ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದು 112ಗೆ ಕರೆ ಮಾಡಿ ರಕ್ಷಣೆ ಮಾಡುವಂತೆ ಗೋಗರೆದ ಯುವಕರು

| Updated By: ರಮೇಶ್ ಬಿ. ಜವಳಗೇರಾ

Updated on: Jan 29, 2023 | 3:38 PM

ನಂದಿಗಿರಿಧಾಮದಲ್ಲಿ ಟ್ರಕ್ಕಿಂಗ್​ಗೆ ಹೋಗಿದ್ದ ಇಬ್ಬರು ಯುವಕರು ಪ್ರಪಾತಕ್ಕೆ ಬಿದ್ದು, ಬಳಿಕ 112 ಗೆ ಕರೆ ಮಾಡಿ ರಕ್ಷಣೆ ಮಾಡುವಂತೆ ಗೋಗರೆದಿದ್ದಾರೆ.

ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದು 112ಗೆ ಕರೆ ಮಾಡಿ ರಕ್ಷಣೆ ಮಾಡುವಂತೆ ಗೋಗರೆದ ಯುವಕರು
ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದಿದ್ದ ಇಬ್ಬರು ಯುವಕರ ರಕ್ಷಣೆ
Follow us on

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ(Nandi Hills) ಟ್ರಕ್ಕಿಂಗ್​ಗೆ ಹೋಗಿದ್ದ ಇಬ್ಬರು ಯುವಕರು ಪ್ರಪಾತಕ್ಕೆ ಬಿದ್ದಿದ್ದಾರೆ. ವೀರಭದ್ರೇಶ್ವರ ದೇವಸ್ಥಾನ ಇಳಿಜಾರಿನಲ್ಲಿ ಸಿಲುಕಿದ್ದು, ಬಳಿಕ 112 ಗೆ ಕರೆ ಮಾಡಿ ರಕ್ಷಣೆಗೆ ಮೊರೆಯಿಟ್ಟಿದ್ದಾರೆ. ಕೂಡಲೇ ಸ್ಥಳಕ್ಕೆ ನಂದಿಗಿರಿಧಾಮ ಠಾಣೆ ಪೊಲೀಸರು  ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಅಪಾಯಕಾರಿ ಪ್ರಪಾತದಲ್ಲಿ ರಕ್ಷಣಾ ಸಾಮಾಗ್ರಿಗಳ ಮೂಲಕ ಕಾರ್ಯಾಚರಣೆ.ನಡೆಸಿ ಯುವಕರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವರಾಜ್ ಕರಲಿಂಗನ್ನವರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ದೊಡ್ಡಬಳ್ಳಾಪುರದ ಮನೋಜ್ ಕುಮಾರ್, ಮಂಜುನಾಥ್ ಎನ್ನುವರನ್ಜು ರಕ್ಷಣೆ ಮಾಡಿದೆ.

ಅಪಾಯಕಾರಿ ಪ್ರಪಾತದಲ್ಲಿ ಜಾರಿ ಬಿದ್ದಿರುವ ಓರ್ವ ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮತ್ತೋರ್ವ ಯುವಕನಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.  ಗಾಯಗೊಂಡಿದ್ದ ಮನೋಜ್​ನನ್ನು ಅಗ್ನಿಶಾಮಕ ಸಿಬ್ಬಂದಿ ಎರಡ್ಮೂರು ಕಿಲೋ ಮೀಟರ್​ ಹೊತ್ತುಕೊಂಡು ಬಂದಿದ್ದು, ಸದ್ಯ ಗಾಯಾಳು ಮನೋಜ್​ನನ್ನು ಚಿಕ್ಕಬಳ್ಳಾಫುರ ಜಿಲ್ಲಾಆಸ್ಪತ್ರಗೆ ರವಾನಿಸಲಾಗಿದೆ. ಮನೋಜ್ ಹಾಗೂ ಮಂಜುನಾಥ್ ಇಂದು (ಜನವರಿ 29) ಬೆಳಿಗ್ಗೆ ನಂದಿಗಿರಿಧಾಮಕ್ಕೆ ಟ್ರಕ್ಕಿಂಗ್​ ಹೋಗಿದ್ದರು.

ಟ್ರಕಿಂಗ್​ ಹೋದವರು ಪ್ರಪಾತಕ್ಕೆ ಬಿದ್ದಿರುವುದು ಇದು ಮೊದಲೇನಲ್ಲ. ಈ ಹಿಂದೆ ಈ ರೀತಿ ಘಟನೆಗಳು ನಡೆದ ಉದಾಹರಣಗಳು ಇವೆ.

ನಂದಿಗಿರಿಧಾಮದಲ್ಲಿ ಹೊತ್ತಿ ಉರಿದ ಕಾರು

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಪೋರ್ಡ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಬಳಿಕ ಹೊತ್ತಿ ಉರಿದಿದೆ. ಕುಟುಂಬವೊಂದು ಬೆಂಗಳೂರಿನಿಂದ ನಂದಿಗಿರಿಧಾಮದ ಪ್ರವಾಸಕ್ಕೆ ಬಂದಿತ್ತು. ಈ ವೇಳೆ ನಂದಿ ಬೆಟ್ಟ ಏರುತ್ತಿದ್ದ ಪೋರ್ಡ್ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ತಿದ್ದಂತೆ ಎಚ್ಚೆತ್ತ ಚಾಲಕ ಕಾರಿನಲ್ಲಿದ್ದವರನ್ನು ಕೆಳಗೆ ಇಳಿಯುವಂತೆ ಹೇಳಿದ್ದಾರೆ. ಚಾಲಕನ ಸಮಯ ಪ್ರಜ್ಞೆಯಿಂದ ಅದೃಷ್ಟವಶಾತ್ ಕಾರಿನಲ್ಲಿದ್ದವರು ಬಚಾವ್ ಆಗಿದ್ದಾರೆ. ಬಳಿಕ ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿ ಬೆಂಕಿ ನಂದಿಸಿದೆ.

Published On - 3:31 pm, Sun, 29 January 23