ಚಿಕ್ಕಬಳ್ಳಾಪುರ: ಆಲೂಗಡ್ಡೆ ಬೆಳೆದು ಉತ್ತಮ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ ರೈತರು

|

Updated on: Apr 10, 2023 | 10:18 AM

ಬೇಸಿಗೆಯಲ್ಲಿ ಆಲೂಗಡ್ಡೆ ಬೆಳೆದರೆ, ನಾಲ್ಕು ಕಾಸು ಮಾಡಬಹುದು ಎಂದು ಆ ಜಿಲ್ಲೆಯ ರೈತರು ಹಗಲು ರಾತ್ರಿ ಕಷ್ಟಪಟ್ಟು ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆದಿದ್ದರು. ಆದರೆ ಬೆಳೆದ ಆಲೂಗಡ್ಡೆಗೆ ಮಾರುಕಟ್ಟೆಯಲ್ಲಿ ಯಾರು ಕೇಳುತ್ತಿಲ್ಲ. ಹೀಗಾಗಿ ಸ್ವಲ್ಪ ದಿನ ಬಿಟ್ಟು ಮಾರೋಣವೆಂದು ಕೋಲ್ಡ್ ಸ್ಟೋರೇಜ್​ನಲ್ಲಿ ಇಡಲು ಜಾಗವಿಲ್ಲ. ಇದರಿಂದ ಆಲೂಗಡ್ಡೆ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಚಿಕ್ಕಬಳ್ಳಾಪುರ: ಆಲೂಗಡ್ಡೆ ಬೆಳೆದು ಉತ್ತಮ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ ರೈತರು
ಕಂಗಾಲಾದ ರೈತರು
Follow us on

ಚಿಕ್ಕಬಳ್ಳಾಪುರ: ಹೀಗೆ ನೂರಾರು ಲೋಡ್​ಗಳಲ್ಲಿ ಆಲೂಗಡ್ಡೆಯನ್ನ(Potato) ತುಂಬಿ ನಿಲ್ಲಿಸಿರುವುದು ನಗರದ ನಂದಿ ಕೋಲ್ಡ್ ಸ್ಟೋರೇಜ್ ಬಳಿ, ಮತ್ತೊಂದೆಡೆ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ರಾಶಿ ರಾಶಿ ಆಲೂಗಡ್ಡೆಯನ್ನ ಗುಡ್ಡೆ ಹಾಕಿರುವುದು. ಹೌದು ಯಾವುದೇ ಕಾಲದಲ್ಲಾದರೂ ಆಲೂಗಡ್ಡೆ ಬೆಳೆಯುವುದಕ್ಕೆ ಪೇಮಸ್ ಆಗಿರುವ ಚಿಕ್ಕಬಳ್ಳಾಪುರದ ಆಲೂಗಡ್ಡೆ ಬೆಳೆಗಾರರು, ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಗಲು ರಾತ್ರಿ ಕಷ್ಟ ಪಟ್ಟು ಆಲೂಗಡ್ಡೆ ಬೆಳೆದರೆ ಈ ಭಾರಿ ಆಲೂಗಡ್ಡೆಯನ್ನು ಅದ್ಯಾಕೋ ಯಾರು ಕೇಳುತ್ತಿಲ್ಲ. ಇದರಿಂದ ಬೆಳೆದ ಆಲೂಗಡ್ಡೆಯನ್ನ ಮಾರುಕಟ್ಟೆಗೆ ತಂದರೆ ಮೂಟೆ ಆಲೂಗಡ್ಡೆಯ ಬೆಲೆ ಇನ್ನೂರು ರೂಪಾಯಿ ಆಗಿದೆ. ಹೀಗಾಗಿ ಕೈಗೆ ಬಂದ ಆಲೂಗಡ್ಡೆಗೆ, ಬೆಲೆ ಇಲ್ಲದೆ ರೈತರು ಕಂಗಲಾಗಿದ್ದಾರೆ.

ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಆಲೂಗಡ್ಡೆಗೆ ಬೆಲೆಯಿಲ್ಲದ ಕಾರಣ ಬೆಳೆದ ಆಲೂಗಡ್ಡೆಯನ್ನ ಕೋಲ್ಡ್ ಸ್ಟೋರೇಜ್​ನಲ್ಲಿ ಇಡಲು ರೈತರು ಮುಂದಾಗಿದ್ದಾರೆ. ಆದರೆ ಒಂದೇ ಸಮಯಕ್ಕೆ ಸಾವಿರಾರು ಲೋಡ್ ಆಲೂಗಡ್ಡೆ ಬರುತ್ತಿರುವ ಕಾರಣ, ಕೋಲ್ಡ್ ಸ್ಟೋರೇಜ್​ನಲ್ಲಿ ಜಾಗ ಇಲ್ಲವಾಗಿದೆ. ಇದರಿಂದ ರೈತರು, ವರ್ತಕರು, ವ್ಯಾಪಾರಿಗಳು ಸೇರಿದಂತೆ ರಾಜಕಾರಣಿಗಳಿಗೆ ಶಾಪ ಹಾಕುತ್ತಿದ್ದಾರೆ.

ಇದನ್ನೂ ಓದಿ:ರಾಮನಗರ: ಮಾವು ಬೆಳೆಯಿಂದ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ಶಾಕ್​; ನಿರೀಕ್ಷಿತ ಬೆಲೆ ಸಿಗದೇ ರೈತ ಕಂಗಾಲು

ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಆಲೂಗಡ್ಡೆ ಸೇರಿದಂತೆ ತರೇವಾರಿ ತರಕಾರಿ ಹಣ್ಣುಗಳನ್ನು ಬೆಳೆಯುತ್ತಾರೆ. ಆದರೆ ಬೆಲೆ ಕುಸಿತವಾದಾಗ ನಾಲ್ಕು ದಿನ ಕೋಲ್ಡ್ ಸ್ಟೋರೇಜ್​ನಲ್ಲಿ ಇಡೋಣ ಅಂದರೆ ಸರ್ಕಾರದಿಂದ ಒಂದು ಕೋಲ್ಡ್ ಸ್ಟೋರೇಜ್ ಕೂಡ ಇಲ್ಲ. ಇರುವ ಒಂದು ಖಾಸಗಿ ಸ್ಟೋರೇಜ್​ಗೆ ಇದೀಗ ರೈತರು ಮುಗಿಬಿಳುತ್ತಿದ್ದಾರೆ.

ವರದಿ: ಭೀಮಪ್ಪ ಪಾಟೀಲ್ ಟಿವಿ9 ಚಿಕ್ಕಬಳ್ಳಾಾಪುರ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ