ಸಾವಿನ ಮನೆಯನ್ನೂ ಬಿಡದ ಖದೀಮರು; ಅಂತ್ಯಸಂಸ್ಕಾರಕ್ಕೆ ತೆರಳಿದ್ದ ಮನೆಯಲ್ಲಿ ಚಿನ್ನಾಭರಣ ಸೇರಿ ಲಕ್ಷಾಂತರ ರೂ. ಹಣ ಕಳುವು
ಮೈಸೂರಿನ(Mysore) ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಎಂ.ಶ್ರೀ ನಗರದಲ್ಲಿ ಸಾವಿನ ಮನೆಯನ್ನೂ ಬಿಡದ ಕಳ್ಳರು, ಅಂತ್ಯ ಸಂಸ್ಕಾರಕ್ಕಾಗಿ ತೆರಳಿದ್ದ ವೇಳೆ ಮನೆಯ ಬೀಗ ಮುರಿದು ಚಿನ್ನಾಭರಣ, ನಗದು ಎಗರಿಸಿದ್ದಾರೆ. ಈ ಕುರಿತು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು, ಜು.16: ಸಾವಿನ ಮನೆಯನ್ನೂ ಬಿಡದ ಖದೀಮರು, ತಾಯಿ ಅಂತ್ಯಸಂಸ್ಕಾರಕ್ಕೆ ತೆರಳಿದ್ದ ವೇಳೆ ಮನೆಯಲ್ಲಿದ್ದ 1.34 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸೇರಿ 1 ಲಕ್ಷ ನಗದನ್ನು ಕಳ್ಳರು ದೋಚಿದ ಘಟನೆ ಮೈಸೂರಿನ(Mysore) ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಎಂ.ಶ್ರೀ ನಗರದಲ್ಲಿ ನಡೆದಿದೆ. ಬನ್ನೂರಿನಲ್ಲಿ ವಾಸವಿದ್ದ ಕಂಟ್ರಾಕ್ಟರ್ ಬಸವರಾಜು ಎಂಬುವವರ ತಾಯಿ ಮೃತಪಟ್ಟಿದ್ದರು. ಅದರಂತೆ ತಾಯಿಯ ಅಂತಿಮ ದರ್ಶನ ಪಡೆದು ಅಂತ್ಯ ಸಂಸ್ಕಾರಕ್ಕಾಗಿ ಬಸವರಾಜ್ ಕುಟುಂಬ ಸಮೇತ ತೆರಳಿದ್ದರು. ಈ ವೇಳೆ ಮನೆ ಬಾಗಿಲ ಬೀಗ ಮುರಿದು ಚಿನ್ನಾಭರಣ, ನಗದು ಎಗರಿಸಿದ್ದಾರೆ. ಈ ಕುರಿತು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಹೊರವಲಯದಲ್ಲಿ ನಿಲ್ಲದ ಸರಗಳ್ಳತನ
ಬೆಂಗಳೂರು: ನಗರದ ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಎರಡು ಕಡೆ ಹಾಗೂ ಪೀಣ್ಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಕಡೆ ಸರಣಿ ಸರಗಳ್ಳತನ ನಡೆದಿದೆ. ಹೌದು, ಮಾರಪ್ಪನಪಾಳ್ಯದ ಜಯಲಕ್ಷ್ಮಮ್ಮ(45) ಎಂಬ ಮಹಿಳೆಯ 3ಲಕ್ಷದ 50ಸಾವಿರ ಬೆಲೆಬಾಳುವ 50ಗ್ರಾಂ ಚಿನ್ನದ ಮಾಂಗಲ್ಯ ಸರ, ದೊಂಬರಹಳ್ಳಿಯ ಶಾಂತಮ್ಮ(72) ಎಂಬುವವರ 2ಲಕ್ಷ 40 ಸಾವಿರ ಬೆಲೆಬಾಳುವ 35 ಗ್ರಾಂ ಮಾಂಗಲ್ಯ ಸರ ಹಾಗೂ ಪೀಣ್ಯಾದ ಆಂಜಿನಮ್ಮ(30) ಅವರ 2 ಲಕ್ಷ ಬೆಲೆಬಾಳುವ 30ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಇಬ್ಬರು ದುಷ್ಕರ್ಮಿಗಳು ಎಗರಿಸಿದ್ದಾರೆ.
ಅಡ್ರೆಸ್ ಕೇಳುವ ನೆಪದಲ್ಲಿ ಸರಗಳವು
ಇನ್ನು ಈ ಬ್ಲಾಕ್ ಪಲ್ಸರ್ನಲ್ಲಿ ಬರುವ ಕಳ್ಳರು, ಅಡ್ರೆಸ್ ಕೇಳುವ ನೆಪದಲ್ಲಿ ಸರಗಳ್ಳತನ ಮಾಡುತ್ತಿದ್ದಾರೆ. ಜೊತೆಗೆ ದಾರಿಯಲ್ಲಿ ನಡೆದಾಡುವ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡುವ ಈ ದುಷ್ಕರ್ಮಿಗಳ ಕುರಿತು ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿನ್ನಲೆ ಎಚ್ಚೆತ್ತ ಪೊಲೀಸರು ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದ್ದಾರೆ. ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:34 pm, Tue, 16 July 24