ವಿದ್ಯುತ್ ಸ್ಪರ್ಶಿಸಿ ಹುಟ್ಟುಹಬ್ಬದ ದಿನವೇ ಮೂರು ವರ್ಷದ ಬಾಲಕಿ ಸಾವು

ಆಟ ಆಡುವ ವೇಳೆ ಪಂಪ್‌ಸೆಟ್ ಮುಟ್ಟಿದ ನಿವೇದಿತಾಗೆ ವಿದ್ಯುತ್ ಸ್ಪರ್ಶಿಸಿ ಅವಘಡ ಸಂಭವಿಸಿದೆ. ಸ್ಥಳಕ್ಕೆ ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿದ್ಯುತ್ ಸ್ಪರ್ಶಿಸಿ ಹುಟ್ಟುಹಬ್ಬದ ದಿನವೇ ಮೂರು ವರ್ಷದ ಬಾಲಕಿ ಸಾವು
ನಿವೇದಿತಾ
Edited By:

Updated on: Sep 16, 2021 | 9:56 AM

ಚಾಮರಾಜನಗರ: ವಿದ್ಯುತ್ ಸ್ಪರ್ಶಿಸಿ, ಹುಟ್ಟುಹಬ್ಬದ ದಿನವೇ ಬಾಲಕಿ ಮೃತಪಟ್ಟ ಅಮಾನವೀಯ ಘಟನೆ ಚಾಮರಾಜನಗರ ತಾಲೂಕಿನ ಕೆಂಗಾಕಿ ಗ್ರಾಮದಲ್ಲಿ ನಡೆದಿದೆ. ತೋಟದ ಮನೆಯಲ್ಲಿ ವಾಸವಾಗಿದ್ದ ನಿವೇದಿತಾ(3) ಮೃತ ದುರ್ದೈವಿ.

ಮೃತ ನಿವೇದಿತಾಳ 3ನೇ‌ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮನೆಯಲ್ಲಿ ಸಿದ್ಧತೆಗಳು ನಡೆಯುತ್ತಿದ್ದವು. ಮನೆಯವರೆಲ್ಲ ಕೇಕ್ ತರಿಸಿ ಪುಟ್ಟ ಮಗಳ ಹುಟ್ಟ ಹಬ್ಬದ ಸಂಭ್ರಮವನ್ನು ಆನಂದಿಸುತ್ತಿದ್ದರು. ಆದ್ರೆ ಇವರ ಸಂತೋಷಕ್ಕೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಕುಟುಂಬಕ್ಕೆ ಆನಂದ ತಂದು ಕೊಟ್ಟಿದ್ದ ಪುಟ್ಟ ಬಾಲಕಿ ನಿವೇದಿತ ಮೃತಪಟ್ಟಿದ್ದಾಳೆ. ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ವಿಧಿಯಾಟಕ್ಕೆ ಕುಟುಂಬಸ್ಥರು ಶಪಿಸುತ್ತಿದ್ದಾರೆ.

ನಿವೇದಿತಾ ಕುಟುಂಬ ತೋಟದ ಮನೆಯಲ್ಲಿ ವಾಸವಾಗಿದೆ. ಆಟ ಆಡುವ ವೇಳೆ ಪಂಪ್‌ಸೆಟ್ ಮುಟ್ಟಿದ ನಿವೇದಿತಾಗೆ ವಿದ್ಯುತ್ ಸ್ಪರ್ಶಿಸಿ ಅವಘಡ ಸಂಭವಿಸಿದೆ. ಸ್ಥಳಕ್ಕೆ ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೊನ್ನವಳ್ಳಿಯಲ್ಲಿ ಕತ್ತು ಸೀಳಿ ಜೆಸಿಬಿ ಆಪರೇಟರ್ ಹತ್ಯೆ
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ನೆಲಮನೆ ಹೊನ್ನವಳ್ಳಿ ಬಳಿ ಜೆಸಿಬಿ ಆಪರೇಟರ್ ಆಗಿದ್ದ ಜಲೇಂದ್ರ(31) ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ನಿನ್ನೆ ರಾತ್ರಿ ಜಲೇಂದ್ರ ಮನೆಯಿಂದ ಹೊರಗೆ ಹೋಗಿದ್ದ. ಇಂದು ಬೆಳಿಗ್ಗೆ ಜಲೇಂದ್ರ ಸಹೋದರ ಡೈರಿಗೆ ಹಾಲು ಹಾಕಲು ಹೋದಾಗ ಹೊಲದ ಬಳಿ ಶವ ಪತ್ತೆಯಾಗಿದೆ. ಜಲೇಂದ್ರ ಶವದ ಪಕ್ಕದಲ್ಲಿ ಬಿಯರ್ ಬಾಟಲಿಗಳು ಸಿಕ್ಕಿವೆ. ಸ್ಥಳಕ್ಕೆ ಅರಕಲಗೂಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯ ಕುಚಿಕು ಗೆಳೆಯ ರಾಜು ಪಾಟೀಲ್ ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿ

Published On - 8:28 am, Thu, 16 September 21