Ambedkar Jayanthi : ಆ ಹುಡುಗನ ಜೀತ ತಪ್ಪಿಸಿದ ಶಿಕ್ಷಕ

‘ತೋಟದಿಂದ ಶಾಲೆಗೆ ತುಂಬಾ ದೂರವಿರುವುದರಿಂದ ಆ ಶಿಕ್ಷಕ ಅವರ ಕೊಠಡಿಯಲ್ಲಿಯೇ ಆ ಬಡಹುಡುಗನಿಗೆ ತಂಗಲು ಮತ್ತು ಊಟದ ವ್ಯವಸ್ಥೆ ಮಾಡಿ ಓದಿಸುತ್ತಾರೆ. ಶ್ರದ್ಧೆಯಿಂದ ಓದಿ ಎಸ್. ಎಸ್. ಎಲ್.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆಯುವುದರೊಂದಿಗೆ ಆ ಊರಿಗೆ ಮಾದರಿಯಾಗುತ್ತಾನೆ. ಅವನಿಂದು ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತಿದ್ದಾನೆ.‘ ನೌಶಾದ್​ ಜನ್ನತ್​

Ambedkar Jayanthi : ಆ ಹುಡುಗನ ಜೀತ ತಪ್ಪಿಸಿದ ಶಿಕ್ಷಕ
ಲೇಖಕ ನೌಶಾದ್ ಜನ್ನತ್
Follow us
ಶ್ರೀದೇವಿ ಕಳಸದ
|

Updated on:Apr 14, 2021 | 2:19 PM

ಸಂವಿಧಾನಶಿಲ್ಪಿ, ಮಾನವತಾವಾದಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಜನ್ಮದಿನ ಇಂದು. ಅವರನ್ನು ನೀವು ಹೇಗೆ ನೆನಪಿಸಿಕೊಳ್ಳಬಲ್ಲಿರಿ, ಅವರ ಆಶಯಗಳನ್ನು ಜೀವಂತವಾಗಿಡುವಲ್ಲಿ ಹೇಗೆ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಲ್ಲಿರಿ? ಅವರ ಚಿಂತನೆಗಳಿಗೆ ಪೂರಕವಾಗಿ ನಿಮ್ಮನ್ನು ಪ್ರಭಾವಿಸಿದ ಒಂದು ಘಟನೆಯನ್ನು ‘ಟಿವಿ9 ಕನ್ನಡ ಡಿಜಿಟಲ್’ ​ನೊಂದಿಗೆ  ಹಂಚಿಕೊಳ್ಳಬಹುದೆ? ಎಂದು ನಮ್ಮ ನಡುವಿನ ಕೆಲ ಸಹೃದಯರಿಗೆ ಕೇಳಲಾಯಿತು. 

ಪರಿಕಲ್ಪನೆ : ಶ್ರೀದೇವಿ ಕಳಸದ

‘ಭಾರತೀಯ ಪ್ರತಿಯೊಬ್ಬ ಪ್ರಜೆಗೂ 14 ವರ್ಷದವರೆಗೆ ಶಿಕ್ಷಣವನ್ನು ಕಡ್ಡಾಯಪಡಿಸದೆ ಹೋಗಿದ್ದರೆ ಈ ಯುವಕನ ರೀತಿಯ ಹಲವರು, ಸಿರಿವಂತರು ಅಥವಾ ಮೇಲ್ವರ್ಗದವರ ಮನೆಯಲ್ಲಿ ಇಂದಿಗೂ ಜೀತ ಮಾಡಿಕೊಂಡು ಇರಬೇಕಾಗಿತ್ತು. ನಾವು ಮಸೀದಿಮಂದಿರಗಳಿಗೆ ಹೋಗಿ ದೇವರುಗಳನ್ನು ಪೂಜಿಸುವ ಬದಲು ಅಂಬೇಡ್ಕರರ ಪುಸ್ತಕಗಳನ್ನು ಓದಿದರೆ ನಮ್ಮ ಸುತ್ತಮುತ್ತಲು ಕಾಣುವ ಎಲ್ಲ ಸಮಸ್ಯೆ ಮತ್ತು ಅವುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಾಗಬಹುದು. ಮುಖ್ಯವಾಗಿ ಹಿಂದುಳಿದ ವರ್ಗ ಮತ್ತು ಹೆಣ್ಣುಮಕ್ಕಳು ಇಂದೇನಾದರೂ ಸಮಾಜದಲ್ಲಿ ತಲೆ ಎತ್ತಿ ಉಸಿರಾಡುತ್ತಿದ್ದರೆ ಅದಕ್ಕೆ ಮೂಲ ಕಾರಣ ಅಂಬೇಡ್ಕರರ ಸಂವಿಧಾನ.’ 

ಕುಶಾಲನಗರದಲ್ಲಿ ವಾಸಿಸಿರುವ ಲೇಖಕ, ಉದ್ಯಮಿ, ‘ನಮ್ಮ ಕೊಡಗು ಚಾರಿಟೇಬಲ್​ ಟ್ರಸ್ಟ್​’ ಸಂಸ್ಥಾಪಕ ನೌಶಾದ್ ಜನ್ನತ್ತ್ ಅವರ ಬರಹ ನಿಮ್ಮ ಓದಿಗೆ.   

ಸ್ವಾತಂತ್ರ್ಯ ಪೂರ್ವದಲ್ಲಿ ನಾವು ಮುಖ್ಯವಾಗಿ ಅನುಭವಿಸುತಿದ್ದಂತಹ ಜಾತಿ, ವರ್ಣ, ವರ್ಗ ಮತ್ತು ಲಿಂಗತಾರತಮ್ಯದಿಂದ ನಾವೇನಾದರೂ ಇಂದು ಹೊರಬರುವುದರ ಜೊತೆಗೆ ಭಾರತದ ಪ್ರತಿಯೊಬ್ಬ ಪ್ರಜೆಯು ಶಿಕ್ಷಣ, ಆಸ್ತಿ, ಸಮಾನತೆ ಇನ್ನಿತರ ಹಕ್ಕನ್ನು ಪಡೆಯುತ್ತಿದ್ದೇವೆ ಎಂದರೆ ಅದಕ್ಕೆ ಮೂಲ ಕಾರಣ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಅವರು ರಚಿಸಿದ ಸಂವಿಧಾನ.

ಒಂದು ವೇಳೆ ಬಾಬಾಸಾಹೇಬರು ಸಂವಿಧಾನವನ್ನು ರಚಿಸದೆ ಹೋಗಿದ್ದರೆ ಸ್ವಾತಂತ್ರ್ಯಕ್ಕೂ ಮೊದಲು ಇದ್ದ ಹಾಗೆ ಕೆಲವೇ ಕೆಲವು ಸೀಮಿತ ವರ್ಗದವರು ಭೂಮಿಯನ್ನು ಹೊಂದುವಂತವರಾಗಿ, ಆ ಕಾಲದಲ್ಲಿ ವಿಂಗಡಣೆ ಮಾಡುತ್ತಿದ್ದ ಹಾಗೆ ಭೂಮಿ ಇದ್ದವರು ಶ್ರೀಮಂತರಾಗಿ ಮತ್ತು ಭೂಮಿ ಇಲ್ಲದವರಾದ ನಾವು ಬಡವರೆಂಬ ಹಣೆಪಟ್ಟಿ ಹೊತ್ತು ಶಾಶ್ವತವಾಗಿ ಉಳಿಯಬೇಕಾಗಿತ್ತು. ಈ ರೀತಿಯ ಹತ್ತು ಹಲವು ಯಥಾಸ್ಥಿತಿಯನ್ನು ಇಲ್ಲವಾಗಿಸಲು ಮುಖ್ಯಕಾರಣವಾಗಿದ್ದು ಅಂಬೇಡ್ಕರರ ಸಂವಿಧಾನ.

ಅಂಬೇಡ್ಕರರ ವಿಚಾರವಾಗಿ ನನ್ನ ಅನುಭವದ ಒಂದು ಸಣ್ಣ ನಿದರ್ಶನವನ್ನು ನಾನು ನಿಮಗೆ ಹೇಳಬಯಸುತ್ತೇನೆ. ಕೊಡಗಿನ ಮಡಿಕೇರಿ ಬಳಿಯ ಒಂದು ತೋಟದಲ್ಲಿ ಹಿಂದುಳಿದ ವರ್ಗದ ಒಂದು ಕುಟುಂಬ ಹಲವಾರು ವರ್ಷಗಳಿಂದ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು. ಆ ದಂಪತಿಗೆ ಒಬ್ಬ ಮಗನಿದ್ದ. ಗಂಡಹೆಂಡತಿ ಬೆಳಿಗ್ಗೆ ಎದ್ದು ಕೂಲಿಗೆಂದು ಮಾಲೀಕನ ತೋಟಕ್ಕೆ ದುಡಿಯಲು ಹೋದರೆ ಮರಳಿ ಬರುವುದು ಸಂಜೆಯಾಗುತಿತ್ತು. ಇವರು ವಾಸವಿದ್ದ ತೋಟದಿಂದ ಪಕ್ಕದಲ್ಲಿದ್ದ ಸರಕಾರಿ ಶಾಲೆಗೆ ನಾಲ್ಕೈದು ಕಿ. ಮೀ. ದೂರವಿದ್ದುದರಿಂದ, ಅವನನ್ನು ಒಬ್ಬನೇ ಅಷ್ಟು ದೂರ ಕಳುಹಿಸುವುದು ಬೇಡ ಎಂದು, ಶಾಲೆಗೆ ಸೇರಿಸದೆ ಜೊತೆಯಲ್ಲಿ ತೋಟಕ್ಕೆ ಕರೆದುಕೊಂಡು ಹೋಗುತ್ತಿದ್ದರು.

ಹೀಗೆ ಬೆಳೆದ ಹುಡುಗ ಎಂಟೊಂಬತ್ತು ವಯಸ್ಸಾಗುವ ವೇಳೆಗೆ ತೋಟದ ಮತ್ತು ಮಾಲೀಕನ ಮನೆಯ ಅಲ್ಪಸ್ವಲ್ಪ ಕೆಲಸ ಮಾಡುವುದನ್ನು ಪ್ರಾರಂಭಮಾಡಿದ. ದಿನಕಳೆದಂತೆ ಅವನು ತೋಟದ ಕಾಯಂ ಕೆಲಸದಾಳಿಗಿಂತ ಹೆಚ್ಚಾಗಿ ದುಡಿಯುವಂತಾದ. ಇದರಿಂದಾಗಿ ತೋಟದ ಮಾಲೀಕರಿಗೆ ಹೆಚ್ಚು ಖುಷಿಯಾಗತೊಡಗಿತು. ಕಾರಣ ಯುವಕ ಮಾಡುವ ಕೆಲಸಕ್ಕೆ ಅವನ ತಂದೆಗೆ ಅಷ್ಟೋ ಇಷ್ಟೋ ಸಂಬಳಕೊಟ್ಟರೆ ಸಾಕು ಆದರೆ ಅವನು ಪೂರ್ತಿ ಸಂಬಳ ಪಡೆಯುವ ಕೂಲಿಯಾಳಿಗಿಂತ ಹೆಚ್ಚಾಗಿ ದುಡಿಯುತ್ತಾನೆ ಎಂದು.

ಹೀಗಿರುವಾಗ ಪಕ್ಕದ ಶಾಲೆಗೆ ನೂತನ ಶಿಕ್ಷಕರೊಬ್ಬರು ಬರುತ್ತಾರೆ. ಅವರಿಗೆ ಈ ರೀತಿಯಾಗಿ ಪಕ್ಕದ ತೋಟದಲ್ಲಿ ಒಬ್ಬ ಯುವಕ ಶಾಲೆಗೆ ಬಾರದೇ ಅವನ ಕುಟುಂಬದೊಂದಿಗೆ ಜೀತ ಮಾಡುತ್ತಿದ್ದಾನೆ ಎಂದು ತಿಳಿಯುತ್ತದೆ. ಒಂದು ದಿನ ಅವರು ನೇರವಾಗಿ ಹೋಗಿ ತೋಟದ ಮಾಲೀಕ ಮತ್ತು ಅವನ ಪೋಷಕರಲ್ಲಿ ಮಾತನಾಡಿ, ಅವನ ಭವಿಷ್ಯ ಹಾಳುಮಾಡಬೇಡಿ, ಅವನನ್ನು ಶಾಲೆಗೆ ಕಳುಹಿಸಿ ಎಂದು ಹೇಳುತ್ತಾರೆ. ಮೊದಮೊದಲು ಒಪ್ಪದ ಮಾಲೀಕ ಮತ್ತು ಆ ಯುವಕನ ಪೋಷಕರು ಶಿಕ್ಷಕನ ಬಳಿ ಗಲಾಟೆಗೆ ನಿಲ್ಲುತ್ತಾರೆ. ಕೊನೆಗೆ ಶಿಕ್ಷಕ ಪೊಲೀಸರ ಮೊರೆ ಹೋಗುತ್ತೇನೆ ಎಂದು ಹೇಳಲನುವಾದಾಗ ಶಾಲೆಗೆ ಕಳುಹಿಸುತ್ತೇನೆ ಎಂದು ಒಪ್ಪುತ್ತಾರೆ.

ಜೊತೆಗೆ ತೋಟದಿಂದ ಶಾಲೆಗೆ ತುಂಬಾ ದೂರವಿರುವುದರಿಂದ ಆ ಶಿಕ್ಷಕ ಅವರ ಕೊಠಡಿಯಲ್ಲಿಯೇ ಆ ಹುಡುಗನಿಗೆ ತಂಗಲು ಮತ್ತು ಊಟದ ವ್ಯವಸ್ಥೆ ಮಾಡಿ ಓದಿಸುತ್ತಾರೆ. ಶ್ರದ್ಧೆಯಿಂದ ಓದಿ ಎಸ್. ಎಸ್. ಎಲ್.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆಯುವುದರೊಂದಿಗೆ ಆ ಊರಿಗೆ ಮಾದರಿಯಾಗುತ್ತಾನೆ. ಅವನಿಂದು ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತಿದ್ದಾನೆ.

ಭಾರತೀಯ ಪ್ರತಿಯೊಬ್ಬ ಪ್ರಜೆಗೂ 14 ವರ್ಷದವರೆಗೆ ಶಿಕ್ಷಣವನ್ನು ಕಡ್ಡಾಯಪಡಿಸದೆ ಹೋಗಿದ್ದರೆ ಈ ಹುಡುಗನ ರೀತಿಯ ಹಲವರು, ಸಿರಿವಂತರು ಅಥವಾ ಮೇಲ್ವರ್ಗದವರ ಮನೆಯಲ್ಲಿ ಇಂದಿಗೂ ಜೀತ ಮಾಡಿಕೊಂಡು ಇರಬೇಕಾಗಿತ್ತು. ನಾವು ಮಸೀದಿಮಂದಿರಗಳಿಗೆ ಹೋಗಿ ದೇವರುಗಳನ್ನು ಪೂಜಿಸುವ ಬದಲು ಅಂಬೇಡ್ಕರರ ಪುಸ್ತಕಗಳನ್ನು ಓದಿದರೆ ನಮ್ಮ ಸುತ್ತಮುತ್ತಲು ಕಾಣುವ ಎಲ್ಲ ಸಮಸ್ಯೆ ಮತ್ತು ಅವುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಾಗಬಹುದು. ಮುಖ್ಯವಾಗಿ ಹಿಂದುಳಿದ ವರ್ಗ ಮತ್ತು ಹೆಣ್ಣುಮಕ್ಕಳು ಇಂದೇನಾದರೂ ಸಮಾಜದಲ್ಲಿ ತಲೆ ಎತ್ತಿ ಉಸಿರಾಡುತ್ತಿದ್ದರೆ ಅದಕ್ಕೆ ಮೂಲ ಕಾರಣ ಅಂಬೇಡ್ಕರರ ಸಂವಿಧಾನ.

*

ಪರಿಚಯ : ನೌಶಾದ್ ಜನ್ನತ್ತ್ ಅವರು ಮಡಿಕೇರಿ ಬಳಿಯ ಬೋಯಿಕೇರಿ ಮೂಲದವರು. ಜನ್ನತ್​ ಟಿಂಬರ್ಸ್​ ಮತ್ತು ಫರ್ನಿಚರ್ಸ್ ​ಮಾಲೀಕರು. ಸಾಮಾಜಿಕ ಕಾರ್ಯಗಳಲ್ಲಿ ಸದಾ ನಿರತರಾಗಿದ್ದಾರೆ. ಸಾಹಿತ್ಯ ಇವರ ಆಸಕ್ತಿ ಕ್ಷೇತ್ರ. ಕಳೆದ ವರ್ಷ ‘ಕಡಮ್ಮಕಲ್ಲು ಎಸ್ಟೇಟ್’ ಕಾದಂಬರಿಯು ಪ್ರಕಟವಾಗಿದೆ. ಎರಡೇ ದಿನಗಳಲ್ಲಿ ಮೊದಲ ಮುದ್ರಣ ಮಾರಾಟಗೊಂಡು ಜನಪ್ರಿಯವನ್ನೂ ಗಳಿಸಿದೆ. ಜೊತೆಗೆ ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಬಹುಮಾನ ಪ್ರಶಸ್ತಿಯೂ ಇದಕ್ಕೆ ಸಂದಿದೆ. ಇವರ ಎರಡನೇ ಕೃತಿ ‘ಜಲಪ್ರಳಯ’ ಬಿಡುಗಡೆಗೆ ಸಿದ್ದವಾಗಿದ್ದು, ಕೊಡಗಿನಲ್ಲಿ ಜಲಪ್ರಳಯದ ನಂತರದ ನಡೆದ ಹಲವಾರು ಘಟನೆಗಳು, ಹಗರಣಗಳ ವಿವರ ಈ ಪುಸ್ತಕದಲ್ಲಿ ಲಭ್ಯವಾಗಲಿದೆ. ಇವರ ಸಾಮಾಜಿಕ, ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ಗುರತಿಸಿದ ಸರ್ಕಾರ ಮತ್ತು ಸರ್ಕಾರೇತರ ಸಂಘಗಳು ರಾಜ್ಯಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

ಇದನ್ನೂ ಓದಿ : ಎಂಟನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ; ಇಂದು ಅಂಬೇಡ್ಕರ್​ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬೇಡಿಕೆ ಈಡೇರಿಸಲು ಆಗ್ರಹ

Ambedkar Jayanthi special writeup by writer Noushad Jannath

Published On - 1:08 pm, Wed, 14 April 21

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ