ಗೇಮ್ ಆಡಲು ಮೊಬೈಲ್ ಕೊಡದಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ
ಚಿಕ್ಕಬಳ್ಳಾಪುರ: ಗೇಮ್ ಆಡಲು ಮೊಬೈಲ್ ಕೊಡಲಿಲ್ಲವೆಂದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗೇಪಲ್ಲಿ ತಾಲೂಕಿನ ಮೇಡಂಪಲ್ಲಿ ಗ್ರಾಮದಲ್ಲಿ ನಡೆದಿದೆ. 15 ವರ್ಷದ ಯಶವಂತ್ ಮೃತ ವಿದ್ಯಾರ್ಥಿ. ಭಾನುವಾರ ತಡರಾತ್ರಿ ಗೇಮ್ ಆಡಲು ಮೊಬೈಲ್ ಬೇಕೆಂದು ಯಶವಂತ್ ಹಠ ಹಿಡಿದಿದ್ದಾನೆ. ಆಗ ತಮ್ಮನಿಗೆ ಮೊಬೈಲ್ ನೀಡಲು ಅಕ್ಕ ನಿರಾಕರಿಸಿದ್ದಾಳೆ. ಇದರಿಂದ ಮನನೊಂದು ಚೇಳೂರು ಗ್ರಾಮದ ಅರವಿಂದ ಪ್ರೌಢಶಾಲೆ ವಿದ್ಯಾರ್ಥಿ ಯಶವಂತ್ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಬಳ್ಳಾಪುರ: ಗೇಮ್ ಆಡಲು ಮೊಬೈಲ್ ಕೊಡಲಿಲ್ಲವೆಂದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗೇಪಲ್ಲಿ ತಾಲೂಕಿನ ಮೇಡಂಪಲ್ಲಿ ಗ್ರಾಮದಲ್ಲಿ ನಡೆದಿದೆ. 15 ವರ್ಷದ ಯಶವಂತ್ ಮೃತ ವಿದ್ಯಾರ್ಥಿ.
ಭಾನುವಾರ ತಡರಾತ್ರಿ ಗೇಮ್ ಆಡಲು ಮೊಬೈಲ್ ಬೇಕೆಂದು ಯಶವಂತ್ ಹಠ ಹಿಡಿದಿದ್ದಾನೆ. ಆಗ ತಮ್ಮನಿಗೆ ಮೊಬೈಲ್ ನೀಡಲು ಅಕ್ಕ ನಿರಾಕರಿಸಿದ್ದಾಳೆ. ಇದರಿಂದ ಮನನೊಂದು ಚೇಳೂರು ಗ್ರಾಮದ ಅರವಿಂದ ಪ್ರೌಢಶಾಲೆ ವಿದ್ಯಾರ್ಥಿ ಯಶವಂತ್ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.