ಇನ್ಮುಂದೆ BRT Tiger Reserve ಪ್ರವೇಶಿಸುವ-ನಿರ್ಗಮಿಸುವ ಎಲ್ಲ ವಾಹನಕ್ಕೆ ಪ್ರತ್ಯೇಕ ಪಾಸ್ ವ್ಯವಸ್ಥೆ, ಏನಿದರ ಉಪಯೋಗ?

| Updated By: ಸಾಧು ಶ್ರೀನಾಥ್​

Updated on: Dec 05, 2023 | 2:35 PM

ಈ ಬಿ.ಆರ್.ಟಿ ಟೈಗರ್ ರಿಸರ್ವ್ ರಸ್ತೆ ಬಿಳಿಗಿರಿ ರಂಗನ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುತ್ತೆ. ಹಾಗಾಗಿ ದಿನಕ್ಕೆ ಸಾವಿರಾರು ಮಂದಿ ಇದೆ ಈ ಮಾರ್ಗವನ್ನ ಅನುಸರಿಸುತ್ತಾರೆ. ಮೊದಲು ಬರಿ ಎಂಟ್ರಿ-ಎಕ್ಸಿಟ್ ಬಗ್ಗೆ ಮಾತ್ರ ಅರಣ್ಯ ಇಲಾಖೆ ಗಮನ ಹರಿಸಿತ್ತು ಈಗ ಒಂದು ಹೆಜ್ಛೆ ಮುಂದೆ ಹೋಗಿ ಬಿ.ಆರ್.ಟಿ ಪ್ರವೇಶಿಸುವ ಪ್ರತಿಯೊಂದು ವಾಹನಗಳಿಗೂ ಪಾಸ್ ವ್ಯವಸ್ಥೆ ಮಾಡಲಾಗಿದೆ.

ಇನ್ಮುಂದೆ BRT Tiger Reserve ಪ್ರವೇಶಿಸುವ-ನಿರ್ಗಮಿಸುವ ಎಲ್ಲ ವಾಹನಕ್ಕೆ ಪ್ರತ್ಯೇಕ ಪಾಸ್ ವ್ಯವಸ್ಥೆ, ಏನಿದರ ಉಪಯೋಗ?
ಬಿ.ಆರ್.ಟಿ. ಟೈಗರ್ ರಿಸರ್ವ್ ಪ್ರವೇಶಿಸುವ-ನಿರ್ಗಮಿಸುವ ಎಲ್ಲ ವಾಹನಕ್ಕೆ ಪ್ರತ್ಯೇಕ ಪಾಸ್ ವ್ಯವಸ್ಥೆ
Follow us on

ಇತ್ತೀಚಿನ ದಿನಗಳಲ್ಲಿ ವನ್ಯ ಮೃಗಗಳ ಬೇಟೆ (poachers) ಪ್ರಕರಣ ಹೆಚ್ಚಾಗುತ್ತಿದೆ. ಕಾಡು ಪ್ರಾಣಿಗಳ ಶಿಕಾರಿ ಯಥೇಚ್ಚವಾಗಿ ನಡೆಯುತ್ತಿದ್ದು ಕಾಡುಗಳ್ಳರ ಮೇಲೆ ಅರಣ್ಯ ಇಲಾಖೆ ಹದ್ದಿನ ಕಣ್ಣಿಡಲು ಮುಂದಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ನಿಮ್ಮ ಮುಂದೆ. ಕಣ್ಣಾಡಿಸಿದ ಕಡೆಯೆಲ್ಲಾ ದಟ್ಟ ಕಾನನ.. ಸ್ವಚ್ಛಂದವಾಗಿ ಒಡಾಟ ನಡೆಸುತ್ತಿರುವ ವನ್ಯ ಮೃಗಗಳು. ರಸ್ತೆಯ ಪಕ್ಕದಲ್ಲೇ ಬೆಳೆದು ನಿಂತಿರುವ ತೇಗ, ಬೀಟೆ. ಈ ಎಲ್ಲಾ ದೃಶ್ಯ ಕಣ್ಣಿಗೆ ರಾಚಿದ್ದು ಚಾಮರಾಜನಗರ ಜಿಲ್ಲೆ ಚಾಮರಾಜನಗರ (Chamarajanagar) ತಾಲೂಕಿನ ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ನಲ್ಲಿ (BRT Tiger Reserve). ಹೌದು ಇಂತಹ ದಟ್ಟ ಕಾನನದಲ್ಲಿ ಅನೇಕ ಪ್ರಾಣಿ ಪಕ್ಷಿಗಳ ಸಂಕುಲಗಳಿವೆ, ವನ್ಯ ಮೃಗಗಳಿವೆ. ಇಂತಹ ದಟ್ಟ ಕಾನನದಲ್ಲಿ ಈಗ ಕಾಡುಗಳ್ಳರ ಕಾಟ ಹೆಚ್ಚಾಗಿದೆ. ಜಿಂಕೆ, ಕಡವೆ, ಕಾಡು ಹಂದಿಗಳ ಶಿಕಾರಿ ಹೆಚ್ಚಾಗಿದೆ. ಹಾಗಾಗಿ ಇದಕ್ಕೆಲ್ಲ ಬ್ರೇಕ್ ಹಾಕಲು ಈಗ ಅರಣ್ಯ ಇಲಾಖೆ ಮುಂದಾಗಿದೆ. ಹಾಗಾಗಿ ಬಿ ಆರ್.ಟಿ ಪ್ರವೇಶಿಸುವ ಪ್ರತಿಯೊಂದು ವಾಹನಗಳಿಗೆ ಈಗ ಪ್ರತ್ಯೇಕ ಪಾಸ್ ವ್ಯವಸ್ಥೆ ಮಾಡಲಾಗಿದೆ.

ಈ ಬಿ.ಆರ್.ಟಿ ಟೈಗರ್ ರಿಸರ್ವ್ ರಸ್ತೆ ಬಿಳಿಗಿರಿ ರಂಗನ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುತ್ತೆ. ಹಾಗಾಗಿ ದಿನಕ್ಕೆ ಸಾವಿರಾರು ಮಂದಿ ಇದೆ ಈ ಮಾರ್ಗವನ್ನ ಅನುಸರಿಸುತ್ತಾರೆ. ಮೊದಲು ಬರಿ ಎಂಟ್ರಿ-ಎಕ್ಸಿಟ್ ಬಗ್ಗೆ ಮಾತ್ರ ಅರಣ್ಯ ಇಲಾಖೆ ಗಮನ ಹರಿಸಿತ್ತು ಈಗ ಒಂದು ಹೆಜ್ಛೆ ಮುಂದೆ ಹೋಗಿ ಬಿ.ಆರ್.ಟಿ ಪ್ರವೇಶಿಸುವ ಪ್ರತಿಯೊಂದು ವಾಹನಗಳಿಗೂ ಪಾಸ್ ವ್ಯವಸ್ಥೆ ಮಾಡಲಾಗಿದೆ.

Also read: ನನ್ನ ಆನೆಯನ್ನು ಮೈಸೂರಿಗೆ ಕಳಿಸಿಕೊಡಿ, ಇಲ್ಲ ನನ್ನನ್ನೂ ಅರ್ಜುನ ಜತೆ ಮಣ್ಣು ಮಾಡಿ: ಅಂಗಲಾಚಿದ ಮಾವುತ

ಮೊದಲನೇ ಚೆಕ್ ಪೋಸ್ಟ್ ಪ್ರವೇಶಿಸುವ ವಾಹನಕ್ಕೆ ಪಾಸ್ ನೀಡಲಾಗುತ್ತಿದ್ದು ಆ ವಾಹನ ಸವಾರರು ಎರಡನೇ ಚೆಕ್ ಪೋಸ್ಟ್ ನಲ್ಲಿ ಪ್ರವೇಶಿಸಿದ ವೇಳೆ ಆ ಪಾಸ್​​ ಅನ್ನು ಮತ್ತೊಮ್ಮೆ ಎಂಟ್ರಿ ಮಾಡಿಸಿಕೊಂಡು ಹೋಗಲೇ ಬೇಕಿದೆ. ಹಾಗಾಗಿ ಎಷ್ಟು ಮಂದಿ ಈ ರಸ್ತೆಯ ಮೂಲಕ ಪ್ರವೇಶಿಸಿದರು, ಎಷ್ಟು ವಾಹನಗಳು ಎಂಟ್ರಿ ಎಂಡ್ ಎಕ್ಸಿಟ್ ಆದವು.. ಅನ್ನೋದರ ಪಕ್ಕಾ ಮಾಹಿತಿ ದೊರೆಯಲಿದೆ.

ಇನ್ನು ತಿಂಗಳ ಹಿಂದೆಯಷ್ಟೇ ಬಂಡೀಪುರದ ಮದ್ದೂರು ರೇಂಜ್ ನಲ್ಲಿ ಕಾಡುಗಳ್ಳನೊರ್ವ ಫಾರೆಸ್ಟ್ ಆಫೀಸರ್ ಹಾರಿಸಿದ ಗುಂಡಿಗೆ ಬಲಿಯಾಗಿದ್ದ. ಕಡವೆ ಮಾಂಸ ಸಹ ಪತ್ತೆಯಾಗಿತ್ತು. ಅರಣ್ಯಾಧಿಕಾರಿಗಳ ಈ ಹೆಜ್ಜೆ ಬೇಟೆಗೆ ಬರುವ ಅಥವಾ ಕಾಡುಗಳ್ಳರ ಆರ್ಭಟಕ್ಕೆ ಬ್ರೇಕ್ ಹಾಕಲು ಉಪಯೋಗವಾಸದೀತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:32 pm, Tue, 5 December 23