IMA ಬಹುಕೋಟಿ ಅವ್ಯವಹಾರ ಕೇಸ್‌: ಮನ್ಸೂರ್ ಅಲಿಖಾನ್ ಸೇರಿದಂತೆ 7 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ

|

Updated on: Mar 12, 2021 | 10:05 PM

IMA ಬಹುಕೋಟಿ ಅವ್ಯವಹಾರ ಕೇಸ್​ಗೆ ಸಂಬಂಧಿಸಿದಂತೆ ಬೆಂಗಳೂರಿನ ಸಿಬಿಐ ವಿಶೇಷ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಐಎಂಎ ಸಂಸ್ಥಾಪಕ ಮನ್ಸೂರ್ ಅಲಿಖಾನ್ ಸೇರಿದಂತೆ 7 ಆರೋಪಿಗಳ ವಿರುದ್ಧ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಬಿಡಿಎ ಇಇ ಪಿ.ಡಿ.ಕುಮಾರ್ ವಿರುದ್ಧವೂ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ.

IMA ಬಹುಕೋಟಿ ಅವ್ಯವಹಾರ ಕೇಸ್‌: ಮನ್ಸೂರ್ ಅಲಿಖಾನ್ ಸೇರಿದಂತೆ 7 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ
ಮನ್ಸೂರ್​ ಖಾನ್​
Follow us on

IMA ಬಹುಕೋಟಿ ಅವ್ಯವಹಾರ ಕೇಸ್​ಗೆ ಸಂಬಂಧಿಸಿದಂತೆ ಬೆಂಗಳೂರಿನ ಸಿಬಿಐ ವಿಶೇಷ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಐಎಂಎ ಸಂಸ್ಥಾಪಕ ಮನ್ಸೂರ್ ಅಲಿಖಾನ್ ಸೇರಿದಂತೆ 7 ಆರೋಪಿಗಳ ವಿರುದ್ಧ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಬಿಡಿಎ ಇಇ ಪಿ.ಡಿ.ಕುಮಾರ್ ವಿರುದ್ಧವೂ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ.

ಗೋವಿಂದಪುರ ಡ್ರಗ್ಸ್‌ ಕೇಸ್: ಟಾಲಿವುಡ್‌ ನಟ ಸೇರಿದಂತೆ ಐವರಿಗೆ ನೋಟಿಸ್ ಜಾರಿ
ಗೋವಿಂದಪುರ ಡ್ರಗ್ಸ್‌ ಕೇಸ್ ಸಂಬಂಧ ಟಾಲಿವುಡ್‌ ನಟ ಸೇರಿದಂತೆ ಐವರಿಗೆ ನೋಟಿಸ್ ಜಾರಿಯಾಗಿದೆ. ಬೆಂಗಳೂರಿನ ಗೋವಿಂದಪುರ ಠಾಣೆ ಪೊಲೀಸರಿಂದ ನೋಟಿಸ್‌ ಜಾರಿಯಾಗಿದೆ. ನಟ ತನಿಶ್, ನಿರ್ಮಾಪಕ ಸೇರಿ ಐವರಿಗೆ ನೋಟಿಸ್‌ ಜಾರಿಯಾಗಿದೆ. ನಾಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.

ಪಿಸ್ತೂಲ್​ನಿಂದ ಶೂಟ್ ಮಾಡಿಕೊಂಡು ವ್ಯಕ್ತಿ ಆತ್ಮಹತ್ಯೆ
ಪಿಸ್ತೂಲ್​ನಿಂದ ಶೂಟ್ ಮಾಡಿಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಬಸವೇಶ್ವರನಗರದಲ್ಲಿ ನಡೆದಿದೆ. ಕಮಲಾಕರ್ ಮಡಿವಾಳ(29) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ಕಮಲಾಕರ್​ ಪಿಸ್ತೂಲ್​ನಿಂದ ತಲೆಗೆ ಶೂಟ್ ಮಾಡಿಕೊಂಡು ಅತ್ಮಹತ್ಯೆಗೆ ಶರಣಾಗಿದ್ದಾರೆ. ಕಮಲಾಕರ್ ಪ್ರೈವೇಟ್ ಗನ್​ಮ್ಯಾನ್ ಆಗಿ ಕೆಲಸ ಮಾಡ್ತಿದ್ದ. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಮಲಾಕರ್ ಮಡಿವಾಳ

ರಥದ ಚಕ್ರದಡಿ ಸಿಲುಕಿ ಗಾಯಗೊಂಡಿದ್ದ ಭಕ್ತ ಸಾವು
ರಥದ ಚಕ್ರದಡಿ ಸಿಲುಕಿ ಗಾಯಗೊಂಡಿದ್ದ ಭಕ್ತ ಸಾವನ್ನಪ್ಪಿರುವ ಘಟನೆ ನಡೆದಿದೆ. ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಮೇಶ್ ಸಾಸನೂರ ಎಂಬುವವರು ಸಾವನ್ನಪ್ಪಿದ್ದಾರೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದಲ್ಲಿ ಮಾರ್ಚ್‌ 5ರಂದು ನಡೆದಿದ್ದ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಮೇಶ್​ ಕೊನೆಯುಸಿರೆಳೆದಿದ್ದಾರೆ.

ಗ್ರಾಮ ದೇವತೆಯ ಜಾತ್ರಾ ಮಹೋತ್ಸವದಲ್ಲಿ ದುರಂತ ನಡೆದಿತ್ತು. ಹುಣಸಗಿ ಪೊಲೀಸ್ ಠಾಣೆಯಲ್ಲಿ ಕೇಸ್‌ ದಾಖಲಾಗಿತ್ತು.

ರಮೇಶ್ ಸಾಸನೂರ

ನಾಪತ್ತೆ ಆಗಿದ್ದ ವೃದ್ಧ ಸೀಗೇಕೋಟೆ ಕೆರೆಯಲ್ಲಿ ಶವವಾಗಿ ಪತ್ತೆ
ನಾಪತ್ತೆ ಆಗಿದ್ದ ವೃದ್ಧ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಪ್ರಕರಣ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸೀಗೇಕೋಟೆಯಲ್ಲಿ ನಡೆದಿದೆ. ಕೆರೆಯಲ್ಲಿ ಅಳಿಮಾರನಹಳ್ಳಿಯ ನಾಗರಾಜ್(67) ಎಂಬ ವೃದ್ಧನ ಶವ ಪತ್ತೆಯಾಗಿದೆ.

ಅಂದ ಹಾಗೆ, ಮೃತ ನಾಗರಾಜ್ ರಾಮನಗರ CEN ಠಾಣೆ ಇನ್​ಸ್ಪೆಕ್ಟರ್ ಅಶೋಕ್ ಕುಮಾರ್ ತಂದೆ. ಮಾರ್ಚ್ 8ರಂದು ನಾಪತ್ತೆಯಾಗಿದ್ದ ನಾಗರಾಜ್ ಇಂದು ಹೆಣವಾಗಿ ಪತ್ತೆಯಾಗಿದ್ದಾರೆ. ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೀಗೇಕೋಟೆ ಕೆರೆ

ಕಿರಾಣಿ ಶಾಪ್​ನಲ್ಲಿ ಮಹಿಳೆಯ ಕೈಚಳಕ: ಅಡುಗೆ ಎಣ್ಣೆ ಕಳ್ಳತನ
ಮಹಿಳೆಯೊಬ್ಬಳು ಅಡುಗೆ ಎಣ್ಣೆ ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ಮಹದೇವ್ ಕಿರಾಣಿ ಶಾಪ್​ನಲ್ಲಿ ಮಹಿಳೆಯ ಕೈಚಳಕ ಸೆರೆಯಾಗಿದೆ.
ಅಂಗಡಿ ಮಾಲೀಕ ಕೆಳಗೆ ನೋಡ್ತಿದ್ದಂತೆ ಎಣ್ಣೆ ಕ್ಯಾನ್ ಕಳವು ಮಾಡಿದ ಮಹಿಳೆ ತನ್ನವರ ಮೂಲಕ ಅದನ್ನು ಸಾಗಿಸದ್ದಾರೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕಿರಾಣಿ ಶಾಪ್​ನಲ್ಲಿ ಮಹಿಳೆಯ ಕೈಚಳಕ

ಎಣ್ಣೆ ಕ್ಯಾನ್ ಕಳವು ಮಾಡಿದ ಮಹಿಳೆ ತನ್ನವರ ಮೂಲಕ ಅದನ್ನು ಸಾಗಿಸದ್ದಾರೆ

ಇದನ್ನೂ  ಓದಿ: ‘ದೊಡ್ಡ ತಿಮಿಂಗಲಗಳನ್ನು ಇನ್ನೂ ವಶಕ್ಕೆ ಪಡೆದಿಲ್ಲ.. ಆರೋಪಿಗಳಿಗೆ ಬುದ್ಧಿ ಕಲಿಸಬೇಕಾದ್ರೆ ಎಲ್ಲರನ್ನೂ ಬಂಧಿಸಬೇಕು’

Published On - 9:42 pm, Fri, 12 March 21