ತಿಂಗಳಿಗೆ ಕೇವಲ 2ರೂ ಸಂಬಳ, ಒಂಭತ್ತು ವರ್ಷದಿಂದ ಅದನ್ನೂ ಕೊಟ್ಟಿಲ್ಲ: ಉಪಲೋಕಾಯುಕ್ತರ ಮುಂದೆ ಅಳಲು ತೋಡಿಕೊಂಡ ಅರ್ಚಕ

| Updated By: ಆಯೇಷಾ ಬಾನು

Updated on: Aug 20, 2022 | 11:51 AM

ಮುಜರಾಯಿ ಇಲಾಖೆಗೆ ಸೇರಿದ ಜನಾರ್ಧನ ಸ್ವಾಮಿ ದೇವಾಲಯಕ್ಕೆ ಉಪಲೋಕಾಯುಕ್ತ ಕೆ.ಎಸ್.ಫಣೀಂದ್ರ ಭೇಟಿ ನೀಡಿದ್ದರು. ಈ ವೇಳೆ ಅರ್ಚಕ ಅನಂತಪ್ರಸಾದ್ ಕಣ್ಣೀರು ಹಾಕಿದ್ದಾರೆ.

ತಿಂಗಳಿಗೆ ಕೇವಲ 2ರೂ ಸಂಬಳ, ಒಂಭತ್ತು ವರ್ಷದಿಂದ ಅದನ್ನೂ ಕೊಟ್ಟಿಲ್ಲ: ಉಪಲೋಕಾಯುಕ್ತರ ಮುಂದೆ ಅಳಲು ತೋಡಿಕೊಂಡ ಅರ್ಚಕ
ಉಪಲೋಕಾಯುಕ್ತರ ಮುಂದೆ ಅಳಲು ತೋಡಿಕೊಂಡ ಅರ್ಚಕ
Follow us on

ಚಾಮರಾಜನಗರ: ಮೈಸೂರು ರಾಜರ ಕಾಲದಲ್ಲಿ ಇದ್ದ ಸಂಬಳ ಈಗಲೂ ಮುಂದುವರೆದಿದ್ದು 9 ವರ್ಷದಿಂದ ಆ ಸಂಬಂಳವೂ ಸಿಕ್ಕಿಲ್ಲ ಎಂದು ಉಪಲೋಕಾಯುಕ್ತರ ಮುಂದೆ ಅರ್ಚಕ ಗೋಳು ತೋಡಿಕೊಂಡ ಘಟನೆ ನಡೆದಿದೆ. ಚಾಮರಾಜನಗರದ ಹರಳುಕೋಟೆ ಜನಾರ್ಧನಸ್ವಾಮಿ ದೇವಾಲಯದ ಅರ್ಚಕ ಅನಂತಪ್ರಸಾದ್, ತಿಂಗಳಿಗೆ ಕೇವಲ ಎರಡು ರೂಪಾಯಿ ಸಂಬಳ, ಒಂಭತ್ತು ವರ್ಷದಿಂದ ಅದನ್ನೂ ಕೊಟ್ಟಿಲ್ಲ ಎಂದು ಗೋಳಾಡಿದ್ದಾರೆ.

ಮುಜರಾಯಿ ಇಲಾಖೆಗೆ ಸೇರಿದ ಜನಾರ್ಧನ ಸ್ವಾಮಿ ದೇವಾಲಯಕ್ಕೆ ಉಪಲೋಕಾಯುಕ್ತ ಕೆ.ಎಸ್.ಫಣೀಂದ್ರ ಭೇಟಿ ನೀಡಿದ್ದರು. ಈ ವೇಳೆ ಅರ್ಚಕ ಅನಂತಪ್ರಸಾದ್ ಕಣ್ಣೀರು ಹಾಕಿದ್ದಾರೆ. ಪಡಿತರಕ್ಕೆ ತಿಂಗಳಿಗೆ ರೂ.4.74 ಕೊಡ್ತಾರೆ. ಅದು ಒಂದು ದಿನದ ಎಣ್ಣೆ ಬತ್ತಿಗೂ ಸಾಲಲ್ಲ. ಭಕ್ತರು ನೀಡುವ ಕಾಣಿಕೆಯಿಂದ ದೇವರಿಗೆ ಹೂವಿನ ಅಲಂಕಾರ ಮಾಡ್ತೀವಿ. ಲೈಟ್ ಬಿಲ್ ಸಹ ನಾವೇ ಕಟ್ಟಬೇಕು ಎಂದು ಉಪಲೋಕಾಯುಕ್ತರ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಸದ್ಯ ಸೋಮವಾರದೊಳಗೆ ಈ ಬಗ್ಗೆ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಉಪಲೋಕಾಯುಕ್ತ, ತಹಸೀಲ್ದಾರ್ಗೆ ಸೂಚನೆ ನೀಡಿದ್ದಾರೆ. ಅಧಿಕೃತವಾಗಿ ಅರ್ಜಿ ನೀಡಿದಲ್ಲಿ ಸಂಬಳ ಹೆಚ್ಚಳದ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡ್ತೇನೆ ಎಂದು ಉಪಲೋಕಾಯುಕ್ತ ಕೆ.ಎಸ್.ಫಣೀಂದ್ರ, ಅರ್ಚಕರಿಗೆ ಭರವಸೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸಾವರ್ಕರ್ ಆಯ್ತು ಈಗ ಸಂಗೊಳ್ಳಿ ರಾಯಣ್ಣ: ರಾಯಣ್ಣ ಭಾವಚಿತ್ರ ಹರಿದು ಕೃತ್ಯ, ಅಭಿಮಾನಿಗಳಿಂದ ಪ್ರತಿಭಟನೆ

ಬೆಳಗಾವಿ: ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಾವರ್ಕರ್(Veer Savarkar) ವಾರ್ ಶುರುವಾಗಿದೆ. ಶಿವಮೊಗ್ಗ, ಮಂಗಳೂರು, ತುಮಕೂರಿನಲ್ಲಿ ಸಾವರ್ಕರ್ ಭಾವಚಿತ್ರ ವಿಚಾರವಾಗಿ ಗಲಾಟೆಗಳು ನಡೆದಿವೆ. ಇದರ ನಡುವೆ ಈಗ ಮತ್ತೊಂದು ಹೊಸ ಗಲಾಟೆ ಶರುವಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಖನಗಾಂವ್ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ(Sangolli Rayanna) ಭಾವಚಿತ್ರಕ್ಕೆ ಅಪಮಾನ ಮಾಡಲಾಗಿದೆ.

ತಡರಾತ್ರಿ ಕೆಲ ಕಿಡಿಗೇಡಿಗಳು ಸಂಗೊಳ್ಳಿ ರಾಯಣ್ಣ ಭಾವಚಿತ್ರ ಹರಿದು ದರ್ಪ ಮೆರೆದಿದ್ದಾರೆ. ಕಿಡಿಗೇಡಿಗಳ ಕೃತ್ಯವನ್ನ ಖಂಡಿಸಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಟೈರ್ಗೆ ಬೆಂಕಿ ಹಚ್ಚಿ ಗ್ರಾಮದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತಿದೆ. ಗ್ರಾಮದ ರಸ್ತೆಗೆ ರಾಯಣ್ಣ ಸರ್ಕಲ್ ಎಂದು ಹೆಸರಿಡಿ ಎಂದು ಫೋಟೋ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ. ಗೋಕಾಕ್ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published On - 11:06 am, Sat, 20 August 22