ದಲಿತರ ಸ್ಮಶಾನಕ್ಕೆ ಹೋಗಲು ಇಲ್ಲ ಸೂಕ್ತ ರಸ್ತೆ: ವ್ಯಕ್ತಿ ಶವ ಇಟ್ಟು ಅಧಿಕಾರಿಗಳ ವಿರುದ್ದ ಆಕ್ರೋಶ
ದಲಿತರ ಸ್ಮಶಾನಕ್ಕೆ ಹೋಗಲು ಸೂಕ್ತ ರಸ್ತೆ ಇಲ್ಲದ ಹಿನ್ನಲೆ ಇಂದು ವ್ಯಕ್ತಿಯ ಶವ ಇಟ್ಟು ಅಧಿಕಾರಿಗಳ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿರುವಂತಹ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗೌಡಗೇರೆ ಗ್ರಾಮದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ, ಜುಲೈ 29: ದಲಿತರ ಸ್ಮಶಾನಕ್ಕೆ (Dalit graveyard) ಹೋಗಲು ಸೂಕ್ತ ರಸ್ತೆ ಇಲ್ಲ, ಮೃತ ವ್ಯಕ್ತಿಯ ಶವ ಸಂಸ್ಕಾರ ಮಾಡುವುದು ಎಂದು ಆಕ್ರೋಶಗೊಂಡ ದಲಿತ ಸಮುದಾಯ ಶವ ಸಂಸ್ಕಾರ ಮಾಡದೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗೌಡಗೇರೆ ಗ್ರಾಮದಲ್ಲಿ ನಡೆದಿದೆ.
ಪಂಚಾಯತಿ ವ್ಯಾಪ್ತಿಯ ವರವಣಿ ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗುವ ದಾರಿಯ ಸಮಸ್ಯೆಯಾಗಿದೆ. ಸ್ಮಶಾನದ ರಸ್ತೆಯನ್ನು ಸ್ಥಳೀಯರೊಬ್ಬರು ಒತ್ತುವರಿ ಮಾಡಿಕೊಂಡಿದ್ದಾರೆ. ಹಾಗಾಗಿ ಗ್ರಾಮದಲ್ಲಿ ಯಾರಾದರೂ ಮೃತಪಟ್ಟಾಗ ಸಮಸ್ಯೆ ಆಗುತ್ತಿದೆ. ಇಂದು ಕೂಡ ಗ್ರಾಮದ 60 ವರ್ಷದ ವೃದ್ದರೊಬ್ಬರು ಮೃತಪಟ್ಟಿದ್ದರು.
ಇದನ್ನೂ ಓದಿ: Gadag News: ಬಿಂಕದಕಟ್ಟಿ ಮೃಗಾಲಯಕ್ಕೆ ಬಸ್ ಸೇವೆ: ಸಚಿವ ಎಚ್ಕೆ ಪಾಟೀಲ್ ಚಾಲನೆ
ರಸ್ತೆ ಬದಲು ಮೋರಿಯಲ್ಲಿ ಸ್ಮಶಾನಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ. ಇದರಿಂದ ಸಮಸ್ಯೆ ಬಗೆಯರಿಸುವಂತೆ ಸ್ಥಳೀಯ ಗೌಡಗೇರೆ ಗ್ರಾಮ ಪಂಚಾಯತಿ ಪಿ.ಡಿ.ಒ ಹಾಗೂ ಗೌರಿಬಿದನೂರು ಇ.ಒ ಗೆ ಮನವಿ ಮಾಡಿದರು, ದೂರು ನೀಡಿದರೂ ಕ್ರಮ ಕೈಗೊಂಡಿಲ್ಲವಂತೆ. ಹಾಗಾಗಿ ಇಂದು ವೃದ್ದನ ಶವ ಸಂಸ್ಕಾರ ಮಾಡದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Chikkaballapur News: ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದ ತಹಶೀಲ್ದಾರರೊಬ್ಬರ ವಿದಾಯ ಪತ್ರ
ಬಳಿಕ ಸ್ಥಳಕ್ಕೆ ಬಂದ ಗೌರಿಬಿದನೂರು ತಹಶಿಲ್ದಾರ್ ಮಹೇಶ್ ಪತ್ರಿ ಹಾಗೂ ಮಂಚೇನಹಳ್ಳಿ ಪೊಲೀಸರು ಗ್ರಾಮಸ್ಥರ ಮನವೋಲಿಸಿ ರಸ್ತೆ ಸರಿಪಡಿಸಿಕೊಡುವುದಾಗಿ ಭರವಸೆ ನೀಡಿದ ನಂತರ ಗ್ರಾಮಸ್ಥರು ಶವ ಸಂಸ್ಕಾರ ಮಾಡಲು ಮುಂದಾದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:10 pm, Sat, 29 July 23