ಮೈಸೂರು: ನಂಜನಗೂಡಿನಲ್ಲಿ ರಥೋತ್ಸವ ವೇಳೆ ವಿಘ್ನ; ಪ್ರದಕ್ಷಿಣೆ ಮುನ್ನವೇ ವಿಗ್ರಹ ಇಳಿಸಿದ ಅರ್ಚಕರು

|

Updated on: Mar 26, 2021 | 11:20 AM

ದಕ್ಷಿಣಕಾಶಿ ನಂಜನಗೂಡಿನಲ್ಲಿ ಪಾರ್ವತಿ ಅಮ್ಮನವರ ರಥ ಎಳೆಯುವಾಗ ರಥದ ಚಕ್ರ ಮುರಿದು ಹೋಯಿತು. ರಥದ ಬಲ ಭಾಗದ ಮುಂಬದಿ ಚಕ್ರ ಮುರಿದು ಹೋಗಿದ್ದು, ಮುರಿದ ಚಕ್ರದಿಂದಲೆ ತೇರನ್ನು ಎಳೆಯಲು ಭಕ್ತರು ಪ್ರಯತ್ನಿಸಿದರು. ಆದರೆ ಮುರಿದು ಹೋದ ಚಕ್ರದಿಂದ ತೇರು ಮುಂದೆ ಸಾಗಲಿಲ್ಲ.

ಮೈಸೂರು: ನಂಜನಗೂಡಿನಲ್ಲಿ ರಥೋತ್ಸವ ವೇಳೆ ವಿಘ್ನ; ಪ್ರದಕ್ಷಿಣೆ ಮುನ್ನವೇ ವಿಗ್ರಹ ಇಳಿಸಿದ ಅರ್ಚಕರು
ನಂಜನಗೂಡು ರಥೋತ್ಸವ
Follow us on

ಮೈಸೂರು: ದೇಶದಲ್ಲಿ ಕೊರೊನಾ ಎರಡನೇ ಅಲೆ ಶುರುವಾಗಿದೆ. ಇಡೀ ದೇಶವೇ ಕೊರೊನಾ ಸೋಂಕಿನ ಭೀತಿಯಲ್ಲಿದೆ. ಈ ನಡುವೆ ರಾಜ್ಯದಲ್ಲಿ ಕೆಲವು ಕಡೆಗಳಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ. ಸರ್ಕಾರದ ಮಾರ್ಗಸೂಚಿಯನ್ವಯ ಜಿಲ್ಲೆಯ ನಂಜನಗೂಡಿನಲ್ಲಿ ಸರಳವಾಗಿ ರಥೋತ್ಸವ ನಡೆಯಿತು. ಈ ವೇಳೆ ರಥದ ಚಕ್ರ ಮುರಿದು ಹೋಗಿ ಜಾತ್ರೆಯ ಆರಂಭದಲ್ಲಿ ಅಪಶಕುನ ಎದುರಾಯಿತು. ಚಕ್ರ ಮುರಿದ ರಥವನ್ನೇ ಭಕ್ತರು ಎಳೆಯಲು ಪ್ರಯತ್ನಿಸಿದರು. ಆದರೆ ರಥ ಮುಂದೆ ಸಾಗಲಿಲ್ಲ. ಇದರ ಪರ್ಯಾಯವಾಗಿ  ಅರ್ಚಕರು ಪ್ರದಕ್ಷಿಣೆಗೂ ಮುನ್ನವೇ ವಿಗ್ರಹವನ್ನು ರಥದಿಂದ ಇಳಿಸಿ ಮತ್ತೊಂದು ರಥದಲ್ಲಿ ವಿಗ್ರವನ್ನು ಕೂರಿಸಿ ರಥ ಎಳೆದರು.

ದಕ್ಷಿಣಕಾಶಿ ನಂಜನಗೂಡಿನಲ್ಲಿ ಪಾರ್ವತಿ ಅಮ್ಮನವರ ರಥ ಎಳೆಯುವಾಗ ರಥದ ಚಕ್ರ ಮುರಿದು ಹೋಯಿತು. ರಥದ ಬಲ ಭಾಗದ ಮುಂಬದಿ ಚಕ್ರ ಮುರಿದು ಹೋಗಿದ್ದು, ಮುರಿದ ಚಕ್ರದಿಂದಲೆ ತೇರನ್ನು ಎಳೆಯಲು ಭಕ್ತರು ಪ್ರಯತ್ನಿಸಿದರು. ಆದರೆ ಮುರಿದು ಹೋದ ಚಕ್ರದಿಂದ ತೇರು ಮುಂದೆ ಸಾಗಲಿಲ್ಲ. ಈ ಕಾರಣ ಸಂಬಂಧಪಟ್ಟ ಅರ್ಚಕರು ಪ್ರದಕ್ಷಿಣೆ ಮುಗಿಯುವ ಮುನ್ನವೇ ತೇರಿನಿಂದ ಅಮ್ಮನವರ ವಿಗ್ರಹವನ್ನು ಇಳಿಸಿದರು.

ಪಾರ್ವತಿ ಅಮ್ಮ

ಪ್ರತಿ ವರ್ಷ ದೇವಾಲಯದ ಸುತ್ತ, ತೇರಿನ ಬೀದಿಯಲ್ಲಿ ಲಕ್ಷಾಂತರ ಭಕ್ತರು ಕಿಕ್ಕಿರಿದು ಸೇರುತ್ತಿದ್ದರು. ಆದರೆ ಈ ಬಾರಿ ಕೊರೊನಾ ಹಾವಳಿ ಕಾರಣ ದೊಡ್ಡ ಜಾತ್ರೆಯನ್ನು ಸರಳವಾಗಿ ಆಚರಿಸಿದ್ದು, ಜಿಲ್ಲಾಡಳಿತ ಚಿಕ್ಕ ತೇರಲ್ಲಿ ಶ್ರೀಕಂಠೇಶ್ವರನ ರಥೋತ್ಸವವನ್ನು ನಡೆಸಿತು. ಗಣಪತಿ, ನಂಜುಂಡೇಶ್ವರ, ಪಾರ್ವತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ ಉತ್ಸವಮೂರ್ತಿಗಳನ್ನು ತೇರುಗಳು ಹೊತ್ತು ಸಾಗಿದವು. ಈ ರಥೋತ್ಸವಕ್ಕೆ ಪಾಸ್ ಇದ್ದ ಸ್ಥಳೀಯ ಭಕ್ತರಿಗೆ ಮಾತ್ರ ಅವಕಾಶವನ್ನು ನೀಡಲಾಗಿದ್ದು, ಬೇರೆ ಜಿಲ್ಲೆ ಹಾಗೂ ಅನ್ಯ ರಾಜ್ಯದ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಮುರಿದು ಹೋದ ರಥದ ಚಕ್ರ

ಇದನ್ನೂ ಓದಿ

ಕೊರೊನಾ ಭೀತಿ ನಡುವೆಯೂ ಕೂಲಹಳ್ಳಿಯಲ್ಲಿ ಅದ್ದೂರಿ ಜಾತ್ರೆ: ರಥೋತ್ಸವದ ಸೊಬಗನ್ನು ಕಣ್ತುಂಬಿಕೊಂಡ ಭಕ್ತಸಾಗರ

ದೌರ್ಜನ್ಯದಲ್ಲಿ ನೊಂದ ಪರಿಶಿಷ್ಟ ಜಾತಿ-ಪಂಗಡದ ಸಂತ್ರಸ್ತರಿಗೆ 75.36 ಲಕ್ಷ ರೂ. ಪರಿಹಾರ ಧನ ವಿತರಣೆ ಮಾಡಿದ ವಿಜಯಪುರ ಜಿಲ್ಲಾಡಳಿತ

ಮುಂಬೈನಲ್ಲಿ ಮಾಸ್ಕ್​ ಧರಿಸದ 2 ಲಕ್ಷ ಜನರಿಂದ ಒಂದು ತಿಂಗಳಲ್ಲಿ 40 ಕೋಟಿ ರೂಪಾಯಿ ದಂಡ ವಸೂಲಿ

Published On - 11:17 am, Fri, 26 March 21