ಟೊಮೆಟೊ ತೋಟಕ್ಕೆ ದೃಷ್ಟಿಬೊಂಬೆ ಬದಲು ರಚಿತಾ ರಾಮ್, ಸನ್ನಿ ಲಿಯೋನ್ ಫೋಟೋ ಹಾಕಿದ ರೈತ

|

Updated on: Jul 16, 2024 | 7:32 PM

ಯಾವುದೇ ಅನಾರೋಗ್ಯ, ಪೀಡೆಗೂ ದೃಷ್ಟಿ ದೋಷವನ್ನು ತಾಳೆ ಹಾಕುವುದು ಸಾಮಾನ್ಯ. ದೃಷ್ಟಿ ದೋಷ ಹೆಚ್ಚಾಗಿ ನಮ್ಮ ಗ್ರಾಮೀಣ ಭಾಗಗಳಲ್ಲಿ ಕಂಡು ಬರುತ್ತದೆ. ಅದರಂತೆ ಕಟ್ಟಡಗಳ ಮುಂದೆ, ರಸ್ತೆ, ತೋಟಕ್ಕೆ ಯಾರ ದೃಷ್ಟಿಯಾಗಬಾರದು ಎಂದು ದೃಷ್ಟಿಗೊಂಬೆ ಹಾಕಲಾಗುತ್ತೆ. ಆದ್ರೆ, ಚಿಕ್ಕಬಳ್ಳಾಪುರದಲ್ಲಿ ರೈತನೋರ್ವ ಟೊಮೆಟೊ ತೋಟದ ಮೇಲೆ ಯಾರ ವಕ್ರ ದೃಷ್ಟಿಯೂ ಬೀಳಬಾರದು ಎಂದು ಸ್ಟಾರಿ ಸಿನಿಮಾ ನಟಿಯರಾದ ರಚಿತಾ ರಾಮ್ ಹಾಗೂ ಮಾದಕ ನಟಿ ಸನ್ನಿ ಲಿಯೋನ್ ಫೋಟೋ ಹಾಕಿದ್ದಾರೆ.

ಟೊಮೆಟೊ ತೋಟಕ್ಕೆ ದೃಷ್ಟಿಬೊಂಬೆ ಬದಲು ರಚಿತಾ ರಾಮ್, ಸನ್ನಿ ಲಿಯೋನ್ ಫೋಟೋ ಹಾಕಿದ ರೈತ
ಟೊಮೆಟೊ ತೋಟ
Follow us on

ಚಿಕ್ಕಬಳ್ಳಾಪುರ, (ಜುಲೈ 16): ಹೊಲ, ಗದ್ದೆ, ತೋಟಗಳಿಗೆ ಯಾರ ದೃಷ್ಟಿ ತಾಗಬಾರದು ಎಂದು ಒಂದು ವಿಕಾರವಾದ ಗೊಂಬೆ ಹಾಕಲಾಗುತ್ತೆ.  ಪ್ರಾಣಿಗಳು ಬಂದು ಬೆಳೆ ಹಾಳು ಮಾಡಬಾರದು ಎಂದು ಕೆಲವರು ಹೊಲ, ಗದ್ದೆಗಳಲ್ಲಿ ಮನುಷ್ಯ ರೀತಿ ಇರುವ ಪ್ರತಿಕೃತಿಯನ್ನು ತಯಾರಿಸಿ ಹಾಕುತ್ತಾರೆ. ಆದ್ರೆ, ಚಿಕ್ಕಬಳ್ಳಾಪುರದ ರೈತರೊಬ್ಬರು ತಮ್ಮ ಟೊಮೆಟೊ ತೋಟದ ಮೇಲೆ ಯಾರ ವಕ್ರ ದೃಷ್ಟಿಯೂ ಬೀಳಬಾರದು ಎಂದು ದೃಷ್ಟಿ ದೋಷ ನಿವಾರಣೆಗೆ ರಚಿತಾ ರಾಮ್ ಹಾಗೂ ಮಾದಕ ನಟಿ ಸನ್ನಿ ಲಿಯೋನ್ ಫೋಟೋ ನೇತುಹಾಕಿದ್ದಾರೆ.

ಹೌದು..ಅಚ್ಚರಿ ಅನ್ನಿಸಿದರೂ ಸತ್ಯ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದ ಯುವ ರೈತ ದೀಪಕ್ ಎನ್ನುವರು ತಮ್ಮ ಟೊಮೆಟೊ ತೋಟದಲ್ಲಿ ದೃಷ್ಟಿಬೊಂಬೆಗೆ ಬದಲಾಗಿ ನಟಿ ರಚಿತಾ ರಾಮ್ ಹಾಗೂ ಮಾದಕ ನಟಿ ಸನ್ನಿ ಲಿಯೋನ್ ಫೋಟೋವನ್ನು ಕಟ್ಟಿದ್ದಾರೆ.

ಇದನ್ನೂ ಓದಿ: ಸಾವಿನ ಮನೆಯನ್ನೂ ಬಿಡದ ಖದೀಮರು; ಅಂತ್ಯಸಂಸ್ಕಾರಕ್ಕೆ ತೆರಳಿದ್ದ ಮನೆಯಲ್ಲಿ ಚಿನ್ನಾಭರಣ ಸೇರಿ ಲಕ್ಷಾಂತರ ರೂ. ಹಣ ಕಳುವು

5 ಎಕರೆ ಭೂಮಿಯಲ್ಲಿ ಟೊಮೆಟೊ ಬೆಳೆದಿದ್ದು, ಇನ್ನೇನು ಕಾಯಿ ಬಿಡುವ ಸಮಯವಿದೆ. ಹೀಗಾಗಿ ಟೊಮೆಟೊ ಬೆಳೆ ಮೇಲೆ ಯಾರ ಕೆಟ್ಟ ಕಣ್ಣು ಬೀಳದಿರಲಿ, ಒಳ್ಳೆಯ ಫಸಲು ಬಂದು ಒಳ್ಳೆ ಲಾಭ ಸಿಗಲಿ ಎನ್ನುವ ಕಾರಣಕ್ಕೆ ದೃಷ್ಟಿ ಬೊಂಬೆ ಬದಲು ನಟಿಯರ ಭಾವಚಿತ್ರದ ಅಳವಡಿಸಿದ್ದಾರೆ.

ಸದ್ಯ ಚಿಕ್ಕಬಳ್ಳಾಪುರದಲ್ಲಿ ಟೊಮೆಟೊ ಪ್ರತಿ ಕ್ವಿಂಟಲ್‌ ಸುಮಾರು 3,500 ರೂ.ಗೆ ಮಾರಾಟವಾಗುತ್ತಿದೆ. ಹೀಗಾಗಿ ಯುವ ರೈತ  ಒಳ್ಳೆ ಫಸಲು ಬರುವ ವಿಶ್ವಾಸದಲ್ಲಿದ್ದು, ಯಾರ ಕೆಟ್ಟ ಕಣ್ಣ ಬೀಳದಂತೆ ನಟಿಯರ ಫೋಟೋಗಳನ್ನು ನೇತಾಕಿದ್ದಾನೆ. ಇದು ನೋಡಗರ ಅಚ್ಚರಿಗೆ ಕಾರಣವಾಗಿದ್ದು, ಕೆಲವರು ಮುಸಿ ಮುಸಿ ನಕ್ಕಿದ್ದಾರೆ.

ಸನ್ನಿ ಲಿಯೋನ್​ಗೆ ಕರ್ನಾಟಕದಲ್ಲಿ ಅಭಿಮಾನಿಗಳು ಇದ್ದಾರೆ. ಅವರ ಅಭಿಮಾನಿಗಳ ಸಂಘಗಳು ಇವೆ. ಜಾತ್ರೆ, ಹಬ್ಬಕ್ಕೆ ಸನ್ನಿ ಲಿಯೋನ್​ ಅಭಿಮಾನಿಗಳ ಸಂಘವು ಸಹ ಬ್ಯಾನರ್ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:24 pm, Tue, 16 July 24