Weight Loss Breakfast: ತೂಕ ನಷ್ಟಕ್ಕೆ ಸಹಕಾರಿ ಈ ರುಚಿಕರ ಜೋಳದ ಉಪ್ಪಿಟ್ಟು

ಈ ಜೋಳದ ಉಪ್ಪಿಟ್ಟು ಆರೋಗ್ಯಕರವಾಗಿದೆ ಹಾಗೂ ತುಂಬಾ ರುಚಿಕರವಾಗಿದೆ ಜೊತೆಗೆ ತೂಕನಷ್ಟಕ್ಕೂ ಇದು ಸಹಕಾರಿ. ಇದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.

Weight Loss Breakfast: ತೂಕ ನಷ್ಟಕ್ಕೆ ಸಹಕಾರಿ ಈ ರುಚಿಕರ ಜೋಳದ ಉಪ್ಪಿಟ್ಟು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 05, 2023 | 2:07 PM

ಭಾರತೀಯರ ಜನಪ್ರಿಯ ಪಾಕವಿಧಾನಗಳಲ್ಲಿ ಉಪ್ಪಿಟ್ಟು ಕೂಡಾ ಒಂದು. ಇದು ಪೊಷಕಾಂಶಗಳಿಂದ ಉತ್ತಮ ಉಪಹಾರವಾಗಿದೆ. ಹೆಚ್ಚಿನ ಭಾರತೀಯ ಮನೆಗಳಲ್ಲಿ ಹೆಚ್ಚಾಗಿ ಉಪ್ಪಿಟ್ಟು ಬೆಳಗ್ಗಿನ ಉಪಹಾರವಾಗಿರುತ್ತದೆ. ಅನೇಕ ವಿಧಾನಗಳಲ್ಲಿ ಈ ಉಪ್ಪಿಟ್ಟನ್ನು ತಯಾರಿಸಲಾಗುತ್ತದೆ. ಕೆಲವರು ಉಪ್ಪಿಟ್ಟಿಗೆ ಡ್ರೈöÊ ಫ್ರೂಟ್ಸ್, ಮೊಸರು ಹಾಗೂ ಕೆಲವರು ತರಕಾರಿಗಳನ್ನು ಬಳಸಿ ಉಪ್ಪಿಟನ್ನು ತಯಾರಿಸುತ್ತಾರೆ. ಸಾಮಾನ್ಯವಾಗಿ ಉಪ್ಪಿಟ್ಟನ್ನು ರವೆಯನ್ನು ಬಳಸಿ ತಯಾರಿಸಲಾಗುತ್ತದೆ. ಆದರೆ ನೀವು ತೂಕ ಇಳಿಸಿಕೊಳ್ಳವ ಆಹಾರ ಕ್ರಮದಲ್ಲಿದ್ದರೆ, ನೀವು ಜೋಳವನ್ನು ಬಳಸಿ ಉಪ್ಪಿಟ್ಟನ್ನು ತಯಾರಿಸಬಹುದು, ಇದು ನಿಮಗೆ ಪೋಷಕಾಂಶವನ್ನು ನೀಡುವುದರ ಜೊತೆಗೆ ನಿಮ್ಮ ತೂಕನಷ್ಟಕ್ಕೂ ಇದು ಸಹಕಾರಿಯಾಗಿದೆ.

ತೂಕ ನಷ್ಟಕ್ಕೆ ಉಪ್ಪಿಟ್ಟು ಒಳ್ಳೆಯದೇ? ಜೋಳದ ಉಪ್ಪಿಟ್ಟಿನ ಆರೋಗ್ಯ ಪ್ರಯೋಜನಗಳು

ಫೈಬರ್‌ನಿಂದ ಸಮೃದ್ಧವಾಗಿದೆ: ಜೋಳವು ಫೈಬರ್‌ನ ಅತ್ಯುತ್ತಮ ಮೂಲವಾಗಿದೆ. ಈ ಜೋಳದ ಉಪ್ಪಿಟ್ಟು ನಿಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದರ ಹೆಚ್ಚಿನ ಫೈಬರ್ ಅಂಶವು ಕರುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಹಾಗೂ ಮಲಬದ್ಧತೆ ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಪ್ರೋಟೀನ್‌ನ ಅತ್ಯುತ್ತಮ ಮೂಲ: ತೂಕ ಇಳಿಸಿಕೊಳ್ಳಲು ಬಯಸುವವರು ಹೆಚ್ಚಾಗಿ ಹೆಚ್ಚಿನ ಪ್ರೋಟೀನ್ ಆಹಾರಗಳನ್ನು ಸೇವಿಸುತ್ತಾರೆ. ಜೋಳದ ಉಪ್ಪಿಟ್ಟು ಕೂಡಾ ಉತ್ತಮ ಪ್ರೋಟೀನ್‌ನ ಮೂಲವಾಗಿದೆ. ಮತ್ತು ಇದು ಅನಾರೋಗ್ಯಕರ ಕಡುಬಯಕೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:Weight loss tips: ತೂಕ ಇಳಿಸಿಕೊಳ್ಳಲು ಈ ಹಣ್ಣಿನ ಜ್ಯೂಸ್ ಕುಡಿಯಿರಿ? ಇಲ್ಲಿದೆ ತಜ್ಞರ ಸಲಹೆ

ಕಡಿಮೆ ಗ್ಲೆಸೆಮಿಕ್ ಸೂಚ್ಯಂಕ: ಕಡಿಮೆ ಗ್ಲೆಸೆಮಿಕ್ ಸೂಚಿಯನ್ನು ಹೊಂದಿರುವ ಕೆಲವು ಆಹಾರಗಳು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇಂತಹ ಆಹಾರಗಳು ರಕ್ತದಲ್ಲಿ ಸಕ್ಕರೆಯ ಬಿಡುಗಡೆಯನ್ನು ನಿಧಾನಗೊಳಿಸುತ್ತದೆ. ಇದರಿಂದ ಮಧುಮೇಹಿಗಳಿಗೂ ಜೋಳ ತಿನ್ನಲು ಶಿಫಾರಸು ಮಡಬಹಬುದು.

ಶಕ್ತಿಯ ಮಟ್ಟವನ್ನು ಸುಧಾರಿಸುತ್ತದೆ: ನೀವು ತೂಕ ಇಳಿಸಿಕೊಳ್ಳುವ ಆಹಾರಕ್ರಮದಲ್ಲಿರುವಾಗ, ದೇಹದಲ್ಲಿ ಸಮತೋಲನವನ್ನು ಕಂಡುಕೊಳ್ಳುವುದು ಕೆಲವೊಮ್ಮೆ ಸವಾಲಾಗಬಹುದು. ಇದರ ಪರಿಣಾಮವಾಗಿ ನಿಮ್ಮಲ್ಲಿ ಸುಸ್ತಾ ಕೂಡ ಆಗಬಹುದು. ಜೋಳವನ್ನು ಸೇವಿಸುವುದರಿಂದ ನಿಮ್ಮ ಆಯಾಸವನ್ನು ನಿರ್ವಹಿಸಬಹುದು.

ಮನೆಯಲ್ಲಿಯೇ ಜೋಳದ ಉಪ್ಪಿಟ್ಟನ್ನು ಮಾಡುವುದು ಹೇಗೆ:

ಈ ಉಪ್ಪಿಟ್ಟನ್ನು ಮಾಡಲು ನೀವು ಸಂಪೂರ್ಣ ಜೋಳ ಅಥವಾ ಜೋಳದ ಹಿಟ್ಟನ್ನು ಬಳಸಬಹುದು. ನೀವು ಹಿಟ್ಟನ್ನು ಬಳಸುತ್ತಿದ್ದರೆ, ಒಂದೊಳ್ಳೆ ತುಂಬಾ ರುಚಿಯಾಗಿರಬೇಕಾದರೆ, ಅದಕ್ಕೆ ಸ್ವಲ್ಪ ರವೆಯನ್ನು ಮಿಶ್ರಣ ಮಾಡಬಹುದು. ಜೋಳದ ಉಪ್ಪಿಟ್ಟನ್ನು ಇತರ ಉಪ್ಪಿಟ್ಟಿನಂತೆಯೇ ಹೆಚ್ಚಿನ ಪದಾರ್ಥಗಳನ್ನು ಸೇರಿಸಿ ತಯಾರಿಸಬಹುದು. ಉಪ್ಪಿಟ್ಟಿನ ರುಚಿ ಮತ್ತು ಪೌಷ್ಟಿಕಾಂಶವನ್ನು ಹೆಚ್ಚಿಸಲು ಈರುಳ್ಳಿ, ಹಸಿರು ಬಟಾಣಿ, ಕ್ಯಾರೆಟ್, ಕ್ಯಾಪ್ಸಿಕಮ್ ಮುಂತಾದ ನಿಮ್ಮ ಆಯ್ಕೆಯ ತರಕಾರಿಗಳನ್ನು ಬಳಸಬಹುದು.

ತಯಾರಿಸುವ ವಿಧಾನ: ನೀವು ಸಂಪೂರ್ಣ ಜೋಳವನ್ನು ಬಳಸುತ್ತಿದ್ದರೆ, ಅದನ್ನು ರಾತ್ರಿಯಿಡಿ ನೆನೆಸಿಟ್ಟು ಮರುದಿನ ಅದನ್ನು ಉಪ್ಪು ಮತ್ತು ನೀರು ಸೇರಿಸಿ 3 ಸೀಟಿ ಬರುವವರೆಗೆ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿ. ನಂತರ ಒಂದು ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಸಾಸಿವೆ, ಉದ್ದಿನ ಬೇಳೆಯನ್ನು ಸೇರಿಸಿ ಫ್ರೈ ಮಾಡಿ ನಂತರ ಅದಕ್ಕೆ ಕರಿಬೇವಿನ ಎಲೆ, ಇಂಗು, ಹಸಿಮೆಣಸಿನಕಾಯಿ ಹಾಗೂ ಶುಂಠಿಯನ್ನು ಸೇರಿಸಿ. ಬಳಿಕ ಸಣ್ಣದಾಗಿ ಕೊಚ್ಚಿದ ಈರುಳ್ಳಿಯನ್ನು ಸೇರಿಸಿ ಅದನ್ನು ಅರೆಪಾರದರ್ಶಕವಾಗುವವರೆಗೆ ಹುರಿಯಿರಿ. ನೀವು ಒಂದು ವೇಳೆ ಜೋಳದ ಹಿಟ್ಟನ್ನು ಬಳಸುತ್ತಿದ್ದರೆ ಈ ಹಂತದಲ್ಲಿಯೇ ಹಿಟ್ಟನ್ನು ಕಡಾಯಿಗೆ ಹಾಕಿಕೊಳ್ಳಿ. ಜೊತೆಗೆ ಬೇಯಿಸಿದ ಬಟಾಣಿ ಮತ್ತು ಇತರ ತರಕಾರಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನೀವು ಸಂಪೂರ್ಣ ಜೋಳವನ್ನು ಬಳಸುತ್ತಿದ್ದರೆ ಈ ಹಂತದಲ್ಲಿ ಅದನ್ನು ಕಡಾಯಿಗೆ ಸೇರಿಸಿ ಸುಮಾರು ಮೂರು ನಿಮಿಷಗಳ ಕಾಲ ಹುರಿಯಿರಿ. ಮತ್ತು ನಿಂಬೆರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರ ಉಪ್ಪಿಟ್ಟು ಸವಿಯಲು ಸಿದ್ಧ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ