ಬೆಂಗಳೂರಿನಲ್ಲಿ ಕೊರೊನಾ ಸಾವಿನಾರ್ಭಟ ಶುರು.. ದಿನದಿಂದ ದಿನಕ್ಕೆ ಏರುತ್ತಿದೆ ಸೋಂಕಿಗೆ ಬಲಿಯಾಗುವವರ ಸಂಖ್ಯೆ

Corona Death ಜನವರಿಯ ಇಡೀ ತಿಂಗಳಿನಲ್ಲಿ 66 ಜನ ಸೋಂಕಿತರು ಸಾವನ್ನಪ್ಪಿದ್ದರು. ಫೆಬ್ರವರಿ ತಿಂಗಳಲ್ಲಿ 88 ಜನ ಮೃತಪಟ್ಟಿದ್ದರು. ಹಾಗೂ ಮಾರ್ಚ್ ಇಡೀ ತಿಂಗಳಿನಲ್ಲಿ 147 ಜನ ಸೋಂಕಿತರು ಬಲಿಯಾಗಿದ್ದರು. ಆದರೆ ಏಪ್ರಿಲ್ ತಿಂಗಳ 13ಕ್ಕೆ ಅಂದ್ರೆ ಕೇವಲ 13 ದಿನದಲ್ಲಿ 280 ಜನ ಸೋಂಕಿತರು ಮೃತಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಕೊರೊನಾ ಸಾವಿನಾರ್ಭಟ ಶುರು.. ದಿನದಿಂದ ದಿನಕ್ಕೆ ಏರುತ್ತಿದೆ ಸೋಂಕಿಗೆ ಬಲಿಯಾಗುವವರ ಸಂಖ್ಯೆ
ಪ್ರಾತಿನಿಧಿಕ ಚಿತ್ರ
Follow us
ಆಯೇಷಾ ಬಾನು
|

Updated on: Apr 14, 2021 | 7:33 AM

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಆರ್ಭಟದ ನಡುವೆ ಜೀವ ಭಯ ಶುರುವಾಯಿದೆ. ಎರಡನೇ ಅಲೆಯಿಂದ ಯಾವುದೇ ಸಾವು ನೋವು ಆಗಲ್ಲವೆಂದು ಸೈಲೆಂಟ್ ಆಗಿದ್ದ ಅಧಿಕಾರಿಗಳಿಗೆ ನಡುಕ ಶುರುವಾಗಿದೆ. ನಗರದಲ್ಲಿ ಸೋಂಕಿತರ ಜೊತೆ ಜೊತೆಗೆ ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಏಪ್ರೀಲ್ 2 ನೇ ತಾರೀಖಿನಂದು 5 ಜನ, ಏ.3 ರಂದು 6 ಜನ ಸೋಂಕಿತರು ಸಾವನ್ನಪ್ಪಿದ್ರು. ಆದ್ರೆ ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಸಾವಿನಾರ್ಭಟ ಜೋರಾಗಿದೆ.

ಜನವರಿಯ ಇಡೀ ತಿಂಗಳಿನಲ್ಲಿ 66 ಜನ ಸೋಂಕಿತರು ಸಾವನ್ನಪ್ಪಿದ್ದರು. ಫೆಬ್ರವರಿ ತಿಂಗಳಲ್ಲಿ 88 ಜನ ಮೃತಪಟ್ಟಿದ್ದರು. ಹಾಗೂ ಮಾರ್ಚ್ ಇಡೀ ತಿಂಗಳಿನಲ್ಲಿ 147 ಜನ ಸೋಂಕಿತರು ಬಲಿಯಾಗಿದ್ದರು. ಆದರೆ ಏಪ್ರಿಲ್ ತಿಂಗಳ 13ಕ್ಕೆ ಅಂದ್ರೆ ಕೇವಲ 13 ದಿನದಲ್ಲಿ 280 ಜನ ಸೋಂಕಿತರು ಮೃತಪಟ್ಟಿದ್ದಾರೆ. ತಿಂಗಳಾಂತ್ಯಕ್ಕೆ ಸಾವಿನ ಸಂಖ್ಯೆ ಒಂದು ಸಾವಿರ ಸೋಂಕಿತರು ಬಲಿಯಾಗಬಹುದೆಂದು ಅಂದಾಜಿಸಲಾಗಿದೆ.

ದಿನದಿಂದ ದಿನಕ್ಕೆ ಸಾವಿನ ಸಂಖ್ಯೆಯಲ್ಲಿ ಏರಿಕೆ ಏಪ್ರೀಲ್ 7 ರಂದು 25 ಜನ ಸೋಂಕಿತರು ಸಾವು. ಏಪ್ರೀಲ್ 8 ರಂದು 22 ಜ‌ನ ಸೋಂಕಿತರು ಸಾವು. ಏಪ್ರೀಲ್ 9 ರಂದು 29 ಜನ ಸೋಂಕಿತರು ಸಾವು ಏಪ್ರೀಲ್ 10 ರಂದು 19 ಜನ ಸೋಂಕಿತರು ಸಾವು. ಏಪ್ರೀಲ್ 11 ರಂದು 27 ಜನ ಸೋಂಕಿತರು ಸಾವು ಏಪ್ರೀಲ್ 12 ರಂದು 40 ಜನ ಸೋಂಕಿತರು ಸಾವು ಏಪ್ರೀಲ್ 13 ರಂದು 55 ಜನ ಸೋಂಕಿತರು ಸಾವು. ಈ ರೀತಿ ದಿನದಿಂದ ದಿನಕ್ಕೆ ಕೊರೊನಾದಿಂದ ಬಲಿಯಾದವರ ಸಂಖ್ಯೆ ಹೆಚ್ಚುತ್ತಿದೆ. ಇಂದು ಎಷ್ಟು ಜನರನ್ನ ಬಲಿ ಪಡೆಯಲಿದೆ ಕೊರೊನಾ ಎಂಬ ಆತಂಕ ಶುರುವಾಗಿದೆ. ಇನ್ನು ಏಪ್ರಿಲ್ ತಿಂಗಳ ಆರಂಭದಿಂದ ಇಲ್ಲಿವರೆಗೂ ಅಂದ್ರೆ 13 ದಿನದಲ್ಲಿ 56,136 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಮಾರ್ಚ್​ನಲ್ಲಿ 31,886ಜನ ಸೋಂಕಿತರು ಪತ್ತೆಯಾಗಿದ್ರು. ಫೆಬ್ರವರಿಯಲ್ಲಿ 6,813 ಜನ ಸೋಂಕಿತರು ಪತ್ತೆಯಾಗಿದ್ರು. ಆದ್ರೆ ಏಪ್ರಿಲ್ ತಿಂಗಳ ಆರಂಭದಲ್ಲೇ ಕೊರೊನಾರ್ಭಟ ಜೋರಾಗಿದೆ. ಇದನ್ನು ಕಟ್ಟಿಹಾಕಲು ಅನೇಕ ಪ್ರಯತ್ನಗಳು ಸರ್ಕಾರದಿಂದ ನಡೆಯುತ್ತಿದೆ. ಇದರಂತೆಯೇ ಸಾರ್ವಜನಿಕರೂ ಸಹ ನಿರ್ಲಕ್ಷ್ಯ ಮಾಡದೆ ಕೊರೊನಾ ರೂಲ್ಸ್​​ಗಳನ್ನು ಪಾಲಿಸಬೇಕಿದೆ. ಹಾಗೂ ಸರ್ಕಾರ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ. ಬೆಂಗಳೂರಲ್ಲಿ ಒಟ್ಟು 57,575 ಸಕ್ರಿಯ ಸೋಂಕಿತರಿದ್ದು, ಕೆಲವರಿಗೆ ಬೆಡ್ ಇಲ್ಲದೆ ನರಳಾಡುತ್ತಿದ್ದಾರೆ.

ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ 8778 ಮಂದಿಗೆ ಕೊರೊನಾ ದೃಢ, 67 ಸಾವು

(Day by Day Corona Death Rate is Increasing In Bengaluru)

ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ