ಹೊಸ ತೊಡುಕಿಗೆ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದ ಮೀನುಗಾರನಿಗೆ ಶಾಕ್; ಕೋಡಗುರ್ಕಿ ಕೆರೆಯಲ್ಲಿದ್ದ ಸಾವಿರಾರು ಮೀನುಗಳ ನಿಗೂಢ ಸಾವು

ಹೊಸ ತೊಡುಕಿಗೆ ಭರ್ಜರಿಯಾಗಿ ಮೀನು ವ್ಯಾಪಾರ ಮಾಡಬಹುದೆಂದು ನಂಬಿಕೊಂಡಿದ್ದ ಮುನಿರಾಜು ಎಂಬುವವರ ನಿರೀಕ್ಷೆ ಹೆಚ್ಚಿತ್ತು. ಆದರೆ ಸಾಕಿದ್ದ ಮೀನುಗಳು ನಿಗೂಢವಾಗಿ ಸಾವನ್ನಪ್ಪಿವೆ. ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಕೆರೆ ಕೆರೆಯಲ್ಲಿ ನಡೆದಿದೆ.

ಹೊಸ ತೊಡುಕಿಗೆ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದ ಮೀನುಗಾರನಿಗೆ ಶಾಕ್; ಕೋಡಗುರ್ಕಿ ಕೆರೆಯಲ್ಲಿದ್ದ ಸಾವಿರಾರು ಮೀನುಗಳ ನಿಗೂಢ ಸಾವು
ಮೀನುಗಳ ಮಾರಣಹೋಮ
Follow us
sandhya thejappa
|

Updated on: Apr 14, 2021 | 10:24 AM

ದೇವನಹಳ್ಳಿ: ಹೊಸ ತೊಡುಕಿಗೆ ಭರ್ಜರಿ ವ್ಯಾಪಾರ ಮಾಡಬಹುದೆಂದು ಯೋಚಿಸಿ ರೈತರೊಬ್ಬರು ಮೀನುಗಳನ್ನು ಸಾಕಿದ್ದರು. ಉತ್ತಮ ಬೆಲೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲೂ ಇದ್ದರೂ. ಆದರೆ ಸಾಕಿದ್ದ ಮೀನುಗಳು ಇದೀಗ ಸಾವನ್ನಪಿದ್ದು, ಮೀನುಗಾರನಿಗೆ ಇದೀಗ ಶಾಕ್ ಎದುರಾಗಿದೆ. ಹೊಸ ತೊಡುಕಿಗೆ ಭರ್ಜರಿಯಾಗಿ ಮೀನು ವ್ಯಾಪಾರ ಮಾಡಬಹುದೆಂದು ನಂಬಿಕೊಂಡಿದ್ದ ಮುನಿರಾಜು ಎಂಬುವವರ ನಿರೀಕ್ಷೆ ಹೆಚ್ಚಿತ್ತು. ಆದರೆ ಸಾಕಿದ್ದ ಮೀನುಗಳು ನಿಗೂಢವಾಗಿ ಸಾವನ್ನಪ್ಪಿವೆ. ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಕೆರೆ ಕೆರೆಯಲ್ಲಿ ನಡೆದಿದೆ.

ಹೆಚ್ ಎನ್ ವ್ಯಾಲಿಯಿಂದ ತುಂಬಿದ್ದ ಕೋಡಗುರ್ಕಿ ಕೆರೆಯಲ್ಲಿ ಮೀನುಗಳನ್ನು ಬಿಡಲಾಗಿತ್ತು. ಆದರೆ ಕೆರೆಯಲ್ಲಿದ್ದ ಸಾವಿರಾರು ಮೀನುಗಳು ಸುತ್ತು ಹೋಗಿವೆ. ಮುನಿರಾಜು ಎಂಬುವವರು ಸರ್ಕಾರದಿಂದ ಕೆರೆಯನ್ನು ಹರಾಜಿಗೆ ಪಡೆದು ಕಳೆದ ಹಲವು ವರ್ಷಗಳಿಂದ 2.5 ಲಕ್ಷ ಮೀನನ್ನು ಸಾಕಿದ್ದರು. ಜೊತೆಗೆ ಈ ಭಾರಿಯ ಹೊಸ ತೊಡಕಿಗೆ ಬೆಂಗಳೂರು ಮಾರುಕಟ್ಟೆಗೆ ಹಾಕಲು ನಿರ್ಧರಿಸಿದ್ದರು. ಆದರೆ ಕಿಡಿಗೇಡಿಗಳು ಕೆರೆಗೆ ಕೆಮಿಕಲ್ ಹಾಕಿ ಸಾಯಿಸಿರುವ ಶಂಕೆ ವ್ಯಕ್ತವಾಗಿದ್ದು, ಒಂದು ಕೆಜಿಗೂ ಅಧಿಕ ತೂಕ ಬರುವ ಮೀನುಗಳ ಮಾರಣಹೋಮವಾಗಿವೆ. ಸತ್ತು ಬಿದ್ದಿರುವ ರಾಶಿ ರಾಶಿ ಮೀನುಗಳನ್ನು ಕಂಡು ರೈತ ಮುನಿರಾಜು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ

ದಾವಣಗೆರೆ: ದ್ವೇಷಕ್ಕಾಗಿ ನೀರಿನ ಟ್ಯಾಂಕ್ ಗೆ ವಿಷ ಹಾಕಿದವ ಅರೆಸ್ಟ್

Honey trap twist| ನನ್ನ ವಿರುದ್ಧದ ಷಡ್ಯಂತ್ರ ಅಂತ ಸಿಡಿ ಲೇಡಿ ಕಿಡಿಕಿಡಿ