‘ಪಾಪ ಆಕೆ ಮನವಿ ಮಾಡಿದ್ದಾಳೆ.. ನಾವು ಮನುಷ್ಯರಲ್ವಾ, ಅದಕ್ಕೆ ಅವರ ನೆರವಿಗೆ ಧಾವಿಸುತ್ತೇವೆ’

ಆಕೆ ಅಜ್ಞಾತ ಸ್ಥಳದಲ್ಲಿದ್ದಾಳೆ. ಪಾಪ ಆಕೆ ಮನವಿ ಮಾಡಿದ್ದಾಳೆ. ನಾವು ಮನುಷ್ಯರಲ್ವಾ, ಅದಕ್ಕೆ ಅವರ ನೆರವಿಗೆ ಧಾವಿಸುತ್ತೇವೆ ಎಂದು CD ಲೇಡಿಯ 2ನೇ ವಿಡಿಯೋ ಬಿಡುಗಡೆ ವಿಚಾರವಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

‘ಪಾಪ ಆಕೆ ಮನವಿ ಮಾಡಿದ್ದಾಳೆ.. ನಾವು ಮನುಷ್ಯರಲ್ವಾ, ಅದಕ್ಕೆ ಅವರ ನೆರವಿಗೆ ಧಾವಿಸುತ್ತೇವೆ’
‘ಸಹಾಯ ಕೇಳಿರುವ ಯುವತಿ ನೆರವಿಗೆ ನಾವು ನಿಲ್ಲುತ್ತೇವೆ’
Follow us
KUSHAL V
|

Updated on:Mar 25, 2021 | 6:41 PM

ಕೋಲಾರ: ಆಕೆ ಅಜ್ಞಾತ ಸ್ಥಳದಲ್ಲಿದ್ದಾಳೆ. ಪಾಪ ಆಕೆ ಮನವಿ ಮಾಡಿದ್ದಾಳೆ. ನಾವು ಮನುಷ್ಯರಲ್ವಾ, ಅದಕ್ಕೆ ಅವರ ನೆರವಿಗೆ ಧಾವಿಸುತ್ತೇವೆ ಎಂದು CD ಲೇಡಿಯ 2ನೇ ವಿಡಿಯೋ ಬಿಡುಗಡೆ ವಿಚಾರವಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಆಕೆ ಕಾಂಗ್ರೆಸ್​ ನೆರವನ್ನು ಮಾತ್ರ ಕೋರಿದ್ದಾಳೆ, ಯಾಕೆ ಗೊತ್ತಿಲ್ಲ. ಆದರೆ, ಯುವತಿ ಹೆದರಬೇಕಿಲ್ಲ. ನಮ್ಮದು ಅನಾಗರಿಕ ಸಮಾಜವಲ್ಲ. ಒಂದು ಹೆಣ್ಣುಮಗಳು ಸಂಕಷ್ಟದಲ್ಲಿದ್ದು ಸಹಾಯ ಕೇಳಿದ್ದಾಳೆ. ಸಹಾಯ ಕೇಳಿರುವ ಯುವತಿ ನೆರವಿಗೆ ನಾವು ನಿಲ್ಲುತ್ತೇವೆ. ಸಾರ್ವಜನಿಕ ಜೀವನದಲ್ಲಿರುವ ನಾವು ಸಹಾಯಕ್ಕೆ ನಿಲ್ತೇವೆ. ಯಾರೇ ಸಹಾಯ ಕೇಳಿದ್ರು ಅವರ ಸಹಾಯಕ್ಕೆ ನಿಲ್ಲುತ್ತೇವೆ ಎಂದು ರಮೇಶ್​ ಕುಮಾರ್ ಹೇಳಿದರು.

ಎಸ್​​ಐಟಿ ಮುಂದೆ ಹೇಳಿಕೆ ನೀಡುವುದಕ್ಕೆ ಒತ್ತಡ ಇದ್ದರೆ ನ್ಯಾಯಾಧೀಶರ ಎದುರು ಹೇಳಿಕೆಯೇ ಅಧಿಕೃತವಾಗುತ್ತದೆ. ಯುವತಿ ಧೈರ್ಯವಾಗಿ ಬಂದು ಹೇಳಿಕೆಯನ್ನ ನೀಡಲಿ. ಯುವತಿ ನೆರವಿಗೆ ನಾವು ನಿಲ್ಲುತ್ತೇವೆ. ನನಗೂ ಒಬ್ಬ ಹೆಣ್ಣು ಮಗಳಿದ್ದಾಳೆ. ಆಕೆಗೆ ಸಂಕಷ್ಟ ಎದುರಾದಾಗ ನೆರವಿಗೆ ನಿಲ್ಲಬೇಕಲ್ಲವೇ? ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.

LAKSHMI HEBBALKAR 2

ಲಕ್ಷ್ಮೀ ಹೆಬ್ಬಾಳ್ಕರ್

‘ಕಾಂಗ್ರೆಸ್​ ಪಕ್ಷ ಮಹಿಳೆ ಪರವಾಗಿ ಹೋರಾಟ ಮಾಡುತ್ತಿದೆ’ ಇತ್ತ, ಕಾಂಗ್ರೆಸ್​ ಪಕ್ಷ ಮಹಿಳೆ ಪರವಾಗಿ ಹೋರಾಟ ಮಾಡುತ್ತಿದೆ. ಅದಕ್ಕೆ ಕಾಂಗ್ರೆಸ್​ ಪಕ್ಷದ ನಾಯಕರಿಂದ ರಕ್ಷಣೆ ಕೋರಿದ್ದಾರೆ ಎಂದು ಬೆಂಗಳೂರಿನಲ್ಲಿ ಟಿವಿ9ಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದ್ದಾರೆ. ಕಾಂಗ್ರೆಸ್ ನಾಯಕರ ಮೇಲಿನ ವಿಶ್ವಾಸದಿಂದ ಅವರ ಹೆಸರು ಬಳಸಿರಬಹುದು. ವಿಶ್ವಾಸದಿಂದ ಕಾಂಗ್ರೆಸ್ ನಾಯಕರ ಹೆಸರು ಬಳಸಿರಬಹುದು. ಮೂರು ದಿನದ ಚರ್ಚೆ ನೋಡಿ ಅಥವಾ ಕೇಳಿ ಬಳಸಿರಬಹುದು ಎಂದು ಬೆಂಗಳೂರಿನಲ್ಲಿ ಟಿವಿ9ಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದರು.

ಗೃಹಸಚಿವ ಬಸವರಾಜ ಬೊಮ್ಮಾಯಿ ಭೇಟಿಯಾದ ಬಾಲಚಂದ್ರ ಜಾರಕಿಹೊಳಿ ಇತ್ತ, ಸಚಿವ ಬಾಲಚಂದ್ರ ಜಾರಕಿಹೊಳಿ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದರು. ಬೆಂಗಳೂರಿನ ಆರ್.ಟಿ.ನಗರದ ಬೊಮ್ಮಾಯಿ ನಿವಾಸದಲ್ಲಿ ಭೇಟಿಯಾದರು. ಕೆಎಂಎಫ್​ ಅಧ್ಯಕ್ಷರೂ ಆಗಿರುವ ಬಾಲಚಂದ್ರ ಜಾರಕಿಹೊಳಿ ಸಿಎಂ ನಿವಾಸಕ್ಕೆ ಭೇಟಿಕೊಟ್ಟ ನಂತರ ಗೃಹಸಚಿವರ ನಿವಾಸಕ್ಕೆ ಭೇಟಿಯಾದರು. ಸಿಡಿಯಲ್ಲಿರುವ ಲೇಡಿಯ 2ನೇ ವಿಡಿಯೋ ಬಿಡುಗಡೆ ಹಿನ್ನೆಲೆಯಲ್ಲಿ ಸಿಎಂ ಮತ್ತು ಗೃಹ ಮಂತ್ರಿ ಅವರನ್ನು ಬಾಲಚಂದ್ರ ಜಾರಕಿಹೊಳಿ ಭೇಟಿಯಾದರು.

ಅತ್ತ, ಪ್ರಕರಣಕ್ಕೆ ಸಂಬಂಧಿಸಿದಂತೆ ಆಯುಕ್ತರ ಕಚೇರಿಯಲ್ಲಿ SIT ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಭಾಗಿಯಾದರು. ಸತತ 4 ಗಂಟೆಗಳಿಂದ ನಡೆಯುತ್ತಿರುವ ಮೀಟಿಂಗ್ ನಡೆಯಿತು. ಸಿಡಿ ಕೇಸ್ ಕುರಿತು ಅಧಿಕಾರಿಗಳು ಚರ್ಚೆ ನಡೆಸಿದರು.

ಇದನ್ನೂ ಓದಿ: ಉಪಸಮರಕ್ಕೆ ಸಜ್ಜಾದ ‘ಕೈ’ ಪಡೆ: ಕಾಂಗ್ರೆಸ್​ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಗೆ ಮುಹೂರ್ತ ಫಿಕ್ಸ್

Published On - 6:36 pm, Thu, 25 March 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್