Doddamma Thayi Jatre: ಗಡಿನಾಡು ಚಾಮರಾಜನಗರ ಜಿಲ್ಲೆಯಲ್ಲಿ ಸಂಕ್ರಾಂತಿ ಸಮೀಪಿಸಿದಾಗ ಜಾತ್ರೆಗಳ ಸುಗ್ಗಿಯೋ ಸುಗ್ಗಿ, ಒಂದು ಝಲಕ್ ಇಲ್ಲಿದೆ!

| Updated By: Digi Tech Desk

Updated on: Jan 03, 2023 | 5:20 PM

Kastur Bandi Jatre: ಅದು 16 ಹಳ್ಳಿಗಳಿಂದ ಬಂದಿದ್ದ ಅಲಂಕೃತ ಬಂಡಿಗಳು ಸಮಾಗಮಗೊಳ್ಳುವ ಜಾತ್ರೆ. ಅಲ್ಲಿ ಬಂಡಿಗಳದ್ದೇ ಕಾರುಬಾರು. ಮದುವಣಗಿತ್ತಿಯಂತೆ ಶೃಂಗಾರಗೊಂಡ ಎತ್ತಿನ ಬಂಡಿಗಳು ಒಂದಕ್ಕಿಂತ ಒಂದು ಹೆಚ್ಚು ಆಕರ್ಷಕವಾಗಿದ್ದವು.

1 / 10
ಜಿಲ್ಲೆಯಲ್ಲಿ ಮೊಟ್ಟಮೊದಲು ನಡೆಯುವ ಜಾತ್ರೆ ಅಂದರೆ ಅದು ಚಾಮರಾಜನಗರ ತಾಲೂಕಿನ ಕಸ್ತೂರು (Kastur) ಬಂಡಿ ಜಾತ್ರೆ..

2 / 10
ಹದಿನಾರು ಹಳ್ಳಿಗಳ ಬಂಡಿ ಉತ್ಸವ 23 ಹಳ್ಳಿಗಳಲ್ಲಿ ಸಂಭ್ರಮ ಸಡಗರಗಳೊಂದಿಗೆ ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ಗ್ರಾಮಸ್ಥರು ತಮ್ಮ ಬಂಧುಬಳಗವನ್ನೆಲ್ಲಾ ಆಹ್ವಾನಿಸುತ್ತಾರೆ. ಕರೊನಾ ಕಾರ್ಮೋಡದ ಬಳಿಕ ಸಾರ್ವಜನಿಕರು ಒಟ್ಟಾಗಿ ಜಾತ್ರೆಯಲ್ಲಿ ಭಾಗವಹಿಸಿ ಸಂಭ್ರಮಪಟ್ಟರು.

3 / 10
ದೇವಸ್ಥಾನ ಪಕ್ಕದಲ್ಲಿ ಕೆರೆ ಇದ್ದು ಅಲ್ಲಿನ ಮಣ್ಣನ್ನು ಪಡೆದು ಮೈಮೇಲಿನ ಗಾಯಕ್ಕೆ ಹಚ್ಚಿದರೆ ಬೇಗ ವಾಸಿ ಆಗುತ್ತೆ ಅನ್ನೋದು ಭಕ್ತರ ನಂಬಿಕೆ. ಈ ಬಾರಿ ಜನವರಿ 1ರಂದು ಜಾತ್ರೆ ಬಂದಿರೋದ್ರಿಂದ ಹೊಸ ವರ್ಷ ಹಾಗೂ ಜಾತ್ರೆ ಎರಡೂ ಸಂಭ್ರಮ ಸಿಕ್ಕಂತಾಯ್ತು ಅಂತಾರೆ ಉಮ್ಮತ್ತೂರು ನಿವಾಸಿ ಶೋಭಾರಾಣಿ.

4 / 10
 ಜಾತ್ರೆಯಲ್ಲಿ ಕಸ್ತೂರು, ಮರಿಯಾಲ, ಭೋಗಾಪುರ, ಕೆಲ್ಲಂಬಳ್ಳಿ, ತೊರವಳ್ಳಿ ಸೇರಿದಂತೆ ಹದಿನಾರು ಹಳ್ಳಿಗಳ ಬಂಡಿಗಳ ಉತ್ಸವ ನಡೆಯುತ್ತದೆ. ತಮ್ಮ ದನಕರುಗಳಿಗೆ ಯಾವುದೇ ರೋಗ ರುಜಿನಗಳು ಬಾರದೆ ಇರಲಿ ಎಂದು ಹರಕೆ ಹೊತ್ತ ರೈತರು ಈ ಬಂಡಿಗಳಿಗೆ ಕಾಯಿ ಹೊಡೆದು ಹರಕೆ ತೀರಿಸುತ್ತಾರೆ. ಕೆಲವರು ಪಂಜಿನ ಸೇವೆ ಮಾಡುತ್ತಾರೆ.

5 / 10
 ರಂಗುರಂಗಿನ ಬಟ್ಟೆ, ನಾನಾ ಬಗೆಯ ಹೂವು, ಬಾಳೆಗೊನೆ ಹೀಗೆ ವಿವಿಧ ರೀತಿಯಲ್ಲಿ  ಫಲಪುಷ್ಪಗಳಿಂದ  ಎತ್ತಿನಬಂಡಿಗಳು ಶೃಂಗಾರಗೊಂಡಿದ್ದವು.  ಸಹಸ್ರಾರು ಜನ ಸಂಭ್ರಮ ಸಡಗರಗಳೊಂದಿಗೆ  ಜಾತ್ರೆಯಲ್ಲಿ ಪಾಲ್ಗೊಂಡು ಕಸ್ತೂರು ದೊಡ್ಡಮ್ಮತಾಯಿಗೆ ಪೂಜೆ ಸಲ್ಲಿಸಿ ನಮಿಸಿದರು (Doddammathayi Jatre). ದೊಡ್ಡಮ್ಮತಾಯಿಗೆ ಹರಕೆ ಹೊತ್ತರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬುದು ಭಕ್ತರ ನಂಬಿಕೆಯಾಗಿದೆ ಎನ್ನುತ್ತಾರೆ ಅರ್ಚಕ ಇಂದ್ರಜಿತ್.

6 / 10
ಜಿಲ್ಲೆಯಲ್ಲಿ ಮೊಟ್ಟಮೊದಲು ನಡೆಯುವ ಜಾತ್ರೆ ಅಂದರೆ ಅದು ಚಾಮರಾಜನಗರ ತಾಲೂಕಿನ ಕಸ್ತೂರು (Kastur) ಬಂಡಿ ಜಾತ್ರೆ.. ಕಸ್ತೂರು ಹಾಗೂ ಸುತ್ತಮುತ್ತಲ 23 ಹಳ್ಳಿಗಳಲ್ಲಿ ಭಾನುವಾರ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು. ಹೆಸರೇ ಹೇಳುವಂತೆ ಇಲ್ಲಿ  ಬಂಡಿಗಳದ್ದೆ ಕಾರುಬಾರು, ನಾನಾ ರೀತಿಯಲ್ಲಿ  ಅಲಂಕೃತಗೊಂಡ ಎತ್ತಿನ ಬಂಡಿಗಳು ಬಂದಿದ್ದವು.

7 / 10
ಅಲಂಕಾರಗೊಂಡಿರುವ ಬಂಡಿಗಳು...ಬಂಡಿಯ ಚಕ್ರಕ್ಕೆ ತೆಂಗಿನಕಾಯಿ ಒಡೆಯುತ್ತಿರೋದು... ಹೌದು, ಜನವರಿ ಆರಂಭವಾಗುತ್ತಿದ್ದಂತೆ ಗಡಿನಾಡು ಚಾಮರಾಜನಗರ (chamarajanagar) ಜಿಲ್ಲೆಯಲ್ಲಿ ಜಾತ್ರೆಗಳ ಸುಗ್ಗಿಯೇ ಆರಂಭವಾಗುತ್ತೆ.

8 / 10
ಹೂ, ಹಣ್ಣು ಎಳೆನೀರುಗಳಿಂದ ಅಲಂಕೃತಗೊಂಡ ಬಂಡಿಗಳ ಜಾತ್ರೆ ನಡೆಯುವುದು ಎಲ್ಲಿ ಅಂತೀರಾ? ಈ ಸ್ಟೋರಿ ನೋಡಿ. (ವರದಿ: ದಿಲೀಪ್ ಚೌಡಹಳ್ಳಿ, ಟಿವಿ 9, ಚಾಮರಾಜನಗರ)

9 / 10
 ಅದು ಹದಿನಾರು ಹಳ್ಳಿಗಳಿಂದ ಬಂದಿದ್ದ ಅಲಂಕೃತ ಬಂಡಿಗಳು ಸಮಾಗಮಗೊಳ್ಳುವ ಜಾತ್ರೆ. ಅಲ್ಲಿ ಬಂಡಿಗಳದ್ದೇ ಕಾರುಬಾರು.  ಮದುವಣಗಿತ್ತಿಯಂತೆ ಶೃಂಗಾರಗೊಂಡ ಎತ್ತಿನ ಬಂಡಿಗಳು ಒಂದಕ್ಕಿಂತ ಒಂದು ಹೆಚ್ಚು ಆಕರ್ಷಕವಾಗಿದ್ದವು ( Bandi Jatre).

10 / 10
ಚಾಮರಾಜನಗರ ಜಿಲ್ಲೆಯಲ್ಲಿ ಸಂಕ್ರಾಂತಿ ಸಮೀಪಿಸಿದಾಗ ಜಾತ್ರೆಗಳ ಸುಗ್ಗಿ

Published On - 3:44 pm, Mon, 2 January 23