Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ನಿಯಂತ್ರಣಕ್ಕೆ ಮತ್ತಷ್ಟು ಜಿಲ್ಲೆಗಳಿಗೆ ನೈಟ್​ ಕರ್ಫ್ಯೂ ವಿಸ್ತರಣೆ ಸಾಧ್ಯತೆ.. ಲಾಕ್​ಡೌನ್​ ಪ್ರಸ್ತಾಪ ಇಲ್ಲ: ಬಿ.ಎಸ್.ಯಡಿಯೂರಪ್ಪ

ನೈಟ್​ಕರ್ಫ್ಯೂ ಬಗ್ಗೆ ತಜ್ಞರ ಜತೆ ಚರ್ಚೆ ಮಾಡಿದ ಬಳಿಕ ನಿರ್ಧರಿಸಲಾಗುತ್ತದೆ. ಇನ್ನೊಂದೆರಡು ಜಿಲ್ಲೆಗಳಲ್ಲಿ ನೈಟ್‌ಕರ್ಫ್ಯೂ ವಿಸ್ತರಣೆಗೆ ಚಿಂತನೆ ನಡೆಸಲಾಗುತ್ತಿದೆ. ಇನ್ನುಳಿದಂತೆ ಲಾಕ್​ಡೌನ್​ ಬಗ್ಗೆ ಸರ್ವಪಕ್ಷ ಸಭೆ ಮುಗಿಯುವ ತನಕ ಯಾವುದೇ ನಿರ್ಧಾರ ಇಲ್ಲ: ಬಿ.ಎಸ್​.ಯಡಿಯೂರಪ್ಪ

ಕೊರೊನಾ ನಿಯಂತ್ರಣಕ್ಕೆ ಮತ್ತಷ್ಟು ಜಿಲ್ಲೆಗಳಿಗೆ ನೈಟ್​ ಕರ್ಫ್ಯೂ ವಿಸ್ತರಣೆ ಸಾಧ್ಯತೆ.. ಲಾಕ್​ಡೌನ್​ ಪ್ರಸ್ತಾಪ ಇಲ್ಲ: ಬಿ.ಎಸ್.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
Follow us
Skanda
|

Updated on:Apr 14, 2021 | 10:11 AM

ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಲಾಕ್​ಡೌನ್​ ಬಿಟ್ಟು ಉಳಿದೆಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆ. ಅಗತ್ಯಬಿದ್ದರೆ ಇನ್ನೂ 2 ದಿನ ಕೊರೊನಾ ಕರ್ಫ್ಯೂ ಮುಂದುವರೆಸುತ್ತೇವೆ. ಅದರ ಹೊರತಾಗಿ ವೀಕೆಂಡ್​ ಲಾಕ್​ಡೌನ್​ ಬಗ್ಗೆಯೂ ಯಾವುದೇ ಪ್ರಸ್ತಾಪ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸೌಧದಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ ಲಾಕ್​ಡೌನ್ ಬಗ್ಗೆ ಸರ್ವಪಕ್ಷಗಳ ಸಭೆ ಬಳಿಕ ನಿರ್ಧಾರ ಮಾಡಲಾಗುವುದು. ಎಲ್ಲಾ ಪಕ್ಷಗಳವರ ಜೊತೆ ಚರ್ಚಿಸಿ ನಂತರ ನಿರ್ಣಯ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ನೈಟ್​ಕರ್ಫ್ಯೂ ಬಗ್ಗೆ ತಜ್ಞರ ಜತೆ ಚರ್ಚೆ ಮಾಡಿದ ಬಳಿಕ ನಿರ್ಧರಿಸಲಾಗುತ್ತದೆ. ಇನ್ನೊಂದೆರಡು ಜಿಲ್ಲೆಗಳಲ್ಲಿ ಕೊರೊನಾ ‌ಕರ್ಫ್ಯೂ ವಿಸ್ತರಣೆಗೆ ಚಿಂತನೆ ನಡೆಸಲಾಗುತ್ತಿದೆ. ಇನ್ನುಳಿದಂತೆ ಲಾಕ್​ಡೌನ್​ ಬಗ್ಗೆ ಸರ್ವಪಕ್ಷ ಸಭೆ ಮುಗಿಯುವ ತನಕ ಯಾವುದೇ ನಿರ್ಧಾರ ಇಲ್ಲ. ಏಪ್ರಿಲ್ 18ನೇ ತಾರೀಖು ಸರ್ವಪಕ್ಷ ಸಭೆ ಕರೆಯಲಾಗಿದೆ. ಇವತ್ತು ಅಥವಾ ನಾಳೆ ಅಧಿಕೃತವಾಗಿ ಸರ್ಕಾರದ ಕಡೆಯಿಂದ ಆಹ್ವಾನ ಹೋಗತ್ತೆ ಎಂದು ಹೇಳಿದ್ದಾರೆ.

ಊಹಾಪೋಹದ ಸುದ್ದಿ ಹರಡಿಸುವವರ ವಿರುದ್ಧ ಕ್ರಮ ರಾಜ್ಯದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಲಾಕ್‌ಡೌನ್ ಮಾಡಲ್ಲ. ಈ ಕುರಿತು ಉಹಾಪೋಹದ ಸುದ್ದಿ ಹರಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸುಳ್ಳು ಸುದ್ದಿ ಹಬ್ಬಿಸುವವರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಟಿವಿ9 ಜೊತೆ ಬೀದರ್ ಜಿಲ್ಲೆಯ ಹುಮನಾಬಾದ್‌ನಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ, ಊಹಾಪೋಹದ ಸುದ್ದಿ ಹರಡುವುದು ಕಾನೂನುಬಾಹಿರ. ರಾಜ್ಯದಲ್ಲಿ ಲಾಕ್‌ಡೌನ್ ಮಾಡದೇ ಕೊರೊನಾ ನಿಯಂತ್ರಣ ಮಾಡುವುದು ನಮ್ಮ ಉದ್ದೇಶ. ಆ ಬಗ್ಗೆ ರಾಜ್ಯ ಸರ್ಕಾರಕ್ಕೆ ಸ್ಪಷ್ಟತೆ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೇವೆ. ನಿಯಮಗಳನ್ನು ಪಾಲಿಸಿದರೆ ಕೊರೊನಾ ನಿಯಂತ್ರಿಸಬಹುದು. ಹೀಗಾಗಿ ಜನರು ಲಾಕ್​ಡೌನ್​ ಕುರಿತಾದ ಊಹಾಪೋಹದ ಸುದ್ದಿ ನಂಬಬಾರದು. ಉಪಚುನಾವಣೆ ನಂತರ ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆ ಕರೆದಿದ್ದಾರೆ. ತಜ್ಞರ ಜೊತೆ ಚರ್ಚೆ ಮಾಡುತ್ತಾರೆ. ಪರಿಸ್ಥಿತಿಗೆ ಅನುಗುಣವಾಗಿ ಈ ಬಗ್ಗೆ ತೀರ್ಮಾನ ಮಾಡುತ್ತೇವೆ. ಸದ್ಯ ಸರ್ಕಾರದ ಮುಂದೆ ಲಾಕ್‌ಡೌನ್ ಪ್ರಸ್ತಾಪವೇ ಇಲ್ಲ ಎಂದು ಖಡಾಖಂಡಿತವಾಗಿ ನುಡಿದಿದ್ದಾರೆ.

ರಾಜ್ಯದಲ್ಲಿ ಸೆಕ್ಷನ್ 144 ಜಾರಿ ಮಾಡುವ ಬಗ್ಗೆ ಚರ್ಚಿಸಿಲ್ಲ ಕೊರೊನಾ ನಿಯಂತ್ರಣ ವಿಚಾರವಾಗಿ ಮಾತನಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​, ರಾಜ್ಯದಲ್ಲಿ ಸೆಕ್ಷನ್ 144 ಜಾರಿ ಮಾಡುವ ಬಗ್ಗೆ ಚರ್ಚಿಸಿಲ್ಲ. ಕೊರೊನಾ ಹೆಚ್ಚಿರುವ ಕಡೆ ನೈಟ್​ ಕರ್ಫ್ಯೂ ಜಾರಿ ಮಾಡುತ್ತೇವೆ. ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಇಂದು ಈ ಬಗ್ಗೆ ವರದಿ ನೀಡಲಿದೆ. ಅದನ್ನು ಮುಖ್ಯಮಂತ್ರಿಗಳಿಗೆ ತಲುಪಿಸುತ್ತೇವೆ ಎಂದು ಹೇಳಿದ್ದಾರೆ. ಮುಖ್ಯವಾಗಿ ಮಧುವೆ, ಶುಭ ಸಮಾರಂಭಗಳಿಗೆ ಇನ್ನೂ ಕಟ್ಟುನಿಟ್ಟಿನ ನಿಯಮ ಜಾರಿ ಆಗಲಿದೆ. ಎಲ್ಲಿ ಕೊರೊನಾ ಕೇಸ್ ಜಾಸ್ತಿ ಆಗುತ್ತೆ ಅಲ್ಲಿ ನೈಟ್ ಕರ್ಫ್ಯೂ ಹಾಕುವ ಬಗ್ಗೆ ಯೋಚನೆ ಇದೆ. ಸರ್ವಪಕ್ಷ ಸಭೆ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಿದ್ದಾರೆ.

(Karnataka CM BS Yediyurappa says there is no thought of lockdown instead we will extend night curfew) ಇದನ್ನೂ ಓದಿ: ಕೊರೊನಾ ತಡೆಗೆ ಮಹಾರಾಷ್ಟ್ರ, ಕೇರಳದಲ್ಲಿ ಟಫ್​ ರೂಲ್ಸ್​.. ಕರ್ನಾಟಕಕ್ಕೂ ಅನಿವಾರ್ಯವಾಯ್ತಾ ಕಠಿಣ ನಿಯಮಾವಳಿಗಳು

Published On - 10:07 am, Wed, 14 April 21