುಂತೂರು ಮೋಳೆ ಗ್ರಾಮದ ನಿಂಗರಾಜು (24) ಮೃತ ಆರೋಪಿ. ಆರೋಪಿ ನಿಂಗರಾಜುವನ್ನು ಅಪ್ರಾಪ್ತ ಬಾಲಕಿ ಅಪಹರಣ ಪ್ರಕರಣದಲ್ಲಿ ಪೋಲಿಸರು ಬಂಧಿಸಿದ್ದರು. ಬಳಿಕ ಆರೋಪಿ ನಿಂಗರಾಜುವನ್ನು ವಿಚಾರಣೆಗೆಂದು ಪೊಲೀಸ್ ಠಾಣೆಗೆ ಕರೆತರುತ್ತಿದ್ದಾಗ ಜೀಪ್​​ನಿಂದ ನೆಗೆದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ಇನ್ನು ಆರೋಪಿ ಮರಣಹೊಂದುತ್ತಿದ್ದಂತೆ, ಜೀಪ್​ನಲ್ಲಿದ್ದ ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡುವುದಾಗಿ ಚಾಮರಾಜನಗರ ಎಸ್ಪಿ ಶಿವಕುಮಾರ್ ಹೇಳಿದ್ದಾರೆ. ಪ್ರಕರಣಕ್ಕೆ ಪೊಲೀಸರ ನಿರ್ಲಕ್ಷ್ಯ ಕಾರಣವೆಂದು ಯಳಂದೂರು ಪೊಲೀಸ್ ಠಾಣೆಗೆ ಕುಂತೂರು ಮೋಳೆ ಗ್ರಾಮಸ್ಥರು ಮುತ್ತಿಗೆ ಹಾಕಿದರು. ಈ ಸಾವಿನ ಬಗ್ಗೆ ಸಂಶಯವಿದ್ದು ಸೂಕ್ತ ತನಿಖೆಯಾಗಬೇಕೆಂದು ಒತ್ತಾಯಿಸಿದರು. ಹೀಗಾಗಿ ಪ್ರಕರಣ ತನಿಖೆ ನಡೆಸಲಾಗುವದು ಎಂದರು.

BMTC ಬಸ್, ಬೈಕ್ ನಡುವೆ ಅಪಘಾತ; ಸವಾರರಿಬ್ಬರು ಸಾವು

ಬಿಎಂಟಿಸಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್​ ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ನಗರದ ಮಾಗಡಿ ರಸ್ತೆ ಜಂಕ್ಷನ್ ಬಳಿ ನಡೆದಿದೆ. ಮಂಜುನಾಥ್(25), ಶಿವರಾಜ್(29) ಮೃತ ದುರ್ದೈವಿಗಳು. ಮೃತರು ಗೊಲ್ಲರಹಟ್ಟಿಯ ಇಂದಿರಾ ಕಾಲೋನಿ ನಿವಾಸಿಗಳು ಎಂದು ತಿಳಿಬಂದಿದೆ. ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:52 pm, Tue, 29 November 22