ರೆಸಾರ್ಟ್ ಮಾಲೀಕರ ಲಾಬಿಗೆ ಒಳಗಾದ್ರಾ ಬಂಡೀಪುರ ಅರಣ್ಯ ಸಿಬ್ಬಂದಿ? ರೈತರ ವಿರುದ್ದವೇ ದಬ್ಬಾಳಿಕೆ

ಬಂಡೀಪುರ ಸಫಾರಿ ಮರು ಆರಂಭಕ್ಕೆ ಸರ್ಕಾರ ನಿರ್ಧರಿಸಿದ್ದು, ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮೂರು ತಿಂಗಳ ಬಂದ್ ನಂತರ ಮತ್ತೆ ಸಫಾರಿ ಆರಂಭವಾದರೆ ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗುತ್ತದೆ ಎಂಬುದು ರೈತರ ಆತಂಕ. ಆದರೆ, ರೆಸಾರ್ಟ್ ಮಾಲೀಕರು ಸಫಾರಿ ಆರಂಭಕ್ಕೆ ಲಾಬಿ ನಡೆಸುತ್ತಿದ್ದು, ಅರಣ್ಯ ಇಲಾಖೆಯ ಕೆಲವು ಸಿಬ್ಬಂದಿ ಅವರಿಗೆ ಸಹಕಾರ ನೀಡುತ್ತಿರುವ ಆರೋಪ ಕೇಳಿಬಂದಿದೆ.

ರೆಸಾರ್ಟ್ ಮಾಲೀಕರ ಲಾಬಿಗೆ ಒಳಗಾದ್ರಾ ಬಂಡೀಪುರ ಅರಣ್ಯ ಸಿಬ್ಬಂದಿ? ರೈತರ ವಿರುದ್ದವೇ ದಬ್ಬಾಳಿಕೆ
ಅರಣ್ಯ ಸಿಬ್ಬಂದಿ ವಿರುದ್ಧ ಎಸ್​ಪಿ ಗರಂ
Image Credit source: tv9 kannada
Edited By:

Updated on: Feb 19, 2026 | 7:36 PM

ಚಾಮರಾಜನಗರ, ಫೆಬ್ರವರಿ 19: ಕಳೆದ ಮೂರು ತಿಂಗಳಿಂದ ಬಂದ್ ಆಗಿದ್ದ ಸಫಾರಿ (Safari) ಈಗ ಮತ್ತೆ ಕೆಲ ಷರತ್ತುಗಳೊಂದಿಗೆ ಪುನಾರಂಭ ಮಾಡಲು ಹೊರಟಿರುವ ಸರ್ಕಾರದ ಕ್ರಮ ಖಂಡಿಸಿ ರೈತರು ಇಂದು ಬಂಡೀಪುರದ ಸಫಾರಿ ಕೇಂದ್ರದ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಇದಕ್ಕೆ ರೆಸಾರ್ಟ್ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದು, ಅರಣ್ಯ ಸಿಬ್ಬಂದಿ ರೆಸಾರ್ಟ್​​ನವರನ್ನ ಸಫಾರಿ ಕೇಂದ್ರದ ಒಳ ಬಿಟ್ಟುಕೊಂಡು ನೌಟಂಕಿ ಆಟವಾಡಿದ್ದಾರೆ.

ಸಫಾರಿ ಪುನಾರಂಭಕ್ಕೆ ಸೂಚನೆ

ಸದಾ ಮಾನವ, ಕಾಡು ಪ್ರಾಣಿ ಸಂಘರ್ಷದಿಂದ ಬೇಸತ್ತಿದ್ದ ಜನರಿಗೆ ಸಫಾರಿ ಬಂದ್ ಮಾಡಿ ಸರ್ಕಾರ ಗುಡ್ ನ್ಯೂಸ್ ಕೊಟ್ಟಿತ್ತು. ಸಫಾರಿ ಬಂದ್ ಆಗಿದ್ದೆ ತಡ ಕಾಡು ಪ್ರಾಣಿ ದಾಳಿ ಕೂಡ ಕಡಿಮೆಯಾಗಿತ್ತು. ಆದರೆ ಯಾವ ಲಾಬಿಗೆ ರಾಜ್ಯ ಸರ್ಕಾರ ಬಿತ್ತೋ ಗೊತ್ತಿಲ್ಲ ಮತ್ತೆ ಇದೀಗ ಸಫಾರಿ ಪುನಾರಂಭಕ್ಕೆ ಸೂಚನೆ ಸಿಕ್ಕಿದೆ.

ಇದನ್ನೂ ಓದಿ: ನಾಳೆಯಿಂದಲೇ ನಾಗರಹೊಳೆ, ಬಂಡೀಪುರ ಸಫಾರಿ ಪುನರಾರಂಭ: ಗುಡ್​​ನ್ಯೂಸ್​​ ಕೊಟ್ಟ ಅರಣ್ಯ ಸಚಿವರು

ಯಾವಾಗ ಸಚಿವ ಈಶ್ವರ್ ಖಂಡ್ರೆ ಕಟ್ಟುನಿಟ್ಟಿನ ಕ್ರಮದೊಂದಿಗೆ ಬಂಡೀಪುರ ನಾಗರಹೊಳೆ ಸಫಾರಿಯನ್ನ ಶೇಕಡಾ 50 ಪರ್ಸೆಂಟ್ ಅಷ್ಟು ಮತ್ತೆ ಓಪನ್ ಮಾಡಲಾಗುತ್ತೆ ಅಂತ ಆದೇಶ ಮಾಡಿದ್ದರೆ, ಇತ್ತ ಗಡಿ ಜಿಲ್ಲೆಯ ರೈತರ ಕಣ್ಣು ಈಗ ಕೆಂಪಾಗಿದೆ. ಯಾವುದೇ ಕಾರಣಕ್ಕೂ ಬಂಡೀಪುರ ನಾಗರಹೊಳೆ ಸಫಾರಿಯನ್ನ ರೀ ಓಪನ್ ಮಾಡಬಾರದು ಅಂತ ಬಂಡೀಪುರ ಸಫಾರಿ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ, ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದುರಂತ ಅಂದರೆ ಸ್ವತಃ ಬಂಡೀಪುರ ಆರ್​ಎಫ್​ಓ ಮಲ್ಲೇಶ್ ಹಾಗೂ ಎಸಿಎಫ್ ನವಿನ್ ರೆಸಾರ್ಟ್ ಸಿಬ್ಬಂದಿಗೆ ಎತ್ತಿ ಕಟ್ಟಿ ಪ್ರತಿಭಟನೆ ನಡೆಸಲು ಉತ್ತೇಜನ ನೀಡಿದ್ದು ಅಲ್ಲದೇ ಬಂಡೀಪುರ ಸಫಾರಿ ಪಾಯಿಂಟ್ ಒಳಗಡೆ ರೆಸಾರ್ಟ್ ಕಡೆಯವರನ್ನ ಬಿಟ್ಟುಕೊಂಡಿದ್ದಾರೆ. ಇದನ್ನ ಕಂಡು ಗರಂ ಆದ ಎಸ್​ಪಿ ಮುತ್ತುರಾಜ್​​, ಆರ್​ಎಫ್​ಓ ಮಲ್ಲೇಶ್, ಎಸಿಎಫ್ ನವೀನ್​​ಗೆ ಎಚ್ಚರಿಕೆ ನೀಡಿದ್ದಾರೆ. ಎಸ್​ಪಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳುತ್ತಿದ್ದಂತೆ ಸಫಾರಿ ಪಾಯಿಂಟ್ ಒಳಗಡೆ ಇದ್ದ ರೆಸಾರ್ಟ್​​ನವರನ್ನ ಬಂಡೀಪುರ ಅರಣ್ಯ ಸಿಬ್ಬಂದಿ ಹೊರಗಡೆ ಕಳಿಸಿದ್ದಾರೆ. ಬಂಡೀಪುರ ಅರಣ್ಯ ಸಿಬ್ಬಂದಿಯ ಈ ನಡೆ ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಸಫಾರಿ ಬಂದ್​ನಿಂದ ನೆರೆರಾಜ್ಯಕ್ಕೆ ಹರಿದು ಹೋಗುತ್ತಿದೆ ಪ್ರವಾಸಿಗರ ದಂಡು! ಕರ್ನಾಟಕಕ್ಕಾಗುವ ನಷ್ಟವೆಷ್ಟು ಗೊತ್ತಾ?

ಒಟ್ಟಿನಲ್ಲಿ ರೆಸಾರ್ಟ್ ಮಾಲೀಕರ ಲಾಬಿಗೆ ಒಳಗಾಗಿ ಓಪನ್ ಆಗಿ ರೆಸಾರ್ಟ್​ನವರಿಗೆ ಬೆಂಬಲಿಸಿದ ಇಂತ ಆರ್​ಎಫ್​ಓ ಮಲ್ಲೇಶ್, ಎಸಿಎಫ್ ನವೀನ್ ವಿರುದ್ದ ಕ್ರಮ ಆಗಲೇಬೇಕೆಂದು ಜನರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Suraj Prasad SN

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More
Follow Us