Summer Drinks: ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸುವ ಮೂರು ಬಗೆಯ ರಿಫ್ರೆಶಿಂಗ್ ಪಾನೀಯಗಳು
ಈ ಸುಡು ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟೆಡ್ ಆಗಿ ಇಟ್ಟುಕೊಳ್ಳುವುದು ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಕಾಲೋಚಿತ ಹಣ್ಣುಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಬೇಸಿಗೆಯ ಋತುವಿನಲ್ಲಿ ಸಿಗುವ ಹಣ್ಣುಗಳಿಂದ ತಯಾರಿಸಬಹುದಾದ ರಿಫ್ರೆಶಿಂಗ್ ಪಾನೀಯಗಳ ಪಾಕವಿಧಾನ ಇಲ್ಲಿದೆ.
ಬೇಸಿಗೆಯಲ್ಲಿ ದ್ರವ ಪದಾರ್ಥವನ್ನು ಹೆಚ್ಚು ಸೇವಿಸಿದಷ್ಟು ನಮಗೆ ಒಳ್ಳೆಯದು. ಇದು ನಮ್ಮ ದೇಹವನ್ನು ನೀರಿನಾಂಶಗಳನ್ನು ಆಗಿರಿಸುತ್ತದೆ. ಹೆಚ್ಚಿನ ಜನರು ಬೇಸಿಗೆಯಲ್ಲಿ ಹಣ್ಣಿನ ಜ್ಯೂಸ್ ಕುಡಿಯಲು ಬಯಸುತ್ತಾರೆ. ಅಂಗಡಿಯಲ್ಲಿ ಸಿಗುವ ಪಾನೀಯಗಳು ಹೆಚ್ಚುವರಿ ಸಕ್ಕರೆಯನ್ನು ಹೊಂದಿರುವ ಕಾರ್ಬೋನೇಟೆಡ್ ಪಾನೀಯಗಳಾಗಿರುತ್ತವೆ. ಅದರ ಬದಲು ಆರೋಗ್ಯಕರ ಪಾನೀಯಗಳನ್ನು ಸೇವಿಸುವುದು ಒಳ್ಳೆಯದು. ಅದಕ್ಕಾಗಿ ನಾವು ಮನೆಯಲ್ಲಿಯೇ ಸುಲಭವಾಗಿ ಕಾಲೋಚಿತ ಹಣ್ಣುಗಳ ಆರೋಗ್ಯಕರ ಪಾನೀಯಗಳನ್ನು ತಯಾರಿಸಬಹುದು. ಋತುಮಾನಗಳಿಗೆ ಅನುಗುಣವಾಗಿ ಸಿಗುವ ಕಾಲೋಚಿತ ಹಣ್ಣುಗಳು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತವೆ ಮತ್ತು ಅವುಗಳು ದೇಹವನ್ನು ನೈಸರ್ಗಿಕವಾಗಿ ಹೈಡ್ರೇಟ್ ಮಾಡುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಬೇಸಿಗೆ ಕಾಲದಲ್ಲಿ ಸಿಗುವ ಮಾವು, ದ್ರಾಕ್ಷಿ, ನೇರಳೆಹಣ್ಣುಗಳ ಪಾನೀಯಗಳು ದೇಹದ ಶಕ್ತಿ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ 3 ಬಗೆಯ ಬೇಸಿಗೆಯ ಪಾನೀಯಗಳು
ದ್ರಾಕ್ಷಿ ಮತ್ತು ನಿಂಬೆ ಪಾನಕ
ಬೇಕಾಗುವ ಪದಾರ್ಥಗಳು: ಕಪ್ಪು ದ್ರಾಕ್ಷಿ-20, ಪುಡಿ ಸಕ್ಕರೆ-2 ಟೀಸ್ಪೂನ್, ಬ್ಯಾಕ್ ಸಾಲ್ಟ್- 1/2 ಟೀಸ್ಪೂನ್, ಹುರಿದ ಜೀರಿಗೆ ಪುಡಿ- 1/2 ಟೀಸ್ಪೂನ್, ಮೆಣಸಿನ ಪುಡಿ- 1/2 ಟೀಸ್ಪೂನ್, ನಿಂಬೆ ರಸ- 3 ಟೀಸ್ಪೂನ್, ಐಸ್‌ಕ್ಯೂಬ್ ಸ್ವಲ್ಪ, ನಿಂಬೆ ತುಂಡು- 2, ಸೋಡಾ ನೀರು- 200 ಮಿಲಿ.
ತಯಾರಿಸುವ ವಿಧಾನ:
ಕಪ್ಪು ದ್ರಾಕ್ಷಿ, ಸಕ್ಕರೆ ಪುಡಿ, ಕಪ್ಪು ಉಪ್ಪು, ಹುರಿದ ಜೀರಿಗೆ ಪುಡಿ, ಮೆಣಸಿನ ಪುಡಿ ಮತ್ತು ನಿಂಬೆ ರಸವನ್ನು ಮಿಕ್ಸಿಜಾರ್‌ಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಒಂದು ಲೋಟಕ್ಕೆ ಕೆಲವು ನಿಂಬೆ ತುಂಡುಗಳನ್ನು ಹಾಗೂ ಐಸ್‌ಕ್ಯೂಬ್‌ಗಳನ್ನು ಹಾಕಿ. ಅದಕ್ಕೆ ಆಗಲೇ ರುಬ್ಬಿ ಇಟ್ಟ ದ್ರಾಕ್ಷಿ ಪ್ಯೂರಿಯನ್ನು ಸೇರಿಸಿ. ಬಳಿಕ ತಣ್ಣಗಿನ ಸೋಡಾ ನೀರನ್ನು ಅದೇ ಗಾಜಿನ ಲೋಟಕ್ಕೆ ಸುರಿಯಿರಿ. ಇಷ್ಟಾದರೆ ನಿಂಬೆ ದ್ರಾಕ್ಷಿ ನಿಂಬೆ ಪಾನಕ ಕುಡಿಯಲು ಸಿದ್ಧ.
ಮಾವಿನಕಾಯಿ ಪನ್ನಾ
ಬೇಕಾಗು ಸಾಮಾಗ್ರಿಗಳು: ಹಸಿ ಮಾವಿನಕಾಯಿ, 2 ಟೀಸ್ಪೂನ್ ಜಲಜೀರಾ ಹುರಿದ ಜೀರಿಗೆ ಪುಡಿ- 1/2 ಟೀಸ್ಪೂನ್, ಬ್ಯಾಕ್ ಸಾಲ್ಟ್- 1/2, ಮೆಣಸಿನಕಾಯಿ- 1/2, ಸ್ವಲ್ಪ ಪುದೀನಾ ಎಲೆ, ಸ್ವಲ್ಪ ಬೆಲ್ಲದ ಪುಡಿ.
ವಿಧಾನ: ಒಂದು ದೊಡ್ಡ ಗಾತ್ರದ ಹಸಿ ಮಾವನ್ನು ತೆಗೆದುಕೊಂಡು, ಫ್ರೆಶರ್ ಕುಕ್ಕರ್‌ನಲ್ಲಿ 3 ಸೀಟಿಗಳವರೆಗೆ ಬೇಯಿಸಿ. ಇದು ಬೆಂದ ಬಳಿಕ ಮಾವಿನಕಾಯಿಯ ತಿರುಳನ್ನು ತೆಗೆದು ಮಿಕ್ಸಿ ಜಾರ್‌ಗೆ ಹಾಕಿ, ಅದಕ್ಕೆ ಜಲಜೀರಾ, ಕಪ್ಪು ಉಪ್ಪು, ಹುರಿದ ಜೀರಿಗೆ ಪುಡಿ, ಅರ್ಧ ತುಂಡು ಮೆಣಸಿಕಾಯಿ, ಸ್ವಲ್ಪ ಪುದೀನಾ ಎಲೆಗಳನ್ನು ಸೇರಿಸಿ. ಹಾಗೂ ನಿಮ್ಮ ರುಚಿಗೆ ಅನುಗುಣವಾಗಿ ಬೆಲ್ಲದ ಪುಡಿಯನ್ನು ಸೇರಿಸಿ ರುಬ್ಬಿಕೊಳ್ಳಿ. ನಂತರ ಒಂದು ಗ್ಲಾಸ್ ತೆಗೆದುಕೊಂಡು ಆ ಗ್ಲಾಸ್ ಬದಿಯನ್ನು ಉಪ್ಪು ಹಾಗೂ ಮೆಣಸಿನ ಪುಡಿಯಿಂದ ಅದ್ದಿ. ಹಾಗೂ ರುಬ್ಬಿಟ್ಟ ಪ್ಯೂರಿಯನ್ನು ಗ್ಲಾಸ್‌ಗೆ ಹಾಕಿ ಜೊತೆಗೆ ಐಸ್ ಕ್ಯೂಬ್‌ಗಳನ್ನು ಸೇರಿಸಿ ಬಳಿಕ ನೀರನ್ನು ಸೇರಿಸಿದರೆ ಮಾವಿನ ಪನ್ನಾ ಸವಿಯಲು ಸಿದ್ಧ.
ಇದನ್ನೂ ಓದಿ;Summer Health: ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು 5 ಸುಲಭ ಮಾರ್ಗಗಳು ಇಲ್ಲಿವೆ
ನೇರಳೆಹಣ್ಣಿನ ಜ್ಯೂಸ್:
ಬೇಕಾಗುವ ಪದಾರ್ಥಗಳು: ನೇರಳೆಹಣ್ಣು- 500 ಗ್ರಾಂ, ನೀರು 2 ಲೀ, ಸಕ್ಕರೆ 1/2 ಕಪ್, ಉಪ್ಪು ರುಚಿಗೆ ತಕ್ಕಷ್ಟು, ಕರಿಮೆಣಸಿನ ಪುಡಿ 1/4 ಟೀಸ್ಪೂನ್, ಕಪ್ಪು ಉಪ್ಪು 1/2 ಟೀಸ್ಪೂನ್, ಹುರಿದ ಜೀರಿಗೆ ಪುಡಿ 1/2 ಟೀಸ್ಪೂನ್, ನಿಂಬೆ ರಸ 1/4 ಕಪ್, ಐಸ್‌ಕ್ಯೂಬ್ ಸ್ವಲ್ಪ, ಪುದೀನಾ ಎಲೆ ಸ್ವಲ್ಪ.
ತಯಾರಿಸುವ ವಿಧಾನ: ನೇರಳೆಹಣ್ಣನ್ನು ಚೆನ್ನಾಗಿ ತೊಳೆದು ಬಾಣಲೆಯಲ್ಲಿ ಇರಿಸಿ, ಅದಕ್ಕೆ ನೀರನ್ನು ಸೇರಿಸಿ ಕುದಿಸಿ. ಮತ್ತು ಅದಕ್ಕೆ ಉಪ್ಪು, ಕಪ್ಪು ಉಪ್ಪು, ಹುರಿದ ಜೀರಿಗೆ ಪುಡಿ, ಕರಿಮೆಣಸಿನ ಪುಡಿ ಮತ್ತು ಸಕ್ಕರೆಯನ್ನು ಸೇರಿಸಿ 15 ನಿಮಿಷಗಳ ಕಾಲ ಕುದಿಯಲು ಬಿಡಿ. ನಂತರ ಅದನ್ನು ಬದಿಗಿಟ್ಟು ತಣ್ಣಗಾಗಲು ಬಿಡಿ. ನಂತರ ಮ್ಯಾಶರ್‌ನಿಂದ ನೇರಳೆಹಣ್ಣನ್ನು ಅದರ ಬೀಜಗಳು ಪುಡಿಯಾಗದಂತೆ ಮ್ಯಾಶ್ ಮಾಡಿ ಅದರ ರಸವನ್ನು ಸೋಸಿಕೊಳ್ಳಿ. ಸೋಸಿಕೊಂಡ ನೇರಳೆಹಣ್ಣಿನ ರಸಕ್ಕೆ ನಿಂಬೆ ರಸವನ್ನು ಸೇರಿಸಿ ಮಿಶ್ರಣ ಮಾಡಿ. ನಂತರ ಒಂದು ಗ್ಲಾಸ್‌ಗೆ ಐಸ್‌ಕ್ಯೂಬ್‌ಗಳನ್ನು ಹಾಗೂ ಪುದೀನಾ ಸೊಪ್ಪನ್ನು ಹಾಕಿ ನೇರಳೆ ಜ್ಯೂಸ್‌ನ್ನು ಅದಕ್ಕೆ ಸುರಿಯಿರಿ.
Published On - 5:16 pm, Tue, 4 April 23