ಕುಂಭ ಮೇಳದಲ್ಲಿ ಮೂರನೇ ಶಾಹಿ ಸ್ನಾನ ಇಂದು, ಕೊವಿಡ್ ಮಾರ್ಗಸೂಚಿ ಪಾಲಿಸಿ: ಉತ್ತರಾಖಂಡ ಸಿಎಂ ತೀರತ್ ಸಿಂಗ್ ರಾವತ್ ಮನವಿ

Kumbh Mela 2021: ನಾಲ್ಕು ಶಾಹಿ ಸ್ನಾನ ಮತ್ತು 11 ಕುಂಭ ಸ್ನಾನಗಳ ಪೈಕಿ ಬೈಸಾಕಿ ಸ್ನಾನ ಅತೀ ದೊಡ್ಡ ಸ್ನಾನ ಎಂದು ಪರಿಗಣಿಸಲಾಗುತ್ತದೆ. 2010ರಲ್ಲಿ ಬೈಸಾಕಿ ಸ್ನಾನಕ್ಕಾಗಿ ಇಲ್ಲಿಗೆ 1.60 ಕೋಟಿ ಭಕ್ತರು ಆಗಮಿಸಿದ್ದರು. ಈ ವರ್ಷ 6 ಲಕ್ಷ ಭಕ್ತರು ಬೈಸಾಕಿ ಸ್ನಾನಕ್ಕಾಗಿ ಆಗಮಿಸಿದ್ದಾರೆ

ಕುಂಭ ಮೇಳದಲ್ಲಿ ಮೂರನೇ ಶಾಹಿ ಸ್ನಾನ ಇಂದು, ಕೊವಿಡ್ ಮಾರ್ಗಸೂಚಿ ಪಾಲಿಸಿ: ಉತ್ತರಾಖಂಡ ಸಿಎಂ ತೀರತ್ ಸಿಂಗ್ ರಾವತ್ ಮನವಿ
ಕುಂಭ ಮೇಳದಲ್ಲಿ ಗಂಗಾ ಆರತಿ
Follow us
ರಶ್ಮಿ ಕಲ್ಲಕಟ್ಟ
|

Updated on:Apr 14, 2021 | 12:15 PM

ಹರಿದ್ವಾರ: ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಇಂದು ಮೂರನೇ ಶಾಹಿ ಸ್ನಾನ (ಪವಿತ್ರ ಸ್ನಾನ) ನಡೆಯುತ್ತಿದೆ. ಕುಂಭ ಮೇಳದಲ್ಲಿ ನಡೆಯುವ ಬೃಹತ್ ಶಾಹಿ ಸ್ನಾನ ಇದಾಗಿದೆ. ನಿಗದಿತ ಕಾರ್ಯಕ್ರಮಗಳ ಪಟ್ಟಿ ಪ್ರಕಾರ ಈ ವರ್ಷ ಹರಿದ್ವಾರದಲ್ಲಿ 4 ಶಾಹಿ ಸ್ನಾ ಮತ್ತು 9 ಗಂಗಾ ಸ್ನಾನ ನಡೆಯಲಿದೆ. ಮಾರ್ಚ್ 11, ಮಹಾಶಿವರಾತ್ರಿಯಂದು ಮೊದಲ ಶಾಹಿಸ್ನಾನ ನಡೆದಿತ್ತು. ಏಪ್ರಿಲ್ 12 (ಸೋಮವಾರ) ಸೋಮಾವತಿ ಅಮವಾಸ್ಯೆಯಂದು ಎರಡನೇ ಶಾಹಿ ಸ್ನಾನ ನಡೆದಿದೆ.

ನಾಲ್ಕು ಶಾಹಿ ಸ್ನಾನ ಮತ್ತು 11 ಕುಂಭ ಸ್ನಾನಗಳ ಪೈಕಿ ಬೈಸಾಕಿ ಸ್ನಾನ ಅತೀ ದೊಡ್ಡ ಸ್ನಾನ ಎಂದು ಪರಿಗಣಿಸಲಾಗುತ್ತದೆ. 2010ರಲ್ಲಿ ಬೈಸಾಕಿ ಸ್ನಾನಕ್ಕಾಗಿ ಇಲ್ಲಿಗೆ 1.60 ಕೋಟಿ ಭಕ್ತರು ಆಗಮಿಸಿದ್ದರು. ಈ ವರ್ಷ 6 ಲಕ್ಷ ಭಕ್ತರು ಬೈಸಾಕಿ ಸ್ನಾನಕ್ಕಾಗಿ ಆಗಮಿಸಿದ್ದಾರೆ ಎಂದು ಕುಂಭ ಮೇಳದ ಮೇಲ್ವಿಚಾರಣೆ ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿ ಸಂಜಯ್ ಗುಂಜಿಯಲ್ ಹೇಳಿದ್ದಾರೆ.

ಶಾಹಿ ಸ್ನಾನಕ್ಕಾಗಿ ಹರಿದ್ವಾರಕ್ಕೆ ಆಗಮಿಸುವ ಭಕ್ತರು ಕೊವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು. ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಬೇಕು, ಕೈಗಳನ್ನು ಸ್ಯಾನಿಟೈಜ್ ಮಾಡಬೇಕು ಎಂದು ಉತ್ತರಾಖಂಡದ ಮುಖ್ಯಮಂತ್ರಿ ತೀರತ್ ಸಿಂಗ್ ರಾವತ್ ಭಕ್ತರಲ್ಲಿ ಮನವಿ ಮಾಡಿದ್ದಾರೆ. ಹರ್ ಕೀ ಪೌರಿಯಲ್ಲಿ ಪ್ರತಿಯೊಂದು ಅಖಾ ರಗಳಿಗೂ ಪವಿತ್ರ ಸ್ನಾನಕ್ಕಾಗಿ ಪ್ರತ್ಯೇಕ ಸಮಯ ನಿಗದಿ ಪಡಿಸಲಾಗಿದೆ. ಇನ್ನುಳಿದ ಘಾಟ್ (ನದೀ ತಟಗಳಲ್ಲಿ) ಇತ ರ ಭಕ್ತರು ಸ್ನಾನ ಮಾಡಬಹುದು ಎಂದು ಹೇಳಿದ್ದಾರೆ. ಸೋಮವಾರ ಶಾಹಿ ಸ್ನಾನಕ್ಕೆ ಸುಮಾರು 35 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಆಗಮಿಸಿದ್ದು ಹೆಚ್ಚಿನ ಭಕ್ತರು ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕ ಅಂತರ ಕಾಪಾಡವುದು ಇಲ್ಲಿ ಅಸಾಧ್ಯ ಎಂದು ಉತ್ತರಾಖಂಡ ಸರ್ಕಾರ ಹೇಳಿತ್ತು.

ಏಪ್ರಿಲ್ 1ರಿಂದ ಏಪ್ರಿಲ್ 30ರ ವರೆಗೆ ಹರಿದ್ವಾರದಲ್ಲಿ ನಡೆಯವ ಕುಂಭ ಮೇಳದಲ್ಲಿ ಸ್ನಾನ ಪ್ರಮುಖ ಕಾರ್ಯಕ್ರಮವಾಗಿದೆ. ಕೊರೊನಾವೈರಸ್ ಸಾಂಕ್ರಾಮಿಕದ ನಡುವೆಯೇ ಈ ಬಾರಿ ಕುಂಭ ಮೇಳ ನಡೆಯುತ್ತಿದ್ದು, ಒಂದು ತಿಂಗಳ ಕಾಲ ಇದು ನಡೆಯಲಿದೆ. ಸಾಮಾನ್ಯವಾಗಿ ನಾಲ್ಕು ತಿಂಗಳ ಕಾಲ ಹರಿದ್ವಾರದಲ್ಲಿ ಕುಂಭ ಮೇಳ ನಡೆಯುತ್ತದೆ.

ಭಾರತದ ನಾಲ್ಕು ರಾಜ್ಯಗಳಲ್ಲಿ ಕುಂಭ ಮೇಳ ನಡೆಯುತ್ತದೆ. ನಾಶಿಕ್ (ಮಹಾರಾಷ್ಟ್ರ), ಹರಿದ್ವಾರ (ಉತ್ತರಾಖಂಡ), ಪ್ರಯಾಗರಾಜ್ (ಉತ್ತರ ಪ್ರದೇಶ), ಉಜ್ಜೈನ್ (ಮಧ್ಯ ಪ್ರದೇಶ)ದಲ್ಲಿ ಕುಂಭ ಮೇಳ ನಡೆಯುತ್ತದೆ.

ಉತ್ತರಾಖಂಡದಲ್ಲಿ ಮಂಗಳವಾರ 1,925 ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು, 13 ಮಂದಿ ಸಾವಿಗೀಡಾಗಿದ್ದಾರೆ. ಡೆಹ್ರಾಡೂನ್ ಜಿಲ್ಲೆಯಲ್ಲಿ 775, ಹರಿದ್ವಾರದಲ್ಲಿ 594, ನೈನಿತಾಲ್ ನಲ್ಲಿ 217, ಉಧಮ್ ಸಿಂಗ್ ನಗರದಲ್ಲಿ 172 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದೆ. ಹರಿದ್ವಾರದಲ್ಲೀಗ ಸಕ್ರಿಯ ಕೊವಿಡ್ ಪ್ರಕರಣಗಳ ಸಂಖ್ಯೆ 2,812ಕ್ಕೇರಿದೆ.

ಸೋಮವಾರ ಇಲ್ಲಿ 408 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿತ್ತು. ಭಕ್ತರ ಜತೆ, ಸ್ವಾಮಿಗಳು, 13 ಅಖಾರಗಳ ಪ್ರತಿನಿಧಿಗಳು ಕುಂಭಮೇಳದಲ್ಲಿ ಭಾಗವಹಿಸಿದ್ದು, ಹಲವು ಸ್ವಾಮಿಗಳಿಗೆ ಕೊವಿಡ್ ದೃಢಪಟ್ಟಿದೆ

ಉತ್ತರಾಖಂಡ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಇಲ್ಲಿ ಮಂಗಳವಾರ ಗರಿಷ್ಠ ಕೊರೊನಾ ಪ್ರಕರಣ ಪತ್ತೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 1,12,071ಕ್ಕೇರಿದ್ದು ಸಾವಿನ ಸಂಖ್ಯೆ 1,780ಕ್ಕೆ ತಲುಪಿದೆ. 9,353 ಸಕ್ರಯ ಪ್ರಕರಣಗಳಿದ್ದು 98,897ಮಂದಿ ಚೇತರಿಸಿಕೊಂಡಿದ್ದಾರೆ.

ಇದನ್ನೂ ಓದಿ:  ಥರ್ಮಲ್ ಸ್ಕ್ರೀನಿಂಗ್ ಇಲ್ಲ, ಮಾಸ್ಕ್ ಇಲ್ಲ; ಹರಿದ್ವಾರದ ಕುಂಭ ಮೇಳದಲ್ಲಿ ಭಾಗವಹಿಸಿದ 102 ಮಂದಿಗೆ ಕೊವಿಡ್

Kumbh Mela: ಕೊವಿಡ್ 2ನೇ ಅಲೆ ನಡುವೆಯೇ ಹರಿದ್ವಾರದಲ್ಲಿ ಕುಂಭ ಮೇಳಕ್ಕೆ ಜನಸಾಗರ ; ಜನರ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ

(Third Shahi Snan today at Kumbh Mela 2021 Uttarakhand CM Tirath Singh Rawat appealed to the people follow Covid 19 guidelines)

Published On - 12:14 pm, Wed, 14 April 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್