ರಮೇಶ್ ಜಾರಕಿಹೊಳಿ ಸಿಡಿ ಕೇಸ್​ಗೆ ಸಿಕ್ತು ಮಹತ್ವದ ಸಾಕ್ಷ್ಯ.. ಮಾಲೂರಿನ ಯುವತಿಯಿಂದ ಕಲೆ ಹಾಕುತ್ತಿದ್ದಾರೆ ಮಾಹಿತಿ

ಮಾಲೂರಿನ ಈ ಯುವತಿಗೆ ಸಿಡಿ ಗ್ಯಾಂಗ್ ಒಂದು ದಿನಕ್ಕೆ ಇಪ್ಪತ್ತೈದು ಸಾವಿರದಂತೆ ಹಣ ನೀಡಿದ್ದಾರಂತೆ. ಸಿಡಿ ರಿಲೀಸ್ ಆಗುವ ಸಮಯದಲ್ಲಿ ಸಿಡಿ ಲೇಡಿ ತನ್ನ ಮುಖ ಎಲ್ಲವು ಬಯಲಾಗಿದೆ ಎಂದು ಖಿನ್ನತೆಗೆ ಒಳಗಾಗಿದ್ದಳಂತೆ. ಆಗ ಸಿಡಿ ಲೇಡಿಗೆ ಕೋಲಾರದ ಮಾಲೂರಿನ ಯುವತಿ ಮಾನಸಿಕವಾಗಿ ಧೈರ್ಯ ತುಂಬಿ ಸಹಾಯ ಮಾಡಿದ್ದಾಳಂತೆ.

ರಮೇಶ್ ಜಾರಕಿಹೊಳಿ ಸಿಡಿ ಕೇಸ್​ಗೆ ಸಿಕ್ತು ಮಹತ್ವದ ಸಾಕ್ಷ್ಯ.. ಮಾಲೂರಿನ ಯುವತಿಯಿಂದ ಕಲೆ ಹಾಕುತ್ತಿದ್ದಾರೆ ಮಾಹಿತಿ
ಸಿಡಿ ಲೇಡಿ
Follow us
ಆಯೇಷಾ ಬಾನು
|

Updated on: Apr 14, 2021 | 11:45 AM

ಬೆಂಗಳೂರು: ರಮೇಶ್ ಜಾರಕಿಹೊಳಿ CD ಕೇಸ್​ಗೆ ಸಂಬಂಧಿಸಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಎಸ್​ಐಟಿಗೆ ಒಂದು ಮಹತ್ವದ ಸಾಕ್ಷಿ ಸಿಕ್ಕಿದೆ. ಸಿಡಿ ಬಿಡುಗಡೆ ಸಮಯದಲ್ಲಿ ಸಿಡಿ ಲೇಡಿ ಜೊತೆಗೆ ಇದ್ದ ಕೋಲಾರದ ಮಾಲೂರು ಮೂಲದ ಓರ್ವ ಯುವತಿಯನ್ನು ಪತ್ತೆ ಮಾಡಿದ್ದ ಎಸ್​ಐಟಿ ಆಕೆಯಿಂದ ಮಹತ್ವದ ಸಾಕ್ಷಿ ಕಲೆ ಹಾಕಿದೆ. ಮಾಲೂರಿನ ಈ ಯುವತಿ ಸಿಡಿ ರಿಲೀಸ್ ಆಗುವ ಸಮಯದಲ್ಲಿ ಹಾಗೂ ಸಿಡಿ ರಿಲೀಸ್ ಆಗಿದ ನಂತ್ರ ಸಹ ಸಿಡಿ ಲೇಡಿ ಜೊತೆಗೆ ಇದ್ದಾಳಂತೆ. ಸದ್ಯ ಈಕೆಯಿಂದ ಹೇಳಿಕೆ ಪಡೆದಿರುವ ಎಸ್​ಐಟಿಗೆ ಮಹತ್ವದ ಸಾಕ್ಷ್ಯ ಸಿಕ್ಕಿದೆ. ಹಾಗಾದ್ರೆ ಆ ಯುವತಿ ನೀಡಿದ ಹೇಳಿಕೆ ಏನು ಎಂಬುದರ ಡೀಟೈಲ್ಸ್ ಇಲ್ಲಿದೆ.

ಸಿಡಿ ಲೇಡಿ ಖಿನ್ನತೆಗೆ ಒಳಗಾಗಿದ್ದಾಗ ಸಾಥ್ ನೀಡಿದ್ದ ಮಾಲೂರಿನ ಯುವತಿ ಮಾಲೂರಿನ ಈ ಯುವತಿಗೆ ಸಿಡಿ ಗ್ಯಾಂಗ್ ಒಂದು ದಿನಕ್ಕೆ 25 ಸಾವಿರದಂತೆ ಹಣ ನೀಡಿದ್ದಾರಂತೆ. ಸಿಡಿ ರಿಲೀಸ್ ಆಗುವ ಸಮಯದಲ್ಲಿ ಸಿಡಿ ಲೇಡಿ ತನ್ನ ಮುಖ ಎಲ್ಲವು ಬಯಲಾಗಿದೆ ಎಂದು ಖಿನ್ನತೆಗೆ ಒಳಗಾಗಿದ್ದಳಂತೆ. ಆಗ ಸಿಡಿ ಲೇಡಿಗೆ ಕೋಲಾರದ ಮಾಲೂರಿನ ಯುವತಿ ಮಾನಸಿಕವಾಗಿ ಧೈರ್ಯ ತುಂಬಿ ಸಹಾಯ ಮಾಡಿದ್ದಾಳಂತೆ. ನಂತ್ರ ಯುವತಿ ಜೊತೆಗೂ ಸಾಕಷ್ಟು ಸಮಯ ಕಳೆದಿದ್ದಾಳೆ. ಈ ವೇಳೆ ಯುವತಿಯನ್ನು ಯಾರು ಯಾರು ಭೇಟಿ ಮಾಡಿದ್ರು. ಯಾರು ಯಾರು ಎಷ್ಟು ಹಣ ನೀಡಿದ್ರು ಎಲ್ಲವನ್ನೂ ಮಾಲೂರಿನ ಈ ಯುವತಿ ಬಾಯಿ ಬಿಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯ ಎಸ್​ಐಟಿ ಕೋಲಾರದ ಯುವತಿಯನ್ನು ಸಾಕ್ಷಿಯಾಗಿ ಪರಿಗಣಿಸಿದೆ.

ಮಾಲೂರಿನ ಯುವತಿ, ಸಿಡಿ ಲೇಡಿ ಜೊತೆ ಎಲ್ಲಿ ಎಲ್ಲಿ ಇದ್ದರು ಎಂದು ಸ್ಥಳವನ್ನು ತೋರಿಸಿದ್ದಾರೆ. ವಿಟ್ನೆಸ್ ಮಾಡಿಕೊಂಡು ಹೇಳಿಕೆ ಕೂಡ ದಾಖಲಿಸಲಾಗಿದೆ. ಸದ್ಯ ಎಸ್​ಐಟಿ ಹೆಚ್ಚಿನ ತನಿಖೆ ಮುಂದುವರೆಸಿದ್ದು ಇದುವರೆಗೆ 70ಕ್ಕೂ ಹೆಚ್ಚು ಜನರ ಹೇಳಿಕೆ ದಾಖಲಿಸಿಕೊಂಡಿದೆ. ತನಿಖೆ ಅಂಗವಾಗಿ ಹಲವಾರು ಜನರನ್ನು ವಿಚಾರಣೆ ನಡೆಸಿದೆ. ಇದುವರೆಗೆ ಎಸ್​ಐಟಿಗೆ ಸಿಕ್ಕಿರೊ ಪ್ರಮುಖ ಸಾಕ್ಷಿ ಎಂದರೆ ಯುವತಿ ಮಾಜಿ ಬಾಯ್ ಫ್ರೆಂಡ್ ಹಾಗೂ ಕೋಲಾರದ ಮಾಲೂರಿನ ಯುವತಿ.

ಸಿಡಿ ಕಿಂಗ್ ಪಿನ್​ಗಳ ಹಿಂದೆ ಗ್ರಾನೈಟ್ ಉದ್ಯಮಿ ಸಂಪೂರ್ಣ ಕೇಸ್​ನಲ್ಲಿ ಕೋಟ್ಯಾಂತರ ರೂ ಹಣ ಖರ್ಚಾಗಿದೆ. ಗ್ರಾನೈಟ್ ಉದ್ಯಮಿ ಕನಕಪುರದ ಶಿವಕುಮಾರ್​ನಿಂದ ಫೈನಾನ್ಸ್ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಶಿವಕುಮಾರ್ ಮೂಲತಃ ಕನಕಪುರದವರು. ಜೆಪಿನಗರದಲ್ಲಿ ವಾಸವಾಗಿರುವ ಉದ್ಯಮಿ ಶಿವಕುಮಾರ್, ನರೇಶ್ ಹಾಗೂ ಶ್ರವಣ್​ಗೆ ಹಣ ಸಂದಾಯ ಮಾಡಿದ್ದಾರೆ. ಸದ್ಯ ಶಿವಕುಮಾರ್ ಹಾಗೂ ಆತನ ಚಾಲಕ ಪರಶಿವಮೂರ್ತಿ ಸಹ ನಾಪತ್ತೆಯಾಗಿದ್ದಾರೆ. ಶಿವಕುಮಾರ್​ಗಾಗಿಯೂ ಎಸ್​ಐಟಿ ಹುಡುಕಾಟ ನಡೆಸುತ್ತಿದೆ. ಸದ್ಯ ತನ್ನ ಗ್ರಾನೈಟ್ ಕ್ವಾರೆ ಹಾಗೂ ತನ್ನ ಎಲ್ಲ ಉದ್ಯಮಗಳನ್ನು ಅರ್ಧಕ್ಕೆ ನಿಲ್ಲಿಸಿ ಶಿವಕುಮಾರ್ ಎಸ್ಕೇಪ್ ಅಗಿದ್ದಾರೆ.

(Ramesh Jarkiholi CD Case CD Lady Friend From Malur Narrates The Travel History of The CD Gang to SIT)

ಇದನ್ನೂ ಓದಿ: ನಾನು ಉಲ್ಟಾ ಹೊಡೆದಿಲ್ಲ, ಈ ಹಿಂದೆ ನೀಡಿದ ಹೇಳಿಕೆಗೆ ಬದ್ಧಳಾಗಿದ್ದೇನೆ.. ರಿಲೀಸ್ ಆಯ್ತು ಸಿಡಿ ಲೇಡಿಯ ಮತ್ತೊಂದು ವಿಡಿಯೋ

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್