ಚಿಕ್ಕಬಳ್ಳಾಪುರ ಅಪಘಾತ: ತನ್ನವರನ್ನು ಕಳೆದುಕೊಂಡು ಅನಾಥೆಯಾದ ಮಹಿಳೆ

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬರುಡುಗುಂಟೆ ಬಳಿ ಸಂಭವಿಸಿದ್ದ ಭೀಕರ ಬಸ್ ಮತ್ತು ಬೈಕ್ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಓರ್ವ ಮಹಿಳೆ ತನ್ನ ತಂದೆ, ಗಂಡ, ಮಗ ಮತ್ತು ತಮ್ಮನನ್ನು ಕಳೆದುಕೊಂಡು ದಿಕ್ಕುತೋಚದಂತಾಗಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

ಚಿಕ್ಕಬಳ್ಳಾಪುರ ಅಪಘಾತ: ತನ್ನವರನ್ನು ಕಳೆದುಕೊಂಡು ಅನಾಥೆಯಾದ ಮಹಿಳೆ
ಚಿಕ್ಕಬಳ್ಳಾಪುರ ಅಪಘಾತ
Edited By:

Updated on: Oct 24, 2025 | 7:30 PM

ಚಿಕ್ಕಬಳ್ಳಾಪುರ, ಅಕ್ಟೋಬರ್​ 24: ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಬರುಡುಗುಂಟೆ ಗ್ರಾಮದ ಬಳಿ ಗುರುವಾರ ರಾತ್ರಿ ಖಾಸಗಿ ಶಾಲಾ ಬಸ್ ಹಾಗೂ ಬೈಕ್ ಮಧ್ಯೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ (Accident) ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವಂತಹ (death) ದಾರುಣ ಘಟನೆ ನಡೆದಿದೆ. ತಂದೆ, ಗಂಡ, ಮಗ, ಹಾಗೂ ತಮ್ಮ ನನ್ನ ಕಳೆದುಕೊಂಡು ಓರ್ವ ಮಹಿಳೆ ಅನಾಥರಾಗಿದ್ದಾರೆ. ಸದ್ಯ ದುರಂತದಿಂದ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಬರುಡುಗುಂಟೆ ಗ್ರಾಮದ ಬಳಿ ನಿನ್ನೆ ರಾತ್ರಿ ಸಂಭವಿಸಿದ್ದ ಖಾಸಗಿ ಶಾಲಾ ಬಸ್ ಹಾಗೂ ಬೈಕ್ ಮಧ್ಯದ ಭೀಕರ ಅಪಘಾತ ಪ್ರಕರಣದಲ್ಲಿ ವಿವಾಹತ ಸ್ವಾತಿ ಎನ್ನುವ ಮಹಿಳೆ ತನ್ನ ತಂದೆ ವೆಂಕಟೇಶಪ್ಪ, ಗಂಡ ಬಾಲಾಜಿ, ಮಗ ಆರ್ಯ, ತಮ್ಮ ಹರ್ಷ ನನ್ನ ಕಳೆದುಕೊಂಡು ದಿಕ್ಕು ತೋಚದಂತಾಗಿದ್ದಾರೆ.

ಇದನ್ನೂ ಓದಿ: ಬೈಕ್- ಶಾಲಾ ಬಸ್ ನಡುವೆ ಭೀಕರ ಅಪಘಾತ: ಮಕ್ಕಳು ಸೇರಿ ನಾಲ್ವರು ದುರ್ಮರಣ

ಇಂದು ಚಿಂತಾಮಣಿ ತಾಲೂಕಾಸ್ಪತ್ರೆ ಬಳಿ ಮೃತರ ಶವಗಳನ್ನ ನೋಡುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಎರಡು ಕುಟುಂಬಗಳಿಗೆ ಆಧಾರ ಸ್ತಂಭವಾಗಿದ್ದ ನಾಲ್ವರು ಗಂಡು ವಾರಸುದಾರರನ್ನು ಕಳೆದುಕೊಂಡು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಇನ್ನು ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು ನಿವಾಸಿ ಬಾಲಾಜಿ, ಕೆಲವು ವರ್ಷಗಳ ಹಿಂದೆ ಚೇಳೂರು ತಾಲ್ಲೂಕಿನ ತಾಡಿಗೋಳು ಗ್ರಾಮದ ವೆಂಕಟೇಶಪ್ಪ ಅವರ ಮಗಳು ಸ್ವಾತಿಯನ್ನ ಮದುವೆ ಮಾಡಿಕೊಂಡಿದ್ದು, ಇಬ್ಬರು ಮಕ್ಕಳಿದ್ದಾರೆ. ಅಪಘಾತದಲ್ಲಿ ಮಗ ಆರ್ಯನನ್ನ ಕಳೆದುಕೊಂಡಿದ್ದಾರೆ. ಅಪಘಾತದಲ್ಲಿ ತಂದೆ, ಗಂಡ, ತಮ್ಮ, ಮಗನನ್ನ ಕಳೆದುಕೊಂಡು ಮೃತ ಬಾಲಾಜಿ ಪತ್ನಿ ಸ್ವಾತಿ ಆಘಾತಕ್ಕೆ ಒಳಗಾಗಿದ್ದು, ಅವರ ಜೊತೆಗೆ ನಾನೂ ಹೋಗಬಾರದಿತ್ತೆ ಅಂತ ಅಲವತ್ತುಕೊಂಡಿದ್ದಾರೆ.

ಇದನ್ನೂ ಓದಿ: ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು

ಮತ್ತೊಂದೆಡೆ ಸಂಬಂಧಿಕರ ಮದುವೆಗೆ ಎಂದು ಬೈಕ್​​​ನಲ್ಲಿ ತೆರಳಿದ್ದ ಐವರಲ್ಲಿ ನಾಲ್ವರು ಮದುವೆ ಮನೆಗೆ ಹೋಗುವ ಮೊದಲೇ ಸ್ಮಶಾನ ಸೇರಿದ್ದು ದುರಾದೃಷ್ಟಕರ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.