ಮಲೆ ಮಹದೇಶ್ವರ ವನ್ಯಧಾಮದಲ್ಲಿ ಸಫಾರಿ ಆರಂಭ: ಸಫಾರಿ ಸಮಯ, ದರ ವಿವರ ಇಲ್ಲಿದೆ

Male Mahadeshwara Wildlife Safari: ಪರಿಸರ ಪ್ರವಾಸೋದ್ಯಮ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಗಡಿಜಿಲ್ಲೆ ಚಾಮರಾಜನಗರದಲ್ಲಿ ಇಂದಿನಿಂದ ಮತ್ತೊಂದು ವನ್ಯಜೀವಿ ಸಫಾರಿ ಆರಂಭಗೊಂಡಿದೆ. ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ಗಡಿಜಿಲ್ಲೆ ಚಾಮರಾಜನಗರದಲ್ಲಿ ಈಗಾಗಲೇ ಮೂರು ಸಫಾರಿ ಕೇಂದ್ರಗಳಿದ್ದು, ಇದೀಗ ನಾಲ್ಕನೇ ಸಫಾರಿ ಕೇಂದ್ರ ಆರಂಭವಾಗಿದೆ. ಹಾಗಾದ್ರೆ, ಯಾವುದು ಈ ಸಫಾರಿ? ಸಫಾರಿ ಸಮಯ ಹಾಗೂ ಸಫಾರಿ ಶುಲ್ಕ ವಿವರ ಈ ಕೆಳಗಿನಂತಿದೆ.

ಮಲೆ ಮಹದೇಶ್ವರ ವನ್ಯಧಾಮದಲ್ಲಿ ಸಫಾರಿ ಆರಂಭ: ಸಫಾರಿ ಸಮಯ, ದರ ವಿವರ ಇಲ್ಲಿದೆ
Updated By: ರಮೇಶ್ ಬಿ. ಜವಳಗೇರಾ

Updated on: Dec 02, 2023 | 4:53 PM

ಚಾಮರಾನಗರ, (ಡಿಸೆಂಬರ್ 02) ಚಾಮರಾಜನಗರ (Chamarajanagar) ಜಿಲ್ಲೆಯ ಬಂಡೀಪುರ ಹಾಗು ಬಿ‌ಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿ ಇದೆ. ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ಗಡಿಜಿಲ್ಲೆ ಚಾಮರಾಜನಗರದಲ್ಲಿ ಈಗಾಗಲೇ ಬಂಡೀಪುರ, ಕೆ.ಗುಡಿ, ಗೋಪಿನಾಥಂನಲ್ಲಿ ವನ್ಯಜೀವಿ ಸಫಾರಿ ಇದ್ದು, ಇದರ ಜೊತೆ  ಇಂದಿನಿಂದ ಮತ್ತೊಂದು ಮಲೆ ಮಹದೇಶ್ವರ ವನ್ಯಜೀವಿಧಾಮ (Male Mahadeshwara Wildlife Safari) ವ್ಯಾಪ್ತಿಯಲ್ಲಿ ಪಿ‌.ಜಿ.ಪಾಳ್ಯ ಸಮೀಪ ಸಫಾರಿ ಆರಂಭಗೊಂಡಿದೆ.

ಇಂದು(ಡಿಸೆಂಬರ್ 02) ಹನೂರು ಶಾಸಕ ಎಂ.ಆರ್.ಮಂಜುನಾಥ್ ಅವರು ಮಹದೇಶ್ವರ ವನ್ಯಧಾಮದ ಸಫಾರಿಗೆ ಚಾಲನೆ ನೀಡಿದರು. ಇದರೊಂದಿಗೆ ಇದು ಚಾಮರಾಜನಗರ ಜಿಲ್ಲೆಯ ನಾಲ್ಕನೇ ಸಫಾರಿ ಕೇಂದ್ರವಾಗಿದೆ. ಈಗಾಗಲೇ ಬಂಡೀಪುರ, ಬಿಆರ್​ಟಿಯ ಕೆ.ಗುಡಿಯಲ್ಲಿ ಸಫಾರಿ ವ್ಯವಸ್ಥೆ ಇದೆ. ಹಾನೂರು ತಾಲೂಕಿನ ಕಾವೇದಿ ವನ್ಯಧಾಮದ ಗೋಪಿನಾಥಂನಲ್ಲಿ ಪ್ರಯೋಗಿಕವಾಗಿ ಸಫಾರಿ ಆರಂಭವಾಗಿದೆ. ಇದರ ಬೆನ್ನಲ್ಲೇ ಇದೀಗ ಮಲೆ ಮಹದೇಶ್ವರ ವನ್ಯಧಾಮದಲ್ಲೂ ಸಫಾರಿ ಆರಂಭವಾಗಲಿದ್ದು, ಹುಲಿ, ಚಿರತೆ ಆನೆ, ಕಾಡೆಮ್ಮೆ, ಜಿಂಕೆ, ವೈವಿಧ್ಯಮಯ ಪಕ್ಷಿಗಳು ಸೇರಿದಂತೆ ಎಲ್ಲಾ ಪ್ರಾಣಿಗಳನ್ನು ಇನ್ಮುಂದೆ ಪ್ರವಾಸಿಗರು ಕಣ್ತುಂಬಿಕೊಳ್ಳಬಹುದಾಗಿದೆ.

ಸಫಾರಿ ಸಮಯ ಮತ್ತು ದರ

ಪ್ರವಾಸಿಗರಿಗೆ ಬೆಳಿಗ್ಗೆ ಮತ್ತು ಸಂಜೆ ಸಫಾರಿ ಸೌಲಭ್ಯ ಇದ್ದು, ಬೆಳಿಗ್ಗೆ 6 ರಿಂದ 9 ಗಂಟೆ ಹಾಗೂ ಮಧ್ಯಾಹ್ನ 3 ರಿಂದ ಸಂಜೆ 6 ಗಂಟೆಯವರೆಗೆ ಸಫಾರಿ ಸಮಯ ನಿಗದಿಪಡಿಸಲಾಗಿದೆ. ಇನ್ನು ವಯಸ್ಕರಿಗೆ 400 ರೂ. ಹಾಗೂ ಮಕ್ಕಳಿಗೆ 200 ರೂಪಾಯಿ ಸಫಾರಿ ದರ ನಿಗದಿಗೊಳಿಸಲಾಗಿದೆ. ಇದರ ಜೊತೆ ವಾಹನ ಪ್ರವೇಶಕ್ಕೆ 100 ಶುಲ್ಕ ಫಿಕ್ಸ್ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ