AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chikkaballapur News: ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದ ತಹಶೀಲ್ದಾರರೊಬ್ಬರ ವಿದಾಯ ಪತ್ರ

ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದ ಚಿಕ್ಕಬಳ್ಳಾಪುರ ತಹಶೀಲ್ದಾರ್​ ಗಣಪತಿ ಶಾಸ್ತ್ರಿಯ ಅವರನ್ನು ಸದ್ಯ ಬೇರೆಡೆ ವರ್ಗಾವಣೆ ಮಾಡಲಾಗಿದೆ. ಆದರೆ ಅವರು ಬರೆದ ವಿದಾಯ ಪತ್ರ ಸೋಶಿಯಲ್​ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ.

Chikkaballapur News: ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದ ತಹಶೀಲ್ದಾರರೊಬ್ಬರ ವಿದಾಯ ಪತ್ರ
ತಹಶೀಲ್ದಾರ್ ಗಣಪತಿ ಶಾಸ್ತ್ರಿ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಗಂಗಾಧರ​ ಬ. ಸಾಬೋಜಿ|

Updated on: Jul 28, 2023 | 8:42 PM

Share

ಚಿಕ್ಕಬಳ್ಳಾಪು, ಜುಲೈ 28: ಚಿಕ್ಕಬಳ್ಳಾಪುರ (Chikkaballapur) ತಾಲ್ಲೂಕು ಗ್ರೇಡ್-1 ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಗಣಪತಿ ಶಾಸ್ತ್ರಿಯವರು ಪ್ರಾಮಾಣಿಕವಾಗಿ ದಕ್ಷರಾಗಿ ಕರ್ತವ್ಯ ನಿರ್ವಹಿಸಿ ಜನಸಾಮಾನ್ಯರ ತಹಶೀಲ್ದಾರ್ ಎಂದೆ ಖ್ಯಾತಿ ಪಡೆದಿದ್ದರು. ಆದರೆ ಈಗ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಯ ನಂತರ ತಮ್ಮ ಸೇವೆ, ಜನಸಾಮಾನ್ಯರ ಸಂಪರ್ಕ, ವೃತ್ತಿ ನಿಷ್ಠೆಯ ಬಗ್ಗೆ ಪತ್ರ ಬರೆದಿದ್ದು ಅದು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಏಪ್ರಿಲ್​ 27, 2021 ರಿಂದ ಜುಲೈ 28, 2023ರ ವರೆಗೆ ಚಿಕ್ಕಬಳ್ಳಾಪುರ ತಹಶೀಲ್ದಾರನಾಗಿ ಜನಸಾಮಾನ್ಯರ ಸೇವೆಯನ್ನು ಮಾಡಲು ನನಗೆ ಅವಕಾಶವನ್ನು ನೀಡಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು ಎಂದು ಪತ್ರ ಆರಂಭಿಸಿರುವ ಅವರು, ನನ್ನ ಈ ಸೇವಾ ಅವಧಿಯು ಅತ್ಯಂತ ತೃಪ್ತಿಕರವಾಗಿತ್ತು. ಯಾವುದೇ ರೀತಿಯ ತಾರತಮ್ಯವನ್ನು ಮಾಡದೇ, ನಿಶ್ಚಕ್ತಪಾತವಾಗಿ ಸೇವೆಯನ್ನು ಸಲ್ಲಿಸಲು ನಾನು ನನ್ನ ಅಧಿಕಾರದ ಅವಧಿಯಲ್ಲಿ ಪ್ರಯತ್ನಿಸಿರು ಎಂದಿದ್ದಾರೆ.

ಈ ಅವಧಿಯಲ್ಲಿ ಕಂದಾಯ ಇಲಾಖೆಯಲ್ಲಿ ಅಭಿಲೇಕಾಲಯದ ಉನ್ನತೀಕರಣ, ಇ-ಆಫೀಸು ತಂತ್ರಾಶ ಅಳವಡಿಕೆ ಸೇರಿದಂತೆ ಅನೇಕ ಬದಲಾವಣೆ ಸುಧಾರಣೆಗಳನ್ನು ಮಾಡಿರುತ್ತೇವೆ. ಸಾರ್ವತ್ರಿಕ ಚುನಾವಣೆ ಒಳಗೊಂಡಂತೆ ಅನೇಕ ಬೃಹತ್ ಕಾರ್ಯಕ್ರಮಗಳನ್ನು ನಡೆಸಲು ನನ್ನ ಕಿಂಚಿತ್ ಸಹಯೋಗವನ್ನು ನೀಡಿರುತ್ತೇವೆ.

ಇದನ್ನೂ ಓದಿ: ಚೆನ್ನಾಗಿ ಓದುವಂತೆ ಹೆತ್ತಮ್ಮ ಬುದ್ದಿವಾದ ಹೇಳಿದ್ದಕ್ಕೆ ಮನನೊಂದ ಬಾಲಕಿ ಉತ್ತರ ಪಿನಾಕಿನಿ ನದಿಗೆ ಹಾರಿ ಆತ್ಮಹತ್ಯೆ

2021 ರ ನೆರೆಹಾವಳಿಯಲ್ಲಿ ಜನರಿಗೆ ಅಗತ್ಯ ಸೇವೆ, ಸಹಕಾರವನ್ನು ಎಲ್ಲ ಇಲಾಖೆಗಳ ಸಹಯೋಗದೊಂದಿಗೆ ನೀಡಿರುತ್ತೇವೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಜನತೆಗಾಗಿ ಸುಮಾರು 500 ಎಕರೆಗೂ ಅಧಿಕ ಜಾಗೆಯನ್ನು ಆಶ್ರಯ ಯೋಜನೆಗೆ ಕಾಯ್ದಿರಿಸಿರುವುದು. 60 ಕಿ.ಮೀ ಗೂ ಅಧಿಕ ಉದ್ದದ ಕಾಲುವೆ ತೆರವು, 50ಕ್ಕೂ ಅಧಿಕ ರಸ್ತೆ, ದಾರಿ ಒತ್ತುವರಿ ತೆರವು ಮಾಡುವುದರೊಂದಿಗೆ ಸರಕಾರದ ಎಲ್ಲ ಯೋಜನೆಗಳನ್ನು ಜನತೆಗೆ ತಲುಪಿಸಿರುವ ಆತ್ಮತೃಪ್ತಿಯೊಂದಿಗೆ ಇಲ್ಲಿಂದ ಹೊರಡುತ್ತಿದ್ದೇನೆ ಎಂದರು.

ಈ ಎಲ್ಲ ಕೆಲಸಗಳಲ್ಲಿ, ನನ್ನ ಹಿರಿಯ ಅಧಿಕಾರಿಗಳು ನನಗೆ ಬೇಶರತ್ ಸಹಕಾರವನ್ನು ನೀಡಿರುತ್ತಾರೆ. ಮಾನ್ಯ ಜಿಲ್ಲಾಧಿಕಾರಿಗಳಾದ ಲತಾ ಮೇಡಂ, ನಾಗರಾಜ ಸರ್ ಮತ್ತು ಉಪವಿಭಾಗಾಧಿಕಾರಿಗಳಾದ ಸಂತೋಷ ಸರ್ ಅವರು ನನ್ನಲ್ಲಿ ತೋರಿದ ಭರವಸೆಯಿಂದ ಮಾತ್ರ ಇದು ಸಾಧ್ಯವಾಯಿತು. ಇದರೊಂದಿಗೆ ಅಪರ ಜಿಲ್ಲಾಧಿಕಾರಿಗಳು, ಸಿ.ಇ.ಓ ಅವರು, ಪೋಲಿಸ್ ವರಿಷ್ಟಾಧಿಕಾರಿಗಳು ಮತ್ತು ಎಲ್ಲ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಮತ್ತು ಸಹಕಾರದಿಂದ ಈ ಅವಧಿಯು ಅವಿಸ್ಮರಣೀಯವಾಗಿದೆ.

ನನ್ನ ಕಛೇರಿಯ ಸಿಬ್ಬಂದಿ ಎಲ್ಲ ಕೆಲಸದಲ್ಲಿ ನನ್ನ ಬೆನ್ನೆಲುಬಾಗಿ ನಿಂತಿದ್ದು ಅವರ ವಿನಃ ಎಲ್ಲವೂ ಅಸಾಧ್ಯವಾಗಿತ್ತು. ನನ್ನ ಕಠಿಣ ಆದೇಶಗಳಗೆ ಉತ್ತಮವಾಗಿ ಸ್ಪಂದಿಸಿದ ಎಲ್ಲ ಸಹೋದ್ಯೋಗಿಗಳಿಗೆ ನಾನು ಚಿರರುಣಿಯಾಗಿರುತ್ತೇನೆ. ಪೋಲೀಸ್, ಪಂಚಾಯತ್ ರಾಜ್, ಕೃಷಿ, ಆರೋಗ್ಯ ಒಳಗೊಂಡಂತೆ ಎಲ್ಲ ತಾಲ್ಲೂಕು ಮಟ್ಟದ ಅಧಿಕಾರಿಮಿತ್ರರು ಈ ಅವಧಿಯಲ್ಲಿ ನೀಡಿರುವ ಸಹಕಾರವನ್ನು ನಾನು ಎಂದೂ ಮರೆಯುವುದಿಲ್ಲ.

ಇದನ್ನೂ ಓದಿ: ಚಿಂತಾಮಣಿ: ಜಖಂಗೊಂಡಿದ್ದ ತಮಿಳುನಾಡು ಕಾರಿನಲ್ಲಿ, ದಾಖಲೆಗಳಿಲ್ಲದೆ ಸಾಗಿಸ್ತಿದ್ದ 5 ಕೋಟಿ ರೂ ಬೆಲೆಯ 10 ಕೆಜಿ ಚಿನ್ನಾಭರಣ ಪೊಲೀಸರ ವಶಕ್ಕೆ

ಈ ಸಮಯದಲ್ಲಿ ನಾನು ಜನಪ್ರತಿನಿಧಿಗಳನ್ನು ಮತ್ತು ವಿವಿಧ ಸಂಘಟನೆಗಳ ಮುಖಂಡರನ್ನು ಸ್ಮರಿಸಲೇ ಬೇಕು, ಕೆಲವು ಕಠಿಣ ನಿರ್ಣಯಗಳನ್ನು ತೆಗೆದುಕೊಂಡಾಗಲೂ ನೀವೆಲ್ಲರೂ ನನ್ನ ಜೊತೆಗೆ ನಿಂತು ಸಹಕರಿಸಿರುವಿರಿ.

ಮಾನ್ಯ ಮಾಜಿ ಸಚಿವರು ಡಾ. ಕೆ. ಸುಧಾಕರ ಅವರನ್ನು ನಾನು ಈ ಸಮಯದಲ್ಲಿ ನೆನಪಿಸಿಕೊಳ್ಳದೇ ಇದ್ದರೆ ಅದು ಆತ್ಮವಂಚನೆಯಾಗುತ್ತದೆ. ಈ ಮೇಲಿನ ಸಾಧನೆ ಅವರು ನೀಡಿದ ಮಾರ್ಗದರ್ಶನ ಮತ್ತು ಬೆಂಬಲದಿಂದ ಮಾತ್ರ ಸಾಧ್ಯವಾಯಿತು, ಎಲ್ಲಂಕ್ಕಿಂತ ಮುಖ್ಯವಾಗಿ ಜನಸಾಮಾನ್ಯರು ನನ್ನಲ್ಲಿ ತೋರಿದ ಪ್ರೀತಿ-ವಿಶ್ವಾಸ, ಪತ್ರಿಕಾ ಮಾಧ್ಯಮದವರು ನೀಡಿದ ಸಹಕಾರವು ಅವಿಸ್ಮರಣೀಯವಾಗಿದೆ.

ಇನ್ನೊಮ್ಮೆ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತ ನಿಮ್ಮ ಪ್ರೀತಿ, ವಿಶ್ವಾಸ ನನ್ನ ಮೇಲೆ ಸದಾ ಇರಲಿ ಮತ್ತು ನಿಮ್ಮ ಪ್ರಾರ್ಥನೆಯಲ್ಲಿ ನನ್ನನ್ನು ಸೇರಿಸಿ ಎಂದು ಕೋರುತ್ತ ಮತ್ತೆ ನಿಮ್ಮ ಸೇವೆ ಮಾಡುವ ಆಶೆಯೊಂದಿಗೆ ಚಿಕ್ಕಬಳ್ಳಾಪುರದಿಂದ ತಾತ್ಕಾಲಿಕವಾಗಿ ಹೊರಡುತ್ತೇನೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ