ಕೊರೊನಾ ಆತಂಕದ ಮಧ್ಯೆ ದೇಗುಲದಲ್ಲಿ ಜನಜಂಗುಳಿ.. ಬಲಿ ಕೊಟ್ಟು ಹರಿಕೆ ತೀರಿಸೋಕೆ ಬಂದ ಭಕ್ತರು

ಯುಗಾದಿ ಹಬ್ಬದ ಮಾರನೆ ದಿನವಾದ ಇಂದು ವರ್ಷ ತೊಡಕಿನಂದು ಕೋಳಿ, ಕುರಿ ಬಲಿಕೊಟ್ಟು ತಮ್ಮ ಹರಕೆ ತೀರಿಸಲು ದೇವಾಲಯಕ್ಕೆ ಭಕ್ತರು ಮುಗಿಬಿದ್ದಿದ್ದಾರೆ. ಪುಟ್ಟ ಪುಟ್ಟ ಮಕ್ಕಳೊಂದಿಗೆ ದೇವಾಲಯಗಳಿಗೆ ಬಂದಿದ್ದಾರೆ. ದೇವರಿಗೆ ಹರಕೆ ತೀರಿಸುವ ಭರದಲ್ಲಿ ಕೊರೊನಾವನ್ನೇ ಮರೆತಿದ್ದಾರೆ.

ಕೊರೊನಾ ಆತಂಕದ ಮಧ್ಯೆ ದೇಗುಲದಲ್ಲಿ ಜನಜಂಗುಳಿ.. ಬಲಿ ಕೊಟ್ಟು ಹರಿಕೆ ತೀರಿಸೋಕೆ ಬಂದ ಭಕ್ತರು
ಕೋಲಾರದ ಗಂಗಮ್ಮ ದೇವಾಲಯ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Apr 14, 2021 | 12:23 PM

ಕೋಲಾರ: ಮಹಾಮಾರಿ ಕೊರೊನಾದ ಎರಡನೇ ಅಲೆಯ ಆರ್ಭಟ ಜೋರಾಗಿದೆ. ತಿಂಗಳಿಂದ ತಿಂಗಳಿಗೆ ಬಲಿಷ್ಠವಾಗಿ ವೈರಸ್ ಬೆಳೆಯುತ್ತಿದೆ. ಅಲ್ಲದೆ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರ ಕೊರೊನಾ ಗೈಡ್​ ಲೈನ್ಸ್​ ನೀಡಿದ್ದು ಜನ ಮಾತ್ರ ಭಾರಿ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಸಾಮಾಜಿಕ ಅಂತರವಾಗಲಿ, ಮಾಸ್ಕ್ ಆಗಲಿ ಧರಿಸದೆ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಇದರ ನಡುವೆಯೇ ಕೋಲಾರ ನಗರದ ಅಮ್ಮವಾರಿ ಪೇಟೆಯ ಗಂಗಮ್ಮ ದೇವಾಲಯದಲ್ಲಿ ಜನ ಜಂಗುಳಿ ಕಂಡು ಬಂದಿದೆ.

ಯುಗಾದಿ ಹಬ್ಬದ ಮಾರನೆ ದಿನವಾದ ಇಂದು ವರ್ಷ ತೊಡಕಿನಂದು ಕೋಳಿ, ಕುರಿ ಬಲಿಕೊಟ್ಟು ತಮ್ಮ ಹರಕೆ ತೀರಿಸಲು ದೇವಾಲಯಕ್ಕೆ ಭಕ್ತರು ಮುಗಿಬಿದ್ದಿದ್ದಾರೆ. ಪುಟ್ಟ ಪುಟ್ಟ ಮಕ್ಕಳೊಂದಿಗೆ ದೇವಾಲಯಗಳಿಗೆ ಬಂದಿದ್ದಾರೆ. ದೇವರಿಗೆ ಹರಕೆ ತೀರಿಸುವ ಭರದಲ್ಲಿ ಕೊರೊನಾವನ್ನೇ ಮರೆತಿದ್ದಾರೆ. ನೂರಾರು ಸಂಖ್ಯೆಯಲ್ಲಿ ದೇವಾಲಯ ತುಂಬೆಲ್ಲ ಜನ ತುಂಬಿಕೊಂಡಿದ್ದಾರೆ. ಭಕ್ತಿ ಪರವಶರಾಗಿ ರಕ್ಕಸ ಕೊರೊನಾ ವೈರಸನ್ನು ನಿರ್ಲಕ್ಷ್ಯಿಸಿದ್ದಾರೆ.

Gangamma temple

ಗಂಗಮ್ಮ ದೇವಾಲಯದಲ್ಲಿ ಜನ ಜಂಗುಳಿ

ಜನ ಜಂಗುಳಿ ಇದ್ದರೂ ಅಧಿಕಾರಿಗಳ ನಿರ್ಲಕ್ಷ್ಯ ಇಂದು ದೇವಾಲಯಕ್ಕೆ ಭಕ್ತರು ಹೆಚ್ಚಾಗಿ ಬರುವ ಸಾಧ್ಯತೆ ಬಗ್ಗೆ ಗೊತ್ತಿದ್ದರೂ ಅಗತ್ಯ ಕ್ರಮ ಕೈಗೊಂಡಿಲ್ಲ. ಸಾಮಾಜಿಕ ಅಂತರವಾಗಲಿ, ಮಾಸ್ಕ್ ಧರಿಸುವುದಾಗಲಿ ಯಾವುದೂ ಇಲ್ಲಿ ಪಾಲಿಸಲಾಗುತ್ತಿಲ್ಲ. ಕೊರೊನಾ ಮಾರ್ಗಸೂಚಿಯ ಉಲ್ಲಂಘನೆಯಾಗಿದೆ. ಹೊಸ ತೊಡಕಿನ ಸಂಭ್ರಮದಲ್ಲಿರುವ ಜನ ಕೊರೊನಾವನ್ನು ಮರೆತಿದ್ದಾರೆ. ಸದ್ಯ ಈಗ ಬಂದಿರುವ ಭಕ್ತರಲ್ಲಿ ಯಾರಿಗಾದರೂ ಕೊರೊನಾ ಬಂದಿದ್ದರೆ ಇದರಿಂದ ಮುಂದೆ ಭಾರಿ ಅನಾಹುತ ಸಂಭವಿಸಲಿದೆ.

Gangamma temple

ಗಂಗಮ್ಮ ದೇವಾಲಯದಲ್ಲಿ ಜನ ಜಂಗುಳಿ

Gangamma temple

ಗಂಗಮ್ಮ ದೇವಾಲಯದಲ್ಲಿ ಜನ ಜಂಗುಳಿ

Gangamma temple

ಗಂಗಮ್ಮ ದೇವಾಲಯದಲ್ಲಿ ಜನ ಜಂಗುಳಿ

Gangamma temple

ಗಂಗಮ್ಮ ದೇವಾಲಯದಲ್ಲಿ ಜನ ಜಂಗುಳಿ

(Corona Rules Violate in Kolar Devotees Rush to Gangamma Temple Over Hosa Todaku)

ಇದನ್ನೂ ಓದಿ: ಮಹಾಮಾರಿ ಕೊರೊನಾ ನಿವಾರಣೆಗಾಗಿ ದೇವಾಲಯದಲ್ಲಿ ಹೋಮ-ಹವನ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್