ಸಿಪಿ ಯೋಗೇಶ್ವರ್ ಸಂಬಂಧಿ ರಿಯಲ್ಟರ್ ಮಹದೇವಯ್ಯ ಹತ್ಯೆಗೆ ಸುಪಾರಿ ನೀಡಲಾಗಿತ್ತೇ?
ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಮಹದೇವಯ್ಯ ಅವರನ್ನು ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಿರಬಹುದೆಂದು ಅನುಮಾನಿಸಲಾಗುತ್ತಿದೆ. ಅವರ ಹತ್ಯೆ ನಡೆಸಲು ಸುಪಾರಿ ನೀಡಲಾಗಿತ್ತು ಎಂಬ ಅಂಶ ಪೊಲೀಸರ ಗಮನಕ್ಕೆ ಬಂದಿದೆ. ಅರಣ್ಯ ಇಲಾಖೆಯ ನೆರವಿನಿಂದ ಪೊಲೀಸರು ರಾಮಾಪುತದ ಕಾಡು ಪ್ರದೇಶದಲ್ಲಿ ಮಹಾದೇವಯ್ಯ ಅವರ ಶವ ಪತ್ತೆ ಮಾಡಿದ್ದಾರೆ.
ಚಾಮರಾಜನಗರ: ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ (CP Yogeshwar) ಅವರ ಬಾವ ರಿಯಲ್ಟರ್ ಮಹದೇವಯ್ಯ (Mahadevaiah) ನಾಪತ್ತೆಯಾಗಿದ್ದನ್ನು ಮೂರು ದಿನಗಳ ಹಿಂದೆ ನಾವು ವರದಿ ಮಾಡಿದ್ದೆವು. ಆದರೆ ಇಂದು ಅವರು ಶವವಾಗಿ ಪತ್ತೆಯಾಗಿದ್ದಾರೆ. ಜಿಲ್ಲೆಯ ಹನೂರು ತಾಲ್ಲೂಕಿನ ರಾಮಾಪುರ (Ramapur) ಬಳಿಯ ನಿರ್ಜನ ಪ್ರದೇಶದಲ್ಲಿ ಅವರ ರಕ್ತಸಿಕ್ತ ದೇಹ ಮೂಟೆಯೊಂದರಲ್ಲಿ ಪತ್ತೆಯಾಗಿದೆ. ಅವರ ತಲೆಮೇಲೆ ಕಲ್ಲಿ ಎತ್ತಿಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ಹಂತಕರು ಮಹದೇವಯ್ಯರನ್ನು ಅವರ ಕಾರಲ್ಲೇ ಕಿಡ್ನ್ಯಾಪ್ ಮಾಡಿದ್ದರು. ಕೊಲೆ ನಡೆದ ಸ್ಥಳದಿಂದ ಸುಮಾರು 6 ಕಿಲೋಮೀಟರ್ ದೂರ ಅವರ ದೇಹ ಬಿಸಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಾಮಾಪುರದಲ್ಲಿರುವ ಅಂಗಡಿಯೊಂದರ ಮುಂದೆ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಅವರ ಕಾರು ಓಡಾಡಿದ ದೃಶ್ಯಗಳು ಸೆರೆಯಾಗಿವೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos