AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್​ ಮಾಡಲ್ಲ.. ಇನ್ನೂ 10 ಕೊವಿಡ್​​ ಕೇರ್​ ಸೆಂಟರ್​ ಆರಂಭಿಸ್ತೇವೆ, ಮಾರುಕಟ್ಟೆಗಳ ವಿಕೇಂದ್ರೀಕರಣ ಮಾಡ್ತೇವೆ: ಗೌರವ್ ಗುಪ್ತ

ಈಗ ನೈಟ್​ಕರ್ಫ್ಯೂ ಜಾರಿಯಲ್ಲಿದೆ. ಅಗತ್ಯ ಬಿದ್ದರೆ 144 ಸೆಕ್ಷನ್​ ಜಾರಿಗೊಳಿಸಲಾಗುವುದು. ದೊಡ್ಡ ದೊಡ್ಡ ಮಾರುಕಟ್ಟೆಗಳ ವಿಕೇಂದ್ರೀಕರಣಕ್ಕೆ ಚಿಂತನೆ ನಡೆಸಲಾಗುತ್ತಿದ್ದು, ಅದಕ್ಕೆ ಬೇಕಾದ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದ್ದೇವೆ.

ಲಾಕ್​ಡೌನ್​ ಮಾಡಲ್ಲ.. ಇನ್ನೂ 10 ಕೊವಿಡ್​​ ಕೇರ್​ ಸೆಂಟರ್​ ಆರಂಭಿಸ್ತೇವೆ, ಮಾರುಕಟ್ಟೆಗಳ ವಿಕೇಂದ್ರೀಕರಣ ಮಾಡ್ತೇವೆ: ಗೌರವ್ ಗುಪ್ತ
ಬಿಬಿಎಂಪಿ ಆಯುಕ್ತ ಗೌರವ್​ ಗುಪ್ತಾ
Skanda
| Updated By: preethi shettigar|

Updated on: Apr 14, 2021 | 9:47 AM

Share

ಬೆಂಗಳೂರು: ರಾಜ್ಯದಲ್ಲಿ ಪ್ರತಿನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಉಲ್ಬಣವಾಗುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲೂ ಕಳೆದೊಂದು ವಾರದಿಂದ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಭಾಯಿಸಲು ಅನುಕೂಲವಾಗುವಂತೆ ಬಿಬಿಎಂಪಿಯಿಂದ 10 ಕೊವಿಡ್ ಕೇರ್​ ಸೆಂಟರ್ ತೆರೆಯುತ್ತೇವೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಬೆಂಗಳೂರಿನಲ್ಲಿ ತಿಳಿಸಿದ್ದಾರೆ. ಈಗಾಗಲೇ 800 ಬೆಡ್​ಗಳ ಎರಡು ಕೊವಿಡ್ ಕೇರ್ ಸೆಂಟರ್​ಗಳು ಕಾರ್ಯ ನಿರ್ವಹಿಸುತ್ತಿವೆ. ಇನ್ನು ಮುಂದೆ ಹೊಸದಾಗಿ ತೆರೆಯಲು ನಿರ್ಧರಿಸಿರುವ 10 ಕೊವಿಡ್ ಕೇರ್ ಸೆಂಟರ್​ಗಳಲ್ಲಿ 1,500 ಬೆಡ್​ಗಳ ವ್ಯವಸ್ಥೆ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ.

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಪರಿಸ್ಥಿತಿ ಹೇಗಿದೆ ಎನ್ನುವುದರ ಬಗ್ಗೆ ವಿವರಣೆ ನೀಡಲಾಗಿದೆ. ಈಗಾಗಲೇ 2,500 ಬೆಡ್​ಗಳನ್ನು ಖಾಸಗಿ ಆಸ್ಪತ್ರೆಗಳಿಂದ ಪಡೆದಿದ್ದೇವೆ. ಇನ್ನೂ 5,000 ಬೆಡ್​ಗಳನ್ನು ಅಲ್ಲಿಂದ ಪಡೆಯಲಿದ್ದೇವೆ. ನಮ್ಮ ಎಲ್ಲಾ ಪ್ರಯತ್ನದ ಜೊತೆಗೆ ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಹೀಗಾಗಿ ಜನರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಸ್ತುತ ಕೊರೊನಾ ಸೋಂಕಿತರ ಮರಣ ಪ್ರಮಾಣ ಶೇ.0.5 ರಷ್ಟು ಇದೆ. ಇದು ಮತ್ತಷ್ಟು ಕಡಿಮೆಯಾಗಬೇಕು. ಐಸಿಯು ಬೆಡ್​ಗಳನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಮೆಡಿಕಲ್ ಕಾಲೇಜುಗಳೊಂದಿಗೆ ಸಭೆ ನಡೆಸಲಾಗಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯ ಸಲಹೆ ಸಹಕಾರ ಬೇಕೆಂದರೂ ಆಪ್ತಮಿತ್ರ ಹೆಲ್ಪ್​ ಲೈನ್​ ಸಂಖ್ಯೆ 14410ನ್ನು ಸಂಪರ್ಕಿಸಬಹುದು. ಇದರ ಹೊರತಾಗಿ, ಲಾಕ್​ಡೌನ್​ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡದ್ದಾರೆ. ಹೀಗಾಗಿ ಲಾಕ್​ಡೌನ್ ಮಾಡುವ ಯಾವುದೇ ನಿರ್ಧಾರವಿಲ್ಲ ಎಂದು ಹೇಳಿದ್ದಾರೆ.

ಈಗ ನೈಟ್​ಕರ್ಫ್ಯೂ ಜಾರಿಯಲ್ಲಿದೆ. ಅಗತ್ಯ ಬಿದ್ದರೆ 144 ಸೆಕ್ಷನ್​ ಜಾರಿಗೊಳಿಸಲಾಗುವುದು. ದೊಡ್ಡ ದೊಡ್ಡ ಮಾರುಕಟ್ಟೆಗಳ ವಿಕೇಂದ್ರೀಕರಣಕ್ಕೆ ಚಿಂತನೆ ನಡೆಸಲಾಗುತ್ತಿದ್ದು, ಅದಕ್ಕೆ ಬೇಕಾದ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದ್ದೇವೆ. ಬಹುಮುಖ್ಯವಾಗಿ ಈ ಸಂದರ್ಭದಲ್ಲಿ ರಾಜ್ಯಕ್ಕೆ 10 ಲಕ್ಷ ಡೋಸ್ ಲಸಿಕೆ ಅಗತ್ಯವಿದೆ ಬೆಂಗಳೂರಿಗೂ 3 ಲಕ್ಷ ಡೋಸ್ ಲಸಿಕೆ ಬೇಕಿದೆ. ಈ ವಿಚಾರವನ್ನು ಅವಲೋಕಿಸಿ ಲಸಿಕೆ ನೀಡಲು ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕೊರೊನಾ ಸಾವಿನಾರ್ಭಟ ಶುರು.. ದಿನದಿಂದ ದಿನಕ್ಕೆ ಏರುತ್ತಿದೆ ಸೋಂಕಿಗೆ ಬಲಿಯಾಗುವವರ ಸಂಖ್ಯೆ 

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ತೀವ್ರ; ಕಠಿಣ ನಿರ್ಬಂಧ ಘೋಷಿಸಿದ ಸಿಎಂ ಉದ್ಧವ್ ಠಾಕ್ರೆ

(No Lockdown we will start extra 10 Covid care centers says BBMP commissioner Gaurav Gupta)