Chikkaballapur News: ಹಾಲಿ ಶಾಸಕ ಪ್ರದೀಪ್ ಈಶ್ವರ್, ಮಾಜಿ ಶಾಸಕ ಡಾ.ಕೆ.ಸುಧಾಕರ್ ಬೆಂಬಲಿಗರಿಂದ ಪರಸ್ಪರ ದೂರು ದಾಖಲು

| Updated By: ಆಯೇಷಾ ಬಾನು

Updated on: Jul 30, 2023 | 8:30 AM

ಪ್ರದೀಪ್ ಈಶ್ವರ್ ಬೆಂಬಲಿಗರ ವಿರುದ್ದ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಡಾ.ಕೆ.ಸುಧಾಕರ್ ಬೆಂಬಲಿಗರ ವಿರುದ್ದ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಬಲಿಗರು ಪರಸ್ಪರ ದೂರು-ಪ್ರತಿದೂರು ದಾಖಲಿಸಿಕೊಂಡಿದ್ದಾರೆ.

Chikkaballapur News: ಹಾಲಿ ಶಾಸಕ ಪ್ರದೀಪ್ ಈಶ್ವರ್, ಮಾಜಿ ಶಾಸಕ ಡಾ.ಕೆ.ಸುಧಾಕರ್ ಬೆಂಬಲಿಗರಿಂದ ಪರಸ್ಪರ ದೂರು ದಾಖಲು
ಮಾಜಿ ಸಚಿವ ಸುಧಾಕರ್ ಬೆಂಬಲಿಗರು
Follow us on

ಚಿಕ್ಕಬಳ್ಳಾಪುರ, ಜುಲೈ 30: ಹಾಲಿ ಶಾಸಕ ಪ್ರದೀಪ್ ಈಶ್ವರ್(Pradeep Eshwar) ಹಾಗೂ ಮಾಜಿ ಶಾಸಕ ಡಾ.ಕೆ.ಸುಧಾಕರ್(Dr K Sudhakar) ಜಟಾಪಟಿ ಪ್ರಕರಣಕ್ಕೆ ಸಂಬಂಧಿಸಿ ಹಾಲಿ ಮಾಜಿ ಶಾಸಕರ ಬೆಂಬಲಿಗರ ವಿರುದ್ದ ದೂರು ಪ್ರತಿದೂರು ದಾಖಲಾಗಿದೆ. ಪ್ರದೀಪ್ ಈಶ್ವರ್ ಬೆಂಬಲಿಗರ ವಿರುದ್ದ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಡಾ.ಕೆ.ಸುಧಾಕರ್ ಬೆಂಬಲಿಗರ ವಿರುದ್ದ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರದೀಪ್ ಈಶ್ವರ್ ಬೆಂಬಲಿಗರಾದ ಡ್ಯಾನ್ಸ್ ಶ್ರೀನಿವಾಸ, ಗಂಗರಾಜು, ವಿನಯ್ ಅಲಿಯಾಸ್ ಬಂಗಾರಿ, ಹೊಟ್ಟು ಲಕ್ಷ್ಮಯ್ಯ, ಶ್ರೀನಿವಾಸ, ದೇವರಾಜು ವಿರುದ್ಧ 143,341,504,506,149 ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. ಇನ್ನು ಸುಧಾಕರ್ ಬೆಂಬಲಿಗರಾದ ಮುನಿರಾಜು, ರಾಘವೇಂದ್ರ ಸೇರಿ ಕೆಲವರ ವಿರುದ್ಧ ಐಪಿಸಿ 1860 ಅಡಿ 143, 504, 505(1), (ಸಿ), 149 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರಿಂದ ಪ್ರಾಣ ಬೆದರಿಕೆ, ಗಲಾಟೆ ಮಾಡಿದ್ದಾರೆಂದು ಆರೋಪಿಸಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಬೆಂಬಲಿಗ ಸಂತೋಷ ರಾಜ್ ಸಲ್ಲಿಸಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಇನ್ನು ಇದಕ್ಕೆ ಪ್ರತಿಯಾಗಿ ಶಾಸಕ ಪ್ರದೀಪ್ ಈಶ್ವರ್ ವಿರುದ್ದ ಅವಾಚ್ಯ ಶಬ್ದಗಳಿಂದ ನಿಂದನೆ ಎಂದು ಆರೋಪಿಸಿ ಸುಧಾಕರ್ ಬೆಂಬಲಿಗರ ಮೇಲೆ ದೂರು ಸಲ್ಲಿಸಲಾಗಿದೆ. ಈ ರೀತಿ ಹಾಲಿ ಹಾಗೂ ಮಾಜಿ ಶಾಸಕರ ಬೆಂಬಲಿಗರು ಪರಸ್ಪರ ದೂರು ಪ್ರತಿದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಶಾಸಕ ಪ್ರದೀಪ್ ಈಶ್ವರ್ ಚಿಲ್ಲರೆ ರಾಜಕಾರಣ ಮಾಡ್ತಿದ್ದಾರೆ, ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ -ಡಾ ಕೆ ಸುಧಾಕರ್

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಡಾ.ಕೆ.ಸುಧಾಕರ್, ತಮ್ಮ ಬೆಂಬಲಿಗರ ಮೇಲೆ ಹಾಲಿ ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಚಿಕ್ಕಬಳ್ಳಾಪುರ ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ ಎಸ್ಪಿಗೆ ದೂರು ನೀಡಿದ್ದರು. ಈ ವೇಳೆ ಬೆಂಬಲಿಗರ ನಡುವೆ ಗಲಾಟೆ ನಡೆದದ್ದು ದೂರು-ಪ್ರತಿದೂರು ದಾಖಲಾಗಿದೆ.

ಮತ್ತೊಂದೆಡೆ ನಿನ್ನೆ ನಡೆದ ಪ್ರತಿಭಟನೆಯ ಸಮಯದಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಪ್ರದೀಪ್ ಈಶ್ವರ್, ಮಾಜಿ ಸಚಿವ ಡಾ.ಕೆ.ಸುಧಾಕರ್ ವಿರುದ್ದ ಕೆಂಡಕಾರಿದ್ರು. ಡಾ.ಕೆ.ಸುಧಾಕರ್ ಗೆ ಮನ ಮರ್ಯಾದೆ ಇದಿಯಾ? ಕೆ.ಸುಧಾಕರ್ ಶಾಶ್ವತವಾಗಿ ಮಾಜಿ ಶಾಸಕರು ಆಗ್ತಾರೆ, ಡಾ.ಕೆ.ಸುಧಾಕರ್ ಮುಖ ನೋಡಿ ಐನೂರು ಓಟು ಬರಲ್ಲ ಅವರು ನನ್ನ ಬಗ್ಗೆ ಏನ್ ಮಾತನಾಡೊದು, ಇನ್ನೂ ಡಾ.ಕೆ.ಸುಧಾಕರ್ ಬೆಂಬಲಿಗರು ಎಚ್ಚರಿಕೆಯಿಂದ ಇರುವಂತೆ ವಾರ್ನಿಂಗ್ ಕೊಟ್ರು.

ಚಿಕ್ಕಬಳ್ಳಾಪುರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ