ಚಿಕ್ಕಬಳ್ಳಾಪುರದಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳ ಬಂಧನ; 33 ಕೆಜಿ ಮಾದಕ ವಸ್ತು ವಶಪಡಿಸಿಕೊಂಡ ಪೊಲೀಸರು

|

Updated on: May 11, 2021 | 1:24 PM

ಟಾಟಾ ಎಸ್ ವಾಹನದಲ್ಲಿ ವಸ್ತುಗಳ ಮಧ್ಯೆ ಎರಡು ಕೆಜಿಯ ಗಾಂಜಾ ಪಾಕೇಟ್​ಗಳನ್ನು ಇಟ್ಟುಕೊಂಡು ಗಾಂಜಾ ವಿತರಕರಿಗೆ ಸರಬರಾಜು ಮಾಡುತ್ತಿದ್ದರು. ಆದರೆ ನಿನ್ನೆ ಶಿಡ್ಲಘಟ್ಟ ಪೊಲೀಸ್ ಸರ್ಕಲ್ ಇನ್ಸ್​ಪೇಕ್ಟರ್ ಸುರೇಶ, ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಸಬ್ ಇನ್ಸ್​ಪೇಕ್ಟರ್ ರಂಜನ್ ಕುಮಾರ್ ಮತ್ತವರ ತಂಡ, ಆರೋಪಿಗಳ ಬಣ್ಣ ಬಯಲು ಮಾಡಿ ಗಾಂಜಾ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳ ಬಂಧನ; 33 ಕೆಜಿ ಮಾದಕ ವಸ್ತು ವಶಪಡಿಸಿಕೊಂಡ ಪೊಲೀಸರು
ಚಿಕ್ಕಬಳ್ಳಾಪುರದಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳ ಬಂಧನ
Follow us on

ಚಿಕ್ಕಬಳ್ಳಾಪುರ: ಇದು ಲಾಕ್​ಡೌನ್ ಸಮಯ, ಎಲ್ಲಿ ನೋಡಿದರು ಪೊಲೀಸ್ ಬಂದೋಬಸ್ತ್ ಇರುತ್ತದೆ. ಪೊಲೀಸರ ಕಣ್ಗಾವಲಿನಿಂದ ತಪ್ಪಿಸಿಕೊಳ್ಳಲು ಅಷ್ಟು ಸುಲಭವಲ್ಲ. ಹೀಗಿರುವಾಗಲೇ ಗಾಂಜಾ ಮಾಫಿಯಾ ಮಾಡುವ ತಂಡವೊಂದು ಚಿಕ್ಕಬಳ್ಳಾಪುರದಲ್ಲಿ ಪೊಲೀಸರ ಮುಂದೆಯೇ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಲೋಡ್ ಗಟ್ಟಲೆ ಗಾಂಜಾ ಸಾಗಿಸುತ್ತಿದ್ದರು. ಆದರೆ ಆರೋಪಿಗಳು ಛಾಪೆ ಕೆಳಗೆ ತೂರಿ ಗಾಂಜಾ ಸಾಗಾಟ ಮಾಡಿದರೆ ಪೊಲೀಸರು ರಂಗೋಲಿ ಕೆಳಗೆ ತೂರಿ ಆರೋಪಿಗಳನ್ನು ಹಾಗೂ ಸಾಗಿಸುತ್ತಿದ್ದ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.

ಆಂಧ್ರ ಮೂಲದ ಪ್ರಕಾಶ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಚೇಳೂರು ಗ್ರಾಮ ಮೂಲದ ವೆಂಟಕರಮಣಪ್ಪ, ಆಂಧ್ರದಿಂದ ಶಿಡ್ಲಘಟ್ಟ ಮಾರ್ಗದ ಮೂಲಕ ಬೆಂಗಳೂರಿಗೆ ಗಾಂಜಾ ಸರಬರಾಜು ಮಾಡುತ್ತಿದ್ದರು. ತಮ್ಮ ಕಳ್ಳ ವ್ಯವಹಾರ ಯಾರಿಗೂ ಗೊತ್ತಾಗಬಾರದು ಎಂದು ಗೃಹೋಪಯೋಗಿ ವಸ್ತುಗಳ ಮಾರಾಟ ನೆಪದಲ್ಲಿ ಟಾಟಾ ಎಸ್ ವಾಹನದಲ್ಲಿ ವಸ್ತುಗಳ ಮಧ್ಯೆ ಎರಡು ಕೆಜಿಯ ಗಾಂಜಾ ಪಾಕೇಟ್​ಗಳನ್ನು ಇಟ್ಟುಕೊಂಡು ಗಾಂಜಾ ವಿತರಕರಿಗೆ ಸರಬರಾಜು ಮಾಡುತ್ತಿದ್ದರು. ಆದರೆ ನಿನ್ನೆ ಶಿಡ್ಲಘಟ್ಟ ಪೊಲೀಸ್ ಸರ್ಕಲ್ ಇನ್ಸ್​ಪೇಕ್ಟರ್ ಸುರೇಶ, ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಸಬ್ ಇನ್ಸ್​ಪೇಕ್ಟರ್ ರಂಜನ್ ಕುಮಾರ್ ಮತ್ತವರ ತಂಡ, ಆರೋಪಿಗಳ ಬಣ್ಣ ಬಯಲು ಮಾಡಿ ಗಾಂಜಾ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.

ಮಾದಕ ವಸ್ತು ಮಾರಾಟ ಮಾಡುವವರಿಗೆ ಲಾಕ್​ಡೌನ್ ಇದ್ದರು ಹೆದರಿಕೆ ಇಲ್ಲ ಎನ್ನುವುದು ಈ ಪ್ರಕರಣದಿಂದ ಅರಿವಿಗೆ ಬರುತ್ತದೆ. ಮಾದಕ ವ್ಯಸನಿಗಳ ಬೇಡಿಕೆಗೆ ತಕ್ಕಂತೆ ಹಗಲು ವೇಷ ಧರಿಸಿ ನಿಷೇಧಿತ ವಸ್ತುವನ್ನು ಸಾಗಾಟ ಮಾಡುತ್ತಾರೆ. ಮನೆ ಮನೆಗಳಿಗೆ ಪಾತ್ರೆ, ಸಾಮಾನು, ಗೃಹೊಪಯೋಗಿ ವಸ್ತುಗಳನ್ನು ಮಾರಾಟ ಮಾಡುವ ನೆಪದಲ್ಲಿ 17 ಲಕ್ಷ ರೂಪಾಯಿ ಮೌಲ್ಯದ 33 ಕೆಜಿ ಗಾಂಜವನ್ನು ಸಾಗಾಟ ಮಾಡುತ್ತಿದ್ದರು. ಆದರೆ ಪೊಲೀಸರ ಕಾರ್ಯಚರಣೆ ವೇಳೆ ಈ ವಿಷಯ ಬೆಳಕಿಗೆ ಬಂದಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಚಿಕ್ಕಬಳ್ಳಾಪುರದ ಎಸ್​ಪಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.

ಈಗ ಲಾಕ್​ಡನ್​ ಸಮಯದಲ್ಲಿ ಮಾದಕ ವಸ್ತುಗಳಿಗೆ ಬಾರಿ ಬೇಡಿಕೆ ಇದೆ, ಡಬಲ್ ರೇಟ್​ಗೆ ಮಾದಕ ವಸ್ತುಗಳು ಮಾರಾಟ ಆಗುತ್ತಿವೆ ಎನ್ನುವ ಮಾತು ಕೂಡ ಇದೆ. ಆದರೆ ಎಲ್ಲೇಡೆ ಪೊಲೀಸ್ ಸರ್ಪಗಾವಲು ಇರುವ ಕಾರಣ ಆರೋಪಿಗಳು ಎನೇ ತಪ್ಪುದಾರಿ ಹಿಡಿದರು ಅದನ್ನು ಭೇಧಿಸುವಲ್ಲಿ ಪೊಲೀಸರು ಸದಾ ಒಂದು ಹೆಜ್ಜೆ ಮುಂದೆ ಇರುತ್ತಾರೆ ಎನ್ನುವುದು ಮಾತ್ರ ನಿಜ.

ಇದನ್ನೂ ಓದಿ:

ಫ್ಲವರ್ ಪಾಟ್​ನಲ್ಲಿ ಗಾಂಜಾ ಬೆಳೆಯುತ್ತಿದ್ದ ಇಬ್ಬರ ಬಂಧನ; ಚಿಕ್ಕಮಗಳೂರಿನಲ್ಲಿ ಪೊಲೀಸರ ಕಾರ್ಯಾಚರಣೆ ವೇಳೆ ಸತ್ಯ ಬಯಲು

ಬೆಂಗಳೂರಿನಲ್ಲಿ ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ; 84.60 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ