ಚಿಕ್ಕಬಳ್ಳಾಪುರ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸಂತೋಷ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸದಂತೆ, KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಡಿಯೊವೊಂದರ ಪ್ರಸ್ತಾಪ ಮಾಡಿದ್ದರು. ಈ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಪ್ರತಿಕ್ರಿಯೆ ನೀಡಿದ್ದಾರೆ.
ಒಬ್ಬರ ಪ್ರಾಣದ ಜೊತೆ ರಾಜಕೀಯ ಮಾಡುವುದು ಸರಿಯಲ್ಲ. ಕಾಂಗ್ರೆಸ್ ನಾಯಕರು ಸಾಂತ್ವನ ಹೇಳುವುದರ ಬದಲು ಚೆಲ್ಲಾಟವಾಡ್ತಿದ್ದಾರೆ. ವಿಡಿಯೊ ಇದ್ರೆ ಡಿ.ಕೆ.ಶಿ ಬಿಡುಗಡೆ ಮಾಡಿ ಧೈರ್ಯ ತೋರಿಸಲಿ. ಡಿ.ಕೆ.ಶಿವಕುಮಾರ್ಗೆ ಕಾನೂನು ಮೇಲೆ ಗೌರವ ಇದ್ದರೆ ಮೊದಲು ಸಿ.ಬಿ.ಐ ತನಿಖೆಗೆ ಒಳಗಾಗಲಿ ಅದಕ್ಕೆ ಯಾಕೆ ನಾಟಕ ಮಾಡುತ್ತಾರೆ? ನಳಿನ್ಕುಮಾರ್ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ನಳೀನ್ ಕುಮಾರ್ ಕಟೀಲು..
ಕಟೀಲು ಯಕಶ್ಚಿತ್ ರಾಜಕಾರಣಿ, ರಾಜಕೀಯ ಪ್ರಬುದ್ಧತೆ ಇಲ್ಲವೆಂಬ ಸಿದ್ದರಾಮಯ್ಯ ಹೇಳಿಕೆಗೆ ನಳಿನ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಣ್ಣ ಬಹಳ ಜ್ಞಾನಿ, ಮೇಧಾವಿ. ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಎಂದು ಟಾಂಗ್ ನೀಡಿದರು. ಜೊತೆಗೆ ನಳೀನ್ ಬಿಜೆಪಿ ರಾಜ್ಯಾಧ್ಯಕ್ಷ. ಸಿದ್ದರಾಮಯ್ಯನವರು ವಿಪಕ್ಷ ನಾಯಕ. ಹಾಗಾಗಿ ಸಿದ್ದರಾಮಣ್ಣ ಬಗ್ಗೆ ನಾನು ಮಾತನಾಡಲ್ಲವೆಂದು ಲೇವಡಿ ಮಾಡಿದ್ದಾರೆ.
Published On - 12:01 pm, Sun, 29 November 20