AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Narendra Malav: 10 ಸಾವಿರದಲ್ಲಿ ಆರಂಭಿಸಿದ ಜೇನುಸಾಕಣೆಯಲ್ಲಿ ಇಂದು 25 ಲಕ್ಷ ರೂ. ಗಳಿಸುತ್ತಿರುವ ರೈತ

10,000 ರೂಪಾಯಿ ಬಂಡವಾಳದೊಂದಿಗೆ ತನ್ನ ಯಶಸ್ವಿ ಜೇನುಸಾಕಣೆ ಉದ್ಯಮವನ್ನು ಪ್ರಾರಂಭಿಸಿ ಪ್ರಸ್ತುತ ವರ್ಷಕ್ಕೆ 25 ಲಕ್ಷ ರೂಪಾಯಿ ಗಳಿಸುತ್ತಿರುವ ರೈತ ನರೇಂದ್ರ ಮಾಲವ್ ಅವರ ಜೀವನ ಗಾಥೆ.

Narendra Malav: 10 ಸಾವಿರದಲ್ಲಿ ಆರಂಭಿಸಿದ ಜೇನುಸಾಕಣೆಯಲ್ಲಿ ಇಂದು 25 ಲಕ್ಷ ರೂ. ಗಳಿಸುತ್ತಿರುವ ರೈತ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Apr 05, 2023 | 3:31 PM

Share

ಜೇನುತುಪ್ಪವು ಹೃದಯದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇಂತಹ ಸಿಹಿಯಾದ ಜೇನು ತಯಾರಿಸುವ ರೈತರಲ್ಲಿ ಒಬ್ಬರಾದ ರಾಜಸ್ಥಾನದ ಕೋಟಾದ ರೈತ ನರೇಂದ್ರ ಮಾಲವ್. ಇವರು ಜೇನುಸಾಕಣೆಯಲ್ಲಿ ಪರಿಣತರಾಗಿದ್ದು ಅದರಲ್ಲಿಯೇ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಈ ಕಾರ್ಯಕ್ಕೆ ಅವರು ಗೌರವ, ಪ್ರಶಂಸೆಗಳ ಜತೆಗೆ ಲಕ್ಷಗಟ್ಟಲೆ ಲಾಭ ಗಳಿಸುತ್ತಾರೆ. ಈ ಯಶಸ್ವಿ ರೈತ ಕೋಟಾ ಮೂಲದ ನರೇಂದ್ರ ಮಾಲವ್ ಕೃಷಿ ವಿಜ್ಞಾನ ಕೇಂದ್ರದಿಂದ ಕೋಟಾದಲ್ಲಿ ಜೇನುಸಾಕಣೆ ತರಬೇತಿಯನ್ನು ಪಡೆದು 2004ರಲ್ಲಿ ಜೇನುಸಾಕಣೆಯನ್ನು ಪ್ರಾರಂಭಿಸಿದರು. ಅವರು ಜೇನುತುಪ್ಪದ ಜೊತೆಗೆ ಜೇನುನೊಣಗಳನ್ನು ಮಾರಾಟ ಮಾಡುತ್ತಾರೆ. ಜೇನು ಮಾರಾಟಕ್ಕಿಂತ ಜೇನುನೊಣಗಳನ್ನು ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭ ಬರುತ್ತದೆ ಎಂದು ಅವರು ಹೇಳುತ್ತಾರೆ.

ಮಾಲವ್ ತನ್ನ ಜೇನುಸಾಕಣೆ ವ್ಯವಹಾರವನ್ನು ಪ್ರಾರಂಭಿಸಲು ಕೇವಲ 10,000 ರೂ. ತೊಡಿಗಿಸಿದ್ದರಂತೆ. ಈಗ ಮಾಲವ್ ಮತ್ತು ಅವರ ಸಹೋದರ ಮಹೇಂದ್ರ ಮಾಳವ್ ಇಬ್ಬರೂ ಜೇನು ಸಾಕಣೆದಾರರಾಗಿದ್ದು, ವರ್ಷಕ್ಕೆ ದೊಡ್ಡ ಮೊತ್ತವನ್ನು ಗಳಿಸುತ್ತಿದ್ದಾರೆ. ಕೋಟಾದಲ್ಲಿ ಜೇನುಸಾಕಣೆಯ ಸೀಸನ್ 8 ತಿಂಗಳವರೆಗೆ ಇರುತ್ತದೆ. ಬಳಿಕ ಅದೇ ಜಾಗದಲ್ಲಿ ಸಾಸಿವೆ ಮತ್ತು ಕೊತ್ತಂಬರಿ ಬೆಳೆಗಳು ಬೆಳೆಯುತ್ತಾರೆ.

ವಾರ್ಷಿಕ ಆದಾಯ 25 ಲಕ್ಷ ರೂ.

ಮಾಲವ್ ಅವರಿಗೆ ಜೇನುಸಾಕಣೆಯಿಂದ ವಾರ್ಷಿಕ ಆದಾಯ 25 ಲಕ್ಷ ರೂ. ಇದರ ಜತೆಗೆ ಏಳೆಂಟು ಮಂದಿ ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದು, ಜೇನು ಪೆಟ್ಟಿಗೆಗಳನ್ನು ಹೊಲಗಳಲ್ಲಿ ಇರಿಸುವ ಮೂಲಕ ಜೇನುನೊಣಗಳನ್ನು ಕೂರಿಸಲಾಗುತ್ತದೆ ಎಂದು ಮಾಲವ್ ತಮ್ಮ ಕೆಲಸದ ಬಗ್ಗೆ ವಿವರಿಸಿದ್ದು. ಪ್ರಸ್ತುತ, ಮಾಲವ್ 1300 ಜೇನುನೊಣಗಳ ಪೆಟ್ಟಿಗೆ ಹೊಂದಿದ್ದು ಒಂದು ಪೆಟ್ಟಿಗೆ ವರ್ಷಕ್ಕೆ 7 ರಿಂದ 8 ಬಾರಿ ಹಾಗೂ ಅದರಲ್ಲಿ ಪ್ರತಿ ವರ್ಷ 25 ರಿಂದ 30 ಕೆಜಿ ಜೇನುತುಪ್ಪವನ್ನು ಉತ್ಪಾದಿಸಲಾಗುತ್ತದೆ. ಅಲ್ಲದೆ ಅವರು ಶುದ್ಧ ಜೇನುತುಪ್ಪದ ಜೊತೆಗೆ ಫೆನ್ನೆಲ್, ಕೊತ್ತಂಬರಿ, ಸಾಸಿವೆಯ ಜೇನುತುಪ್ಪವನ್ನು ಒಳಗೊಂಡಂತೆ ಹಲವಾರು ವಿಧದ ಜೇನುತುಪ್ಪವನ್ನು ತಯಾರಿಸುತ್ತಾರೆ.

ಇದನ್ನೂ ಓದಿ: ಕೃಷಿ ಜೊತೆಗೆ ಉಪಕಸಬುಗಳಿಂದ ಭರ್ಜರಿ ಲಾಭ: ಜೇನು ಕೃಷಿ ಮಾಡುವ ಮೂಲಕ ಮಾದರಿಯಾದ ಚಿತ್ರದುರ್ಗ ರೈತ

ಜೇನುಸಾಕಣೆಗೆ ಅಗತ್ಯ ನಿರ್ವಹಣೆ

ಜೇನು ಸಾಕಾಣಿಕೆಗೆ ಹೆಚ್ಚಿನ ನಿರ್ವಹಣೆಯ ಅಗತ್ಯವಿದೆ ಎಂದು ಮಾಲವ್ ಹೇಳುತ್ತಾರೆ. ಹೆಚ್ಚು ನಿರ್ವಹಣೆಯೊಂದಿಗೆ ಮಾತ್ರ ಒಳ್ಳೆಯ ಆರ್ಥಿಕ ಫಲಿತಾಂಶ ಸಾಧಿಸಲು ಸಾಧ್ಯವಾಗುತ್ತದೆ. ಜೇನು ಸಾಕಾಣಿಕೆ ಉದ್ಯಮದ ಕುರಿತು ಮಾರ್ಗದರ್ಶನ ನೀಡಿದ ನರೇಂದ್ರ ಮಾಳವ್ ಅವರು ಜೇನುಸಾಕಣೆ ಉದ್ಯಮವನ್ನು ರಚಿಸಲು ನಿರ್ಧರಿಸಿದರೆ, ಅವರು 25 ರಿಂದ 50 ಪೆಟ್ಟಿಗೆಗಳನ್ನು ನೀಡುವ ಮೂಲಕ ಮೊದಲು 25 ರಿಂದ 30 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?
ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ