ಮುಂಬೈನಲ್ಲಿ ಮಾಸ್ಕ್​ ಧರಿಸದ 2 ಲಕ್ಷ ಜನರಿಂದ ಒಂದು ತಿಂಗಳಲ್ಲಿ 40 ಕೋಟಿ ರೂಪಾಯಿ ದಂಡ ವಸೂಲಿ

ಮುಂಬೈನಲ್ಲಿ ಮಾಸ್ಕ್​ ಧರಿಸದ ಹಿನ್ನೆಲೆಯಲ್ಲಿ 2 ಲಕ್ಷ ಜನರಿಂದ ಒಂದು ತಿಂಗಳಿನಲ್ಲಿ ಒಟ್ಟು ₹ 4 ಕೋಟಿ ಹಣ ಸಂಗ್ರಹ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

  • TV9 Web Team
  • Published On - 10:25 AM, 26 Mar 2021
ಮುಂಬೈನಲ್ಲಿ ಮಾಸ್ಕ್​ ಧರಿಸದ 2 ಲಕ್ಷ ಜನರಿಂದ ಒಂದು ತಿಂಗಳಲ್ಲಿ 40 ಕೋಟಿ ರೂಪಾಯಿ ದಂಡ ವಸೂಲಿ
ಪಿಟಿಐ ಚಿತ್ರ

ಮುಂಬೈ: ನಗರದಲ್ಲಿ ದಿನೇ ದಿನೇ ಕೊವಿಡ್​ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊವಿಡ್​ ನಿಯಮ ಪಾಲಿಸದವರಿಗೆ ದಂಡ ವಿಧಿಸಲಾಗುತ್ತಿದೆ. ಒಂದು ತಿಂಗಳಲ್ಲಿ ಮಾಸ್ಕ್​ ಧರಿಸದ  2 ಲಕ್ಷ ಜನರಿಗೆ ದಂಡ ವಿಧಿಸಲಾಗಿದ್ದು, ಒಟ್ಟು ₹ 4 ಕೋಟಿ ಹಣ ಸಂಗ್ರಹವಾಗಿದೆ ಎಂದು ಗುರುವಾರ ಮೂಲಗಳು ತಿಳಿಸಿವೆ. ಫೆಬ್ರವರಿ 20ರಿಂದ ದಂಡ ವಿಧಿಸಲಾಗುತ್ತಿದೆ ಎಂದು ಮುಂಬೈ ಡಿಸಿಪಿ ಎಸ್​.ಚೈತನ್ಯ ಹೇಳಿಕೆ ನೀಡಿದ್ದಾರೆ.

ದಂಡ ವಿಧಿಸಿದ್ದರಿಂದ ಸಂಗ್ರಹಿಸಿದ ಹಣದ ಕುರಿತಾಗಿ ಮಾತನಾಡಿದ ಅವರು ಸಂಗ್ರಹಿಸಿದ ಶೇ 50ರಷ್ಟು ಬೃಹನ್​ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್​ಗೆ​(ಬೆಮ್​ಸಿ) ನೀಡಲಾಗುತ್ತದೆ. ಉಳಿದವುಗಳನ್ನು ಪೊಲೀಸ್​ ವಿಭಾಗದ ಕಲ್ಯಾಣಕ್ಕೆ ಬಳಸಲಾಗುತ್ತದೆ ಎಂದು ಹೇಳಿದ್ದಾರೆ.

ದಿನ ಸಾಗುತ್ತಿದ್ದಂತೆ ಕೊವಿಡ್ ಪ್ರಕರಣಗಳು ಹೆಚ್ಚುತ್ತಿವೆ.ಮುಂಬೈ ನಗರದಲ್ಲಿ ಒಟ್ಟು 39 ಕಂಟೈನ್​ಮೆಂಟ್​ ಝೋನ್​ಗಳಿವೆ. ಇವುಗಳಲ್ಲಿ ಸ್ಲಂಗಳು ಸಹ ಒಳಗೊಂಡಿವೆ. ಹಾಗೂ 432 ಬಿಲ್ಡಿಂಗ್​ಗಳನ್ನು ಸೀಲ್​ಡೌನ್​ ಮಾಡಲಾಗಿದೆ ಎಂದು ಮಾಹಿತಿ ದೊರೆತಿದೆ.

ಇದನ್ನೂ ಓದಿ: ಪ್ರಚಾರಕ್ಕಾಗಿ ಜನರ ಗುಂಪು ಸೇರಿಸುತ್ತಿರುವ ಸ್ಟಾರ್​ಗಳಿಗೆ ಕೋವಿಡ್​-19 ನಿಯಮಾವಳಿ ನೆನಪಿಸಿದ ಸುಧಾಕರ್​!

ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ವಿರಾಮ ನೀಡಲು ಸುಪ್ರೀಂಕೋರ್ಟ್ ಸೂಚನೆ