ಭಾನುವಾರ ವಿಶಾಲ ಖಾಲಿ ರಸ್ತೆಯಲ್ಲಿ ರೇಸ್ ಬೈಕ್ ಗಳ ಹಾವಳಿಗೆ ಸುಸ್ತಾದ ಜನ, ಇಬ್ಬರು ಆಸ್ಪತ್ರೆ ಪಾಲು

| Updated By: ಸಾಧು ಶ್ರೀನಾಥ್​

Updated on: Nov 27, 2023 | 9:56 AM

ಮೋಜು ಮಸ್ತಿ, ಲಾಂಗ್ ಡ್ರೈವ್, ಬೈಕ್ ರೇಸ್ ಅಂತ ಕೆಲವು ಬೈಕ್ ಸವಾರರು, ಪ್ರಾಣ ಪಣಕ್ಕಿಟ್ಟು ಹೆದ್ದಾರಿಯಲ್ಲಿ ಅತಿವೇಗವಾಗಿ ಸಂಚರಿಸುತ್ತಿದ್ದಾರೆ. ಹೀಗೆ... ಸಂಚರಿಸಲು ಹೋಗಿ ಇಂದು ಬೆಂಗಳೂರು ಮೂಲದ ಖಾಸಗಿ ಕಂಪನಿ ಉದ್ಯೋಗಿ ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿ ಗೇಟ್ ಬಳಿ, ಸ್ಥಳಿಯ ಟಿವಿಎಸ್ ಮೊಪೆಡ್ ಗೆ ಡಿಕ್ಕಿ ಹೊಡೆದಿದ್ದಾನೆ.

ಭಾನುವಾರ ವಿಶಾಲ ಖಾಲಿ ರಸ್ತೆಯಲ್ಲಿ ರೇಸ್ ಬೈಕ್ ಗಳ ಹಾವಳಿಗೆ ಸುಸ್ತಾದ ಜನ, ಇಬ್ಬರು ಆಸ್ಪತ್ರೆ ಪಾಲು
ಭಾನುವಾರ ವಿಶಾಲ ಖಾಲಿ ರಸ್ತೆಯಲ್ಲಿ ರೇಸ್ ಬೈಕ್ ಗಳ ಹಾವಳಿಗೆ ಸುಸ್ತಾದ ಜನ
Follow us on

ಅದು ಬೆಂಗಳೂರು ಹೈದರಾಬಾದ್ ಮಹಾ ನಗರಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ. ಮೊದಲೇ… ವಾಹನಗಳ ಸಂಚಾರದಿಂದ ಕಿಕ್ಕಿರಿದು ತುಂಬಿರುತ್ತೆ, ಅಂಥದರಲ್ಲೆ ಅದೆ ರಸ್ತೆಯಲ್ಲಿ ಐಷರಾಮಿ ಬೈಕ್ ರೇಸರ್ (Bike race) ಗಳು… ರುಯ್ ರುಯ್ ಅಂತ ಮಧ್ಯೆ ಮಧ್ಯೆ ತೂರಿ ಅತಿವೇಗವಾಗಿ ರೇಸ್ ಮಾಡ್ತಾರೆ. ಹೀಗೆ.. ರೇಸ್ ಮಾಡೊ ಆತುರದಲ್ಲಿ, ರೇಸ್ ಬೈಕ್ ಸವಾರನೊರ್ವ, ಇಂದು ಸ್ಥಳೀಯರ ಬೈಕ್ ಗೆ ಡಿಕ್ಕಿ ಹೊಡೆದ ಕಾರಣ ರೇಸ್ ಬೈಕ್ ಸವಾರ ಸೇರಿ ಮೂವರು ಆಸ್ಪತ್ರೆ ಪಾಲಾಗಿದ್ದಾರೆ (injury). ಅಷ್ಟಕ್ಕೂ ಅದೇಲ್ಲಿ ಅಂತೀರಾ ಈ ವರದಿ ನೋಡಿ!! ಸ್ಪರ್ಧೆಗೆ ಬಿದ್ದವರಂತೆ ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರಲ್ಲಿ, ರುಯ್ ರುಯ್ ಅಂತ ಐಷರಾಮಿ ಬೈಕ್ ಗಳನ್ನು ಏರಿ… ಬೈಕ್ ನಮ್ಮದೆ- ಹೆದ್ದಾರಿಯೂ ನಮ್ಮದೆ ಅನ್ನೊ ರೀತಿಯಲ್ಲಿ ಮನಸ್ಸೊ ಇಚ್ಚೆ ಸವಾರಿ ಮಾಡ್ತಿರೋದು ಚಿಕ್ಕಬಳ್ಳಾಪುರ ನಗರ (Chikkaballapur) ಹೊರ ಹೊಲಯದ ಹೆದ್ದಾರಿಯಲ್ಲಿ.

ಹೌದು!! ಮೋಜು ಮಸ್ತಿ, ಲಾಂಗ್ ಡ್ರೈವ್, ಬೈಕ್ ರೇಸ್ ಅಂತ ಕೆಲವು ಬೈಕ್ ಸವಾರರು, ಪ್ರಾಣ ಪಣಕ್ಕಿಟ್ಟು ಹೆದ್ದಾರಿಯಲ್ಲಿ ಅತಿವೇಗವಾಗಿ ಸಂಚರಿಸುತ್ತಿದ್ದಾರೆ. ಹೀಗೆ… ಸಂಚರಿಸಲು ಹೋಗಿ ಇಂದು ಬೆಂಗಳೂರು ಮೂಲದ ಖಾಸಗಿ ಕಂಪನಿ ಉದ್ಯೋಗಿ ಸುನಿಲ್ ಎನ್ನುವವರು, ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿ ಗೇಟ್ ಬಳಿ, ಸ್ಥಳಿಯ ಟಿವಿಎಸ್ ಮೊಪೆಡ್ ಗೆ ಡಿಕ್ಕಿ ಹೊಡೆದಿದ್ದಾನೆ. ಇದ್ರಿಂದ ಟಿವಿಎಸ್ ಎಕ್ಸೆಲ್ ನಲ್ಲಿದ್ದ ನಾಗರಾಜ್ ಹಾಗೂ ಮಣಿರತ್ನ ಸೇರಿ ಸುನಿಲ್ ಸಹ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಇದನ್ನೂ ಓದಿ: ಬೈಕ್ ಹಿಂದೆ ಗರ್ಲ್​ಫ್ರೆಂಡ್ ಕೂರಿಸಿ​ ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ ರೇಸ್​

ಬಾಗೇಪಲ್ಲಿ ಕಡೆಯಿಂದ ಚಿಕ್ಕಬಳ್ಳಾಪುರದ ಕಡೆಗೆ ಅತಿ ವೇಗವಾಗಿ ಸಂಚರಿಸುತ್ತಿದ್ದ ಬಿ.ಎಂ. ಡ್ಲೂ ಬೈಕ್ ಸವಾರ ಸುನಿಲ್, ರಸ್ತೆಯಲ್ಲಿ ಸಂಚರಿಸುತ್ತಿದ್ದ ಟಿವಿಎಸ್ ಮೊಪೆಡ್ ಗೆ ಡಿಕ್ಕಿ ಹೊಡೆದಿದ್ದಾನೆ, ಆಗ ಆತನೂ ಸಹ ನಡುರಸ್ತೆಯಲ್ಲಿ ಬಿದ್ದು ಗಾಯಾಂಡಿದ್ದೇನೆ. ಇದ್ರಿಂದ ಸ್ಥಳಕ್ಕೆ ಬಂದ 108 ಆರೋಗ್ಯ ರಕ್ಷಾ ಕವಚ ಸಿಬ್ಬಂದಿ, ಮೂವರು ಗಾಯಾಳುನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಐಷರಾಮಿ ಬೈಕ್ ಸವಾರರ ಸವಾರಿ ಹೆದ್ದಾರಿಯಲ್ಲಿ ಹೇಗೆ ಇರುತ್ತೆ ಅನ್ನೋದರ ಬಗ್ಗೆ 108 ಅಂಬುಲೆನ್ಸ್ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ.

ಕೆಲವು ಬೈಕ್ ಸವಾರರು ಐಷರಾಮಿ ಬೈಕ್ ಗಳನ್ನು ಏರಿ… ಲಾಂಗ್ ಡ್ರೈವ್ ಅಂತ ಬಂದ್ರೆ ಇನ್ನು ಕೆಲವರು ಬೆಂಗಳೂರು ಹೈದರಾಬಾದ್ ಮಹಾನಗರಗಳ ಮಧ್ಯೆ ರೇಸ್ ಮಾಡಲು ಹೋಗಿ ಅತಿವೇಗವಾಗಿ ಸಂಚರಿಸುತ್ತಿದ್ದಾರೆ. ಸ್ವಲ್ಪ ಯಾಮಾರಿದ್ರೆ ಹೆದ್ದಾರಿಯಲ್ಲಿ ಇದ್ದವರು ಇಲ್ಲಾ ರೇಸ್ ಬೈಕರ್ ಗಳು ಹೆಣವಾಗಬೇಕಾಗುತ್ತೆ, ಎಚ್ಚರದಿಂದ ಬೈಕ್ ಗಳನ್ನು ಓಡಿಸುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ