ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವ ವಿ ಸೋಮಣ್ಣ (V Somanna) ಅವರು ಶನಿವಾರ ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು (KDP). ಇದೇ ಸಂದರ್ಭದಲ್ಲ್ಲಿ ಹುಣಸೆಕೆರೆ ಹಿತರಕ್ಷಣಾ ಸಮಿತಿ (Hunasekere Welfare Committee) ಸದಸ್ಯರ ವತಿಯಿಂದ ಜಿಲ್ಲೆಯಲ್ಲಿ ಇನ್ನು ನೀರು ತುಂಬಿಸಲಾಗದಿರುವ ಕೆರೆಗಳಿಗೆ ಕಾವೇರಿ ನದಿ ನೀರನ್ನು ತುಂಬಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಮನವಿ ಪತ್ರವೊಂದನ್ನು ಸಚಿವರಿಗೆ ಸಲ್ಲಿಸಲಾಯಿತು. ಹುಣಸೆಕೆರೆ ಹಿತರಕ್ಷಣಾ ಸಮಿತಿ ಸದಸ್ಯರಲ್ಲದೆ ಹಲವಾರು ಹಳ್ಳಿಗಳ ರೈತರು ಸಹ ಸಚಿವ ಸೋಮಣ್ಣ ಅವರಿಗೆ ತಮ್ಮ ತಮ್ಮ ಊರುಗಲ್ಲಿರುವ ಕೆರೆಗಳಿಗೆ ನೀರು ತುಂಬಿಸುವಂತೆ ಮನವಿ ಮಾಡಿದರು. ಹಿತರಕ್ಷಣಾ ಸಮಿತಿಯವರು ಗುಂಡಾಲ್ ಡ್ಯಾಂ, ರಾಮನಗುಡ್ಡ, ಹುಬ್ಬೆ ಹುಣಸೆಕೆರೆಗೆ ಕಾವೇರಿ ನದಿಯಿಂದ ನೀರು ತುಂಬಿಸಬೇಕೆಂದು ಕೋರಿದ್ದಾರೆ. ಸಚಿವರೊಂದಿಗೆ ಮಾತಾಡಿದ ಸಮಿತಿಯ ಸದಸ್ಯರು ಗುಂಡಾಲ್ ಜಲಾಶಯದವರೆಗೆ ಪೈಪ್ಲೈನ್ ಕಾಮಗಾರಿ ಆಗಿದ್ದು, ರಾಮನಗುಡ್ಡ, ಹುಬ್ಬೆ ಹುಣಸೆಕೆರೆಗೆ ಪೈಪ್ ಲೈನ್ ಅಳವಡಿಸಬೇಕಿರುವ ವಿಷಯವನ್ನು ಸಚಿವರ ಗಮನಕ್ಕೆ ತಂದರು.
ಕೆರೆಗಳನ್ನು ತುಂಬಿಸಿದರೆ ಆಯಾ ಗ್ರಾಮಗಳ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಸಿಕ್ಕಂತಾಗುತ್ತದೆ ಮತ್ತು ರೈತರಿಗೆ ವ್ಯವಸಾಯಕ್ಕೂ ಬಹಳ ಅನುಕೂಲವಾಗಲಿದೆ ಎಂದು ರೈತರು ಸಚಿವರಿಗೆ ಹೇಳಿದರು. ಹನೂರು ಪಟ್ಟಣ ಮತ್ತು ತಾಲೂಕಿನ ಹಲವಾರು ಗ್ರಾಮಗಳ ರೈತರು ಸಹ ಜನರಿಗೆ ಕೆರೆಗಳಿಗೆ ನೀರು ತುಂಬಿಸುವುದರಿಂದ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.
ಚಾಮರಾಜನಗರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದತ್ತೇಶ್ ಕುಮಾರ್ ನೇತೃತ್ವದಲ್ಲಿ ರೈತರು ಸಚಿವರಿಗೆ ಮನವಿ ಸಲ್ಲಿಸಿದರು. ರಾಮನಗುಡ್ಡ, ಹುಣಸೆಕೆರೆಗೆ ನೀರು ತುಂಬಿಸಿದರೆ ಸುಮಾರು 25 ಸಾವಿರ ಜನರಿಗೆ ಕುಡಿಯುವ ನೀರು ಹಾಗೂ ವ್ಯವಸಾಯಕ್ಕೆ ಅನುಕೂಲವಾಗಲಿದೆ ಅಂತ ಸಚಿವರು ಗಮನಕ್ಕೆ ತರಲಾಯಿತು.
ಹುಣಸೆಕೆರೆ ಹಿತರಕ್ಷಣಾ ಸಮಿತಿ ಸದಸ್ಯರು ಮತ್ತು ರೈತರ ಮನವಿ ಆಲಿಸಿದ ನಂತರ ಸಚಿವ ಸೋಮಣ್ಣ ಅವರು ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಬೇಕಾದಷ್ಟು ಅಧಿಕಾರ ಅನುಭವಿಸಿದ್ದಾರೆ, ಇನ್ನೂ ಯಾಕೆ ಅದರ ಲಾಲಸೆಯೋ? ಸಚಿವ ವಿ ಸೋಮಣ್ಣ