ಬೆಣ್ಣೆನಗರಿಯಲ್ಲಿ ಮಾರ್ಷಲ್​ಗಳ ನೇಮಕ; ಕೊರೊನಾ ನಿಯಮ ಪಾಲಿಸದವರಿಗೆ ಮಹಾನಗರ ಪಾಲಿಕೆಯಿಂದ ಹೊಸ ನಿಯಮ

ಸರ್ಕಾರದ ನಿಯಮಗಳನ್ನು ಪಾಲಿಸದವರಿಗೆ ದಾವಣಗೆರೆಯಲ್ಲಿ ಮಾರ್ಷಲ್​​ಗಳನ್ನು ನೇಮಕ ಮಾಡಲಾಗಿದೆ. ಇದಕ್ಕಾಗಿ 45ಕ್ಕೂ ಹೆಚ್ಚು ಮಾಜಿ ಸೈನಿಕರನ್ನ ಜಿಲ್ಲಾಡಳಿತ ನೇಮಕ ಮಾಡಿದೆ. ಇವರಿಗೆ ವಿಪತ್ತು ವಿರ್ವಹಣೆ ಅಡಿ ಸಂಬಳ ವಿತರಿಸಲು ನಿರ್ಧರಿಸಲಾಗಿದೆ.

ಬೆಣ್ಣೆನಗರಿಯಲ್ಲಿ ಮಾರ್ಷಲ್​ಗಳ ನೇಮಕ; ಕೊರೊನಾ ನಿಯಮ ಪಾಲಿಸದವರಿಗೆ ಮಹಾನಗರ ಪಾಲಿಕೆಯಿಂದ ಹೊಸ ನಿಯಮ
ಕೊರೊನಾ ನಿಯಮ ಪಾಲಿಸದವರಿಗೆ ಮಹಾನಗರ ಪಾಲಿಕೆಯಿಂದ ಹೊಸ ನಿಯಮ
Follow us
preethi shettigar
| Updated By: Skanda

Updated on: Apr 14, 2021 | 11:42 AM

ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂಬುದನ್ನೇ ಮರೆತು, ಎಲ್ಲೆಂದರಲ್ಲಿ ಮಾಸ್ಕ್ ಇಲ್ಲದೇ ಓಡಾಡಲು ಶುರುಮಾಡಿದ್ದಾರೆ. ಈ ಬಗ್ಗೆ ಎಷ್ಟೇ ಮಾಹಿತಿ ನೀಡಿದರೂ ಎಚ್ಚೆತ್ತುಕೊಳ್ಳುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ದಿಟ್ಟ ನಿರ್ಧಾರಕ್ಕೆ ಮುಂದಾಗಿದ್ದು, ಇನ್ನೆರಡು ದಿನಗಳಲ್ಲಿ ಬೆಣ್ಣೆ ನಗರಿಯಲ್ಲಿ ಮಾರ್ಷಲ್​​ಗಳ ಕಾರುಬಾರು ಶುರುವಾಗಲಿದೆ. ಇದಕ್ಕಾಗಿ 40ಕ್ಕೂ ಅಧಿಕ ಮಾಜಿ ಸೈನಿಕರನ್ನ ಗುರುತಿಸಲಾಗಿದೆ. ಸೈನಿಕನ ವೇಷದಲ್ಲಿ ಮಾರ್ಷಲ್​​ಗಳು ಸುತ್ತಾಟ ಶುರುಮಾಡಲಿದ್ದಾರೆ. 

ದಿನದಿಂದ ದಿನಕ್ಕೆ ದಾವಣಗೆರೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮೇಲಾಗಿ ದಾವಣಗೆರೆ ಹಳೆ ಪ್ರವೇಶವಾದ ಆಜಾದ್ ನಗರ ಭಾಷಾ ನಗರ, ಮಂಡಕ್ಕಿ ಭಟ್ಟಿ, ಇಮಾನ್ ನಗರ, ಶಿವಾನಗರ ಸೇರಿದಂತೆ ಬಹುತೇಕ ಜನರು ಕೊರೊನಾ ಲಸಿಕೆ ಸಹ ಹಾಕಿಸಿಕೊಳ್ಳುತ್ತಿಲ್ಲ. ಇದಕ್ಕಾಗಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಒಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಅಲ್ಲದೇ ಕಳೆದ ವರ್ಷ ಅತಿ ಹೆಚ್ಚು ಪಾಸಿಟಿವ್ ಬಂದಿದ್ದು ಸಹ ಇದೇ ಪ್ರದೇಶದಲ್ಲಿ. ಹೀಗಾಗಿ ಮುಸ್ಲಿಂ ಧರ್ಮದ ಧರ್ಮ ಗುರುಗಳು ಹಾಗೂ ಮಸೀದಿಗಳ ಪ್ರಮುಖರನ್ನ ಕರೆಸಿದ್ದು, ಸಮಾಜದ ಮುಖಂಡರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಡಿದ್ದಾರೆ.

ಕಳೆದ ವರ್ಷ 264 ಜನ ಕೊರೊನಾಗೆ ಬಲಿಯಾಗಿದ್ದಾರೆ. ಇವರೆಲ್ಲಾ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಕೊರೊನಾ ಸೋಂಕಿತರು ಎಂದು ಖಚಿತ ಪಟ್ಟವರು. ಆದರೆ ಎಷ್ಟೋ ಜನ ಆಸ್ಪತ್ರೆಗೆ ಬಾರದೇ ಸಾವನ್ನಪ್ಪಿದ್ದಾರೆ ಎಂಬ ವಿಚಾರ ಸಭೆಯಲ್ಲಿ ಚರ್ಚೆಯಾಯಿತು. ಪ್ರತಿಯೊಂದು ಪ್ರದೇಶದಲ್ಲಿ ಕೊರೊನಾ ಲಸಿಕೆ ಕಡ್ಡಾಯವಾಗಿ ಮಾಡಿಸಲು ನಿರ್ಧರಿಸಲಾಯಿತು. ಆದರೆ ರಂಜಾನ್ ಆರಂಭವಾದ ಹಿನ್ನೆಲೆಯಲ್ಲಿ ಯಾರು ಕೂಡಾ ಲಸಿಕೆ ಸ್ವೀಕರಿಸಲ್ಲ. ಇದೇ ಕಾರಣಕ್ಕೆ ಸಂಜೆ ಎಳು ಗಂಟೆಯ ನಂತರ ಇಂತಹ ಮುಸ್ಲಿಂ ಬಾಂಧವರಿಗೆ ಕೊರೊನಾ ಲಸಿಕೆ ನೀಡಲು ಜಿಲ್ಲಾಡಳಿತ ಚಿಂತನೆ ಶುರು ಮಾಡಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ.

mahanthesh awarness

ಲಸಿಕೆ ತೆಗೆದುಕೊಳ್ಳುವಂತೆ ಗ್ರಾಮಸ್ಥರ ಮನವೊಲಿಸಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ಇನ್ನು ಸರ್ಕಾರದ ನಿಯಮಗಳನ್ನು ಪಾಲಿಸದವರಿಗೆ ಬೆಣ್ಣೆ ನಗರಿಯಲ್ಲಿ ಮಾರ್ಷಲ್​​ಗಳನ್ನು ನೇಮಕ ಮಾಡಲಾಗಿದೆ. ಅಂದರೆ ಇದಕ್ಕಾಗಿ 45ಕ್ಕೂ ಹೆಚ್ಚು ಮಾಜಿ ಸೈನಿಕರನ್ನ ಜಿಲ್ಲಾಡಳಿತ ನೇಮಕ ಮಾಡಿದೆ. ಇವರಿಗೆ ವಿಪತ್ತು ವಿರ್ವಹಣೆ ಅಡಿ ಸಂಬಳ ವಿತರಿಸಲು ನಿರ್ಧರಿಸಲಾಗಿದೆ. ಇನ್ನೆರಡು ದಿನಗಳ ಕಾಲ ಮಾರ್ಷಲ್​​ಗಳು​ ದೇಶದ ಗಡಿ ಕಾಯುವಾಗ ಧರಿಸುವ ಸೈನಿಕನ ವಸ್ತ್ರದಲ್ಲಿಯೇ ಸೇವೆಗೆ ಇಳಿಯಲಿದ್ದಾರೆ ಎಂದು ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್ ಎಸ್.ಟಿ.ವೀರೇಶ್ ಹೇಳಿದ್ದಾರೆ.

ಒಂದು ಕಡೆ ಲಸಿಕೆ ಹೆಸರು ಕೇಳಿದ ತಕ್ಷಣಕ್ಕೆ ಓಡಿ ಹೋಗುತ್ತಿದ್ದವರು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ. ಇನ್ನೊಂದು ಕಡೆ ಸ್ಥಳೀಯ ಪೊಲೀಸರುಗಳ ಮಾತಿಗೆ ಬೆಲೆಕೊಡದ ಜನರಿಗೆ ತಕ್ಕ ಪಾಠ ಕಲಿಸಲು ಮಾರ್ಷಲ್​​ಗಳ ನೇಮಕ ಮಾಡಲಾಗಿದೆ. ಹೀಗೆ ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ತರಲು ನಿರಂತರ ಪ್ರಯತ್ನ ಶುರುವಾಗಿದೆ.

ಇದನ್ನೂ ಓದಿ:

ಕೊರೊನಾ ನಿಯಂತ್ರಣಕ್ಕೆ ಮತ್ತಷ್ಟು ಜಿಲ್ಲೆಗಳಿಗೆ ನೈಟ್​ ಕರ್ಫ್ಯೂ ವಿಸ್ತರಣೆ ಸಾಧ್ಯತೆ.. ಲಾಕ್​ಡೌನ್​ ಪ್ರಸ್ತಾಪ ಇಲ್ಲ: ಬಿ.ಎಸ್.ಯಡಿಯೂರಪ್ಪ

ಕೊರೊನಾ ತಡೆಗೆ ಮಹಾರಾಷ್ಟ್ರ, ಕೇರಳದಲ್ಲಿ ಟಫ್​ ರೂಲ್ಸ್​.. ಕರ್ನಾಟಕಕ್ಕೂ ಅನಿವಾರ್ಯವಾಯ್ತಾ ಕಠಿಣ ನಿಯಮಾವಳಿಗಳು

(Davanagere Mahanagar palike Appoints Martial to manage Covid Guidelines)

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ