Kannada News » Karnataka » ದಾವಣಗೆರೆಯ ರೈತರಿಗೆ ಸೇರಿದ 100ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ಪರಾರಿಯಾದ ದುಷ್ಕರ್ಮಿಗಳು
ದಾವಣಗೆರೆಯ ರೈತರಿಗೆ ಸೇರಿದ 100ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ಪರಾರಿಯಾದ ದುಷ್ಕರ್ಮಿಗಳು
sandhya thejappa |
Updated on: Apr 14, 2021 | 12:32 PM
ಆನಗೋಡು ಸಮೀಪದ ಮುಡೇನಹಳ್ಳಿಯ ಎನ್.ಬಸವರಾಜಪ್ಪ ಎಂಬುವವರು ಸೇರಿದಂತೆ ನಾಲ್ಕು ರೈತರಿಗೆ ಸೇರಿದ ಸುಮಾರು 100ಕ್ಕೂ ಹೆಚ್ಚು ಮರಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ದುಷ್ಕರ್ಮಿಗಳು ತಡ ರಾತ್ರಿ ಬಂದು ಅಡಿಕೆ ಮರಗಳನ್ನು ಕಡಿದು ಹಾಕಿದ್ದಾರೆ. ರೈತರು ಬೆಳಿಗ್ಗೆ ಜಮೀನಿಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.
ನೆಲಕ್ಕೆ ಉರುಳಿರುವ ಅಡಿಕೆ ಮರಗಳು
ದಾವಣಗೆರೆ: ರೈತನಿಗೆ ಸಮಸ್ಯೆಗಳು ಒಂದೆರೆಡಲ್ಲ. ಕೆಲವೊಮ್ಮೆ ಬೆಳೆ ಕೈಕೊಟ್ಟರೆ, ಇನ್ನೊಮ್ಮೆ ಬೆಲೆ ಕೈಕೊಡುತ್ತದೆ. ಈ ಮಧ್ಯೆ ಬಂದು ಹೋಗುವ ತೊಂದರೆಗಳನ್ನು ಹೇಳಲು ಸಾಧ್ಯವಿಲ್ಲ. ಆದರೆ ದಾವಣಗೆರೆ ತಾಲೂಕಿನ ಮುಡೇನಹಳ್ಳಿಯ ರೈತರಿಗೆ ಎದುರಾದ ಸಮಸ್ಯೆ ಎಲ್ಲರ ಮನ ಕಲುಕುತ್ತದೆ. ರೈತರು ಕಷ್ಟ ಪಟ್ಟು ಬೆವರು ಸುರಿಸಿ ಮಗುವಂತೆ ಅಡಿಕೆ ಮರಗಳನ್ನು ಸಾಕಿದ್ದರು. ಆದರೆ ದುಷ್ಕರ್ಮಿಗಳು ಫಲಕ್ಕೆ ಬಂದ ಅಡಿಕೆ ಮರಗಳನ್ನ ಕಡಿದು ಪರಾರಿಯಾಗಿದ್ದಾರೆ. ನೆಲಕ್ಕೆ ಉರುಳಿದ ಅಡಿಕೆ ಮರಗಳನ್ನು ನೋಡಿ ರೈತರು ಕಂಗಾಲಾಗಿದ್ದಾರೆ.
ಆನಗೋಡು ಸಮೀಪದ ಮುಡೇನಹಳ್ಳಿಯ ಎನ್.ಬಸವರಾಜಪ್ಪ ಎಂಬುವವರು ಸೇರಿದಂತೆ ನಾಲ್ಕು ರೈತರಿಗೆ ಸೇರಿದ ಸುಮಾರು 100ಕ್ಕೂ ಹೆಚ್ಚು ಮರಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ದುಷ್ಕರ್ಮಿಗಳು ತಡ ರಾತ್ರಿ ಬಂದು ಅಡಿಕೆ ಮರಗಳನ್ನು ಕಡಿದು ಹಾಕಿದ್ದಾರೆ. ರೈತರು ಬೆಳಿಗ್ಗೆ ಜಮೀನಿಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಹಳೇ ದ್ವೇಷದ ಹಿನ್ನೆಲೆ ಈ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಒಟ್ಟಾರೆ ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದ ರೈತರಿಗೆ ಇದೀಗ ದುಃಖದ ಸಂಗತಿ ಎದುರಾಗಿದ್ದು, ಈ ಪ್ರಕರಣ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.