ಬೆಂಗಳೂರಿನಲ್ಲಿ ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ; 84.60 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ
ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 84.60 ಲಕ್ಷ ರೂ. ಮೌಲ್ಯದ ಗಾಂಜಾ ಮತ್ತು ಒಂದು ವಾಹನವನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳಾದ ಚಡ್ಡಕೃಷ್ಣನ್ ಅಲಿಯಾಸ್ ಸಂತೋಷ್ ಮತ್ತು ಮೂರ್ತಿ ಆಂಧ್ರದ ವಿಶಾಖಪಟ್ಟಣದಿಂದ ಗಾಂಜಾವನ್ನು ತಂದು ಮಾರುತ್ತಿದ್ದರೆಂಬ ಮಾಹಿತಿ ತಿಳಿದುಬಂದಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 84.60 ಲಕ್ಷ ರೂ. ಮೌಲ್ಯದ ಗಾಂಜಾ ಮತ್ತು ಒಂದು ವಾಹನವನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳಾದ ಚಡ್ಡಕೃಷ್ಣನ್ ಅಲಿಯಾಸ್ ಸಂತೋಷ್ ಮತ್ತು ಮೂರ್ತಿ ಆಂಧ್ರದ ವಿಶಾಖಪಟ್ಟಣದಿಂದ ಗಾಂಜಾವನ್ನು ತಂದು ಮಾರುತ್ತಿದ್ದರೆಂಬ ಮಾಹಿತಿ ತಿಳಿದುಬಂದಿದೆ.
ಜೂಜಾಟದ ಅಡ್ಡೆಗಳ ಮೇಲೆ ದಾಳಿ ತುಮಕೂರು: ತುಮಕೂರು ಜಿಲ್ಲೆಯ ಜೂಜಾಟದ ಅಡ್ಡೆಗಳ ಮೇಲೆ ಜಿಲ್ಲಾ ಪೊಲೀಸರು ದಾಳಿ ನಡೆಸಿದ್ದಾರೆ. ಭರ್ಜರಿ ಕಾರ್ಯಾಚರಣೆಯನ್ನು ನಡೆಸಿದ ಜಿಲ್ಲಾ ಪೊಲೀಸರು ಬಂಧಿತರಿಂದ 3,23,452 ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ 220 ಜನರನ್ನು ಬಂಧಿಸಿ ಜಿಲ್ಲಾದ್ಯಂತ ಒಟ್ಟು 36 ಪ್ರಕರಣಗಳನ್ನು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಿಸಿಕೊಂಡಿದ್ದಾರೆ.
ದುಬಾರಿ ಬೈಕ್ ಕಳವು ತಮಿಳುನಾಡು: ಹೊಸೂರಿನ ಮಾರುತಿ ನಗರದಲ್ಲಿ ಏಪ್ರಿಲ್ 11 ರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಬಾಬು ಎಂಬುವವರಿಗೆ ಸೇರಿದ 2 ಲಕ್ಷ 10 ಸಾವಿರ ಬೆಲೆಯ ರಾಯಲ್ ಎನ್ ಫೀಲ್ಡ್ ಬೈಕ್ನನ್ನು ಕಳ್ಳನೊಬ್ಬ ಕದ್ದೊಯ್ದಿದ್ದಾನೆ. ಬೈಕ್ನ ಲಾಕ್ ಮಾಡಿದ್ದರು ಕ್ಷಣ ಮಾತ್ರದಲ್ಲಿ ಬೈಕ್ನ ಕದ್ದೊಯ್ದಿರುವ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ
ದಾವಣಗೆರೆಯ ರೈತರಿಗೆ ಸೇರಿದ 100ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ಪರಾರಿಯಾದ ದುಷ್ಕರ್ಮಿಗಳು
(Police arrested two men for selling Ganja in Bangalore)