ಅರ್ಧ ಆಯ್ತು, ಸ್ವಲ್ಪ ಆಯ್ತು ಅಂದರೆ ಹೆಣ ಎತ್ತು ಬಿಡ್ತೀನಿ; ಮೈಸೂರಿನಲ್ಲಿ ಪುರಸಭೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಸಚಿವ ವಿ ಸೋಮಣ್ಣ
ನಂಜನಗೂಡು ನಗರಸಭೆ ಆಯುಕ್ತ ಸಭೆಗೆ ಗೈರಾದ ಹಿನ್ನೆಲೆ ಅಧಿಕಾರಿ ವಿರುದ್ಧ ಸಚಿವ ಸೋಮಣ್ಣ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಮಂತ್ರಿ ಬಂದಾಗ ಅಧಿಕಾರಿ ಬರಬೇಕೆಂಬ ಸೌಜನ್ಯವಿಲ್ಲವಾ? ಈ ಸಭೆಗಿಂತಾ ಬೇರೆ ಏನು ಕೆಲಸ ಇದೆ ಅವನಿಗೆ ಅಂತ ಕಿಡಿಕಾರಿದ್ದಾರೆ.
ಮೈಸೂರು: ಇಂದು (ಜ.24) ನಡೆದ ಜಿಲ್ಲಾ ಪಂಚಾಯತಿ ಸಭೆಯಲ್ಲಿ ಸಚಿವ ವಿ ಸೋಮಣ್ಣ (V Somanna) ಬನ್ನೂರು ಪುರಸಭೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. ಅರ್ಧ ಆಯ್ತು, ಸ್ವಲ್ಪ ಆಯ್ತು ಅಂದರೆ ಹೆಣ ಎತ್ತು ಬಿಡ್ತೀನಿ ಅಂತ ಅಧಿಕಾರಿಗಳಿಗೆ ಗದರಿದರು. ವಸತಿ ಇಲಾಖೆ ಮನೆಗಳು ಸೋರುತ್ತಿವೆ ಎಂದು ಸಚಿವರಿಗೆ ಶಾಸಕ ಅಶ್ವಿನ್ ಕುಮಾರ್ ದೂರು ನೀಡಿದ ಹಿನ್ನೆಲೆ ಅಧಿಕಾರಿಗೆ ಪಟ್ಟಿ ಸಿದ್ಧಮಾಡಿಕೊಂಡು ಬರಲು ಸೂಚನೆ ನೀಡಿದ ಸೋಮಣ್ಣ, ಕೆಲಸ ಮಾಡಿಸಬೇಕು, ಅರ್ಧ ಆಯ್ತು ಅಂದರೆ ಸರಿಯಿರಲ್ಲ ಅಂತ ತರಾಟೆಗೆ ತೆಗೆದುಕೊಂಡರು.
ನಂಜನಗೂಡು ನಗರಸಭೆ ಆಯುಕ್ತ ಸಭೆಗೆ ಗೈರಾದ ಹಿನ್ನೆಲೆ ಅಧಿಕಾರಿ ವಿರುದ್ಧ ಸಚಿವ ಸೋಮಣ್ಣ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಮಂತ್ರಿ ಬಂದಾಗ ಅಧಿಕಾರಿ ಬರಬೇಕೆಂಬ ಸೌಜನ್ಯವಿಲ್ಲವಾ? ಈ ಸಭೆಗಿಂತಾ ಬೇರೆ ಏನು ಕೆಲಸ ಇದೆ ಅವನಿಗೆ ಅಂತ ಕಿಡಿಕಾರಿದ್ದಾರೆ. ಬೇರೆ ಸಭೆ ಮಾಡುವುದಕ್ಕೆ ಅವನಿಗೆಷ್ಟು ಧಮ್ ಎಂದು ಹೇಳಿದಾಗ ಶಾಸಕ ಹರ್ಷವರ್ಧನ್ ಸಮಜಾಯಿಷಿ ನೀಡಲು ಬಂದರು. ಆಗ ಹರ್ಷವರ್ಧನ್ ವಿರುದ್ಧವೂ ಸಚಿವರು ಗರಂ ಆಗಿದ್ದಾರೆ. ನಿನ್ನ ಕೆಲಸ ಏನು ಇದೆಯೋ ಅಷ್ಟು ಮಾತ್ರ ನನಗೆ ಹೇಳು. ನಾನು ಕೂಡ 40 ವರ್ಷದಿಂದ ಇಂತಹದ್ದನ್ನು ಕಂಡಿದ್ದೇನೆ. ಅವನ ವಿಚಾರ ನಾನು ನೋಡಿಕೊಳ್ಳುತ್ತೇನೆಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಆರೋಪಕ್ಕೆ ಸೋಮಣ್ಣ ತಿರುಗೇಟು ಒಂದು ಮನೆಯನ್ನೂ ಕೊಟ್ಟಿಲ್ಲವೆಂದು ಆರೋಪಿಸುತ್ತಾರೆ. ಸಿದ್ದರಾಮಯ್ಯ ಕಾಲದಲ್ಲಿ ಮಾಡಿದ ತಪ್ಪು ಸರಿಪಡಿಸಿದ್ದೇವೆ. ಅವರ ಅವಧಿಯಲ್ಲಾದ ಅಡೆತಡೆಗಳನ್ನು ಬಗೆಹರಿಸಿದ್ದೇನೆ. ಕೇಂದ್ರದ ಆ್ಯಪ್‌ನಲ್ಲಿ ಮಾಹಿತಿ ಅಪ್‌ಡೇಟ್ ಮಾಡಬೇಕಿತ್ತು. ರಾಜ್ಯ ಸರ್ಕಾರ ತಮ್ಮ ಆ್ಯಪ್‌ನಲ್ಲಿ ಅಪ್‌ಡೇಟ್ ಮಾಡಿದೆ. ಇದು ಸಿದ್ದರಾಮಯ್ಯನವರ ಕಾಲದಲ್ಲಿ ಆಗಿರುವ ಎಡವಟ್ಟು. ಸಿದ್ದರಾಮಯ್ಯ ಸೂಕ್ತ ಮಾಹಿತಿ ಇಲ್ಲದೆ ಮಾತಾಡುತ್ತಾರೆ ಅಂತ ಸಿದ್ದರಾಮಯ್ಯ ಹೇಳಿಕೆಗೆ ಸೋಮಣ್ಣ ತಿರುಗೇಟು ನೀಡಿದ್ದಾರೆ
ಮೇಕೆದಾಟು ಯೋಜನೆ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಮ್ಮಪ್ಪನಾಣೆ ನಾವೇ ಮೇಕೆದಾಟು ಯೋಜನೆ ಮಾಡುತ್ತೇವೆ. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಸುಭದ್ರ ಸರ್ಕಾರಗಳಿವೆ. ಎಲ್ಲವೂ ಸುಸೂತ್ರವಾಗಿ ಸಾಗುತ್ತಿವೆ, ಯಾರಿಗೂ ಚಿಂತೆ ಬೇಡ. ಕೆಲ ಶಾಸಕರ ಹೇಳಿಕೆಗಳಿಗೆ ಬೇರೆ ಬೇರೆ ಅರ್ಥ ಕಲ್ಪಿಸಬೇಡಿ. ಕೆಲವರಿಗೆ ಸಂಜೆಯಾದ್ರೆ ಅಲ್ಲಿ ಇಲ್ಲಿ ಮಾತಾಡುವ ಅಭ್ಯಾಸ. ಅಲ್ಲಿ ಇಲ್ಲಿ ಕೂತು ಮಾತನಾಡುವ ಅಭ್ಯಾಸ ನನಗೆ ಇಲ್ಲ ಅಂತ ಹೇಳಿದರು.
ಶಾಸಕ ನಾಗೇಂದ್ರಗೆ ಸಚಿವ ವಿ ಸೋಮಣ್ಣ ಪಾಠ ಸ್ಲಂ ಬಗ್ಗೆ ಶಾಸಕ ನಾಗೇಂದ್ರಗೆ ಸಚಿವ ವಿ ಸೋಮಣ್ಣ ಪಾಠ ಮಾಡಿದ್ದಾರೆ. ನಮ್ಮಿಂದ ಏನು ಬೇಕು ಎಲ್ಲವನ್ನೂ ಕೊಡುತ್ತೇವೆ. ಫಲಾನುಭವಿಗಳನ್ನು ಆಯ್ಕೆ ಮಾಡಿ. ನೀವು ಸಂಸದ ಪ್ರತಾಪ್ ಸಿಂಹ ಜತೆ ಕುಳಿತು ಪಟ್ಟಿ ಮಾಡಿ. ಶಾಸಕ ನಾಗೇಂದ್ರಗೆ ಸಲಹೆ ನೀಡಿ. ಸ್ಲಂ ಬಗ್ಗೆ ಸಿಎಂ ಬಳಿ ಹೋಗಿ ಕೇಳಿದರೆ ಆಗುತ್ತದೆ. ನಾನು ಕೇವಲ ಶಾಸಕನಾಗಿದ್ದೇನೆ, ನೀವು ಸಚಿವರಾಗಿದ್ದೀರಿ ಎಂದು ಸೋಮಣ್ಣ ಅಭಿಪ್ರಾಯಪಟ್ಟರು.
ಇದನ್ನೂ ಓದಿ
ಬಿಜೆಪಿ ಸರ್ಕಾರ ಬಂದಾಗಲೆಲ್ಲಾ ಅವರೇ ಸಚಿವರಾಗಬೇಕಾ? ನಮಗೆ ಸಚಿವರಾಗುವ ಯೋಗ್ಯತೆ ಇಲ್ಲವಾ? – ರೇಣುಕಾಚಾರ್ಯ ಗರಂ
ಮೈಸೂರಿನ ಕೆರೆಗಳಲ್ಲಿ ಅತಿಥಿಗಳ ಕಲರವ; ಚಳಿಗಾಲವೆಂದು ಮಂಗೋಲಿಯ, ರಷ್ಯಾದಿಂದ ಹಾರಿಬಂದ ಹೆಬ್ಬಾತುಗಳು
Published On - 1:45 pm, Mon, 24 January 22