ಕೊರೊನಾ ಭೀತಿ ನಡುವೆಯೂ ಕೂಲಹಳ್ಳಿಯಲ್ಲಿ ಅದ್ದೂರಿ ಜಾತ್ರೆ: ರಥೋತ್ಸವದ ಸೊಬಗನ್ನು ಕಣ್ತುಂಬಿಕೊಂಡ ಭಕ್ತಸಾಗರ
ಕೊರೊನಾ ನಡುವೆಯೂ ಪ್ರಸಿದ್ಧ ಕೂಲಹಳ್ಳಿ ಜಾತ್ರೆ ಅದ್ಧೂರಿಯಾಗಿ ನೆರವೇರಿದೆ. ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿಯಲ್ಲಿ ನಡೆದ ಜಾತ್ರೆಗೆ ಭಕ್ತರು ನೂರಾರು ಸಂಖ್ಯೆಯಲ್ಲಿ ಆಗಮಿಸಿದರು. ಗೋಣಿಬಸವೇಶ್ವರರ ಗೌರವಾರ್ಥವಾಗಿ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗಿಯಾದರು.
ವಿಜಯನಗರ: ಕೊರೊನಾ ನಡುವೆಯೂ ಪ್ರಸಿದ್ಧ ಕೂಲಹಳ್ಳಿ ಜಾತ್ರೆ ಅದ್ಧೂರಿಯಾಗಿ ನೆರವೇರಿದೆ. ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿಯಲ್ಲಿ ನಡೆದ ಜಾತ್ರೆಗೆ ಭಕ್ತರು ನೂರಾರು ಸಂಖ್ಯೆಯಲ್ಲಿ ಆಗಮಿಸಿದರು. ಗೋಣಿಬಸವೇಶ್ವರರ ಗೌರವಾರ್ಥವಾಗಿ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗಿಯಾದರು. ಕರ್ನಾಟಕ, ಆಂಧ್ರ ಸೇರಿ ಹಲವೆಡೆಯಿಂದ ಭಕ್ತರು ಆಗಮಿಸಿದರು.
ಉತ್ಸವದ ವೇಳೆ ನಾಪತ್ತೆಯಾಗಿದ್ದ ಮಾದಪ್ಪನ ಕರಡಿಗೆ ಪತ್ತೆ ಅತ್ತ, ಉತ್ಸವದ ವೇಳೆ ನಾಪತ್ತೆಯಾಗಿದ್ದ ಮಲೆ ಮಾದಪ್ಪನ ಕರಡಿಗೆ ಪತ್ತೆಯಾಗಿದೆ. ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಹೂವುಗಳನ್ನ ಸುರಿದಿದ್ದ ಜಾಗದಲ್ಲಿ ಕರಡಿಗೆ ಪತ್ತೆಯಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಘಟನೆ ಬೆಳಕಿಗೆ ಬಂದಿದೆ.
ದೇವರಿಗೆ ಸಿಂಗರಿಸಿದ್ದ ಹೂವನ್ನು ಒಂದೆಡೆ ಸುರಿದು ಬಳಿಕ ಅದನ್ನು ಸುಟ್ಟಿದ್ದರು. ಇನ್ನು, ಕರಡಿಗೆ ನಾಪತ್ತೆಯಾಗಿದೆ ಎಂದು ಅದಕ್ಕಾಗಿ ಹುಡುಕಾಟ ನಡೆಸಿದ ವೇಳೆ ಪತ್ತೆಯಾಗಿದೆ.
ಇನ್ನು, ನಾಪತ್ತೆಯಾಗಿದ್ದ ಮಾದಪ್ಪನ ಕರಡಿಗೆ ಕುರಿತು ಟಿವಿ9 ವರದಿ ಪ್ರಸಾರ ಮಾಡಿತ್ತು. ಕರಡಿಗೆ ನಾಪತ್ತೆ ಬಗ್ಗೆ ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಅರ್ಚಕರು ಮತ್ತು ಸಿಬ್ಬಂದಿ ವರ್ಗ ಅದಕ್ಕಾಗಿ ಹುಡುಕಾಟ ನಡೆಸಿದರು. ಈ ವೇಳೆ, ಕಸ ಗುಡಿಸಲು ನಿಯೋಜನೆಗೊಂಡಿದ್ದ ಸಿಬ್ಬಂದಿ ಕೈಗೆ ಕರಡಿಗೆ ಸಿಕ್ಕಿದೆ.
ಇದನ್ನೂ ಓದಿ: ‘ಪಾಪ ಆಕೆ ಮನವಿ ಮಾಡಿದ್ದಾಳೆ.. ನಾವು ಮನುಷ್ಯರಲ್ವಾ, ಅದಕ್ಕೆ ಅವರ ನೆರವಿಗೆ ಧಾವಿಸುತ್ತೇವೆ’
Published On - 7:22 pm, Thu, 25 March 21