ಚಿಕ್ಕಬಳ್ಳಾಪುರ ಜುಲೈ 20: ಸದ್ಗುರು ಸನ್ನಿಧಿಯ ಈಶಾ ಫೌಂಡೇಷನ್ ಗೆ ಹೋಗುವ ದಾರಿಯ ಬಳಿ ಗಾಂಧಿಯ ವೇಷಧಾರಿ ವ್ಯಕ್ತಿಯೊಬ್ಬರು ಪ್ರತ್ಯಕ್ಷರಾಗಿದ್ದು, ಸೇಮ್ ಗಾಂಧೀಜಿ ಅವರನ್ನೇ ಹೋಲುವಂತಿದ್ದರು. ರಸ್ತೆ ಬದಿ ತನ್ನ ಪಾಡಿಗೆ ತಾನು ನಿಂತು ತನ್ನನ್ನೇ ಪ್ರದರ್ಶನಕ್ಕೆ ಇಟ್ಟುಕೊಂಡಿದ್ದ. ಈತನಿಗೆ ಇಲ್ಲಿಗೆ ಬರುವ ಭಕ್ತರು ಹಣ ಸಹಾಯ ಮಾಡುತ್ತಿದ್ದರು. ಅದರಿಂದ ಆತ ಜೀವನ ನಡೆಸ್ತಿದ್ದ. ಆದ್ರೆ ಈತನನ್ನು ಗಮನಿಸಿ ದುಷ್ಕರ್ಮಿಗಳು… ಬಲವಂತವಾಗಿ ಗಾಂಧೀಜಿ ವೇಷಧಾರಿಯನ್ನು ಎತ್ತಾಕ್ಕೊಂಡು ಹೋಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ವರದಿ ಓದಿ.
ಆತನನ್ನು ಮೊದಲ ಬಾರಿಗೆ ನೊಡಿದಾಗ… ಈತ ಸೇಮ್ ಟು ಸೇಮ್… ಮಹಾತ್ಮ ಗಾಂಧೀಜಿ ಅವರೇ ಮತ್ತೆ ಪ್ರತ್ಯಕ್ಷರಾಗಿಬಿಟ್ಟರಾ ಎಂಬಂತೆ, ರಸ್ತೆ ಬದಿ ನಿಂತು ಸಾರ್ವಜನಿಕರಿಗೆ ದರ್ಶನ ಭಾಗ್ಯ ನೀಡ್ತಿರುವ ರೀತಿಯಲ್ಲಿ ಕಾಣಿಸುತ್ತದೆ. ಆದರೆ ಆತ ಅಸಲಿ ಗಾಂಧೀಜಿಯಲ್ಲ… ಗಾಂಧೀಜಿಯ ಮೇಲೆ ಇರುವ ಅಭಿಮಾನವೊ.. ಇಲ್ಲಾ ಹೊಟ್ಟೆಪಾಡೊ.. ಗೊತ್ತಿಲ್ಲ. ಹೀಗೆ ಗಾಂಧೀ ವೇಷಧಾರಿಯಾಗಿರೊ ಇವರು… ಶ್ರೀನಿವಾಸ್ ಅಂತಾ. ಚಿಕ್ಕಬಳ್ಳಾಪುರ ತಾಲೂಕು ಕುರ್ಲಹಳ್ಳಿ ಗ್ರಾಮದ ವಾಸಿ.
ಚಿಕ್ಕಬಳ್ಳಾಪುರದ ಬಳಿ ಇರುವ ಈಶಾ ಫೌಂಡೇಷನ್ ಗೆ ಹೊಗುವ ದಾರಿಯಲ್ಲಿ ತಮ್ಮದೆ ಸ್ವಂತ ಜಮೀನಿನಲ್ಲಿ… ಗಾಂಧಿ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದ ಇವರನ್ನು ನೋಡಿದ ಕೆಲವರು ಸೆಲ್ಫಿ ಫೋಟೊ ತೆಗೆದುಕೊಳ್ಳುವ ರೀತಿಯಲ್ಲಿ ಆಗಮಿಸಿ, ಟಿಟಿ ವೊಂದರಲ್ಲಿ ಕರೆದುಕೊಂಡು ಹೋಗಿದ್ದಾರಂತೆ. ಆದ್ರೆ ಎಲ್ಲಿಗೆ ಕರೆದುಕೊಂಡು ಹೋಗಿದ್ದಾರೆ, ಯಾಕೆ ಕರೆದುಕೊಂಡು ಹೋಗಿದ್ದಾರೆ, ಏನೂ ಗೊತ್ತಿಲ್ಲ. ಆದರೆ ಇದ್ರಿಂದ ನೊಂದ ಆತನ ಕುಟುಂಬಸ್ಥರು, ಪತ್ತೆಗಾಗಿ ಮನವಿ ಮಾಡಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರ ಮೊರೆ ಹೋಗಿದ್ದಾರೆ.
ಇನ್ನು ಗಾಂಧಿ ವೇಷಧಾರಿಯ ನಾಪತ್ತೆಯಿಂದ ಆತಂಕಗೊಂಡಿರುವ ಅವರ ಕುಟುಂಬಸ್ಥರು ಹಾಗೂ ಬಂಧು ಬಳಗ ಹಾಗೂ ಗ್ರಾಮಸ್ಥರು, ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಗೆ ಆಗಮಿಸಿ ಪತ್ತೆಗೆ ಮನವಿ ಮಾಡಿದ್ದಾರೆ. ಮತ್ತೊಂದೆಡೆ ಚಿಕ್ಕಬಳ್ಳಾಪುರದ ಗಲ್ಲಿ ಗಲ್ಲಿಗಳಲ್ಲಿ ಶ್ರೀನಿವಾಸ್ ಫೋಟೊ ಹಿಡಿದು ಅವರ ಸಂಬಂಧಿಗಳು ಹುಡುಕಾಡ್ತಿದ್ದಾರೆ.
ಒಟ್ಟಿನಲ್ಲಿ ಈಶಾ ಪೌಂಢೇಷನ್ ಬಳಿ ತಮ್ಮದೆ ಜಮೀನಿನಲ್ಲಿ ಅಭಿಮಾನಕ್ಕೊ ಇಲ್ಲಾ ಹೊಟ್ಟೆಪಾಡಿಗೊ… ಗಾಂಧಿ ವೇಷ ಧರಿಸಿ ಪ್ರದರ್ಶನಕ್ಕೆ ನಿಂತಿದ್ದ ವ್ಯಕ್ತಿಯನ್ನು ಕಣ್ಮರೆ ಮಾಡಿದ್ದರ ಹಿಂದೆ ಅದ್ಯಾವ ಹುನ್ನಾರ, ಕಿತಾಪತಿ ಅಡಗಿದೆಯೊ ಗೊತ್ತಿಲ್ಲ. ಇತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಾಣೆಯಾಗಿರುವ ಶ್ರೀನಿವಾಸ್ ನನ್ನು ಹುಡುಕುತ್ತಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ