ಚಿಕ್ಕಬಳ್ಳಾಪುರ ಈಶಾ ಫೌಂಡೇಷನ್ ಎಫೆಕ್ಟ್ – ಆವಲಗುರ್ಕಿ ಗ್ರಾಮದಲ್ಲಿ ಭೂಮಿ ಬೆಲೆ ಗಗನಕ್ಕೆ, ಆದರೂ ಒಂದಿಂಚೂ ಮಾರೋಲ್ಲ ಅಂತಿದ್ದಾರೆ ರೈತರು

| Updated By: ಸಾಧು ಶ್ರೀನಾಥ್​

Updated on: Oct 18, 2023 | 1:08 PM

Chikkaballapur Isha Foundation Effect: ರಾಷ್ಟ್ರೀಯ ಹೆದ್ದಾರಿ-44 ರಿಂದ ವಡ್ರೇಪಾಳ್ಯ ಗೇಟ್, ಗೇಟ್‍ನಿಂದ ಈಶಾ ಫೌಂಡೇಷನ್‍ವರೆಗೂ ಭೂಮಿಗೆ ಚಿನ್ನದ ಬೆಲೆ ಬಂದಿದ್ದು, ಪ್ರತಿದಿನ ರಿಯಲ್ ಎಸ್ಟೇಟ್ ಉದ್ಯಮಿಗಳು ಆಗಮಿಸಿ ಜಮೀನು ಕೊಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಕೊನೆ ಪಕ್ಷ ಜಾಯಿಂಟ್ ವೆಂಚರ್, ಬಾಡಿಗೆಗಾದರೂ ನೀಡಿ, ನೀವು ಕೇಳಿದಷ್ಟು ಹಣ ನೀಡುವುದಾಗಿ ರೈತರಿಗೆ ಮನವಿ ಮಾಡುತ್ತಿದ್ದಾರಂತೆ.

ಚಿಕ್ಕಬಳ್ಳಾಪುರ ಈಶಾ ಫೌಂಡೇಷನ್ ಎಫೆಕ್ಟ್ - ಆವಲಗುರ್ಕಿ ಗ್ರಾಮದಲ್ಲಿ ಭೂಮಿ ಬೆಲೆ ಗಗನಕ್ಕೆ, ಆದರೂ ಒಂದಿಂಚೂ ಮಾರೋಲ್ಲ ಅಂತಿದ್ದಾರೆ ರೈತರು
ಚಿಕ್ಕಬಳ್ಳಾಪುರ ಈಶಾ ಫೌಂಡೇಷನ್ ಎಫೆಕ್ಟ್ - ಆವಲಗುರ್ಕಿ ಗ್ರಾಮದಲ್ಲಿ ಭೂಮಿ ಬೆಲೆ ಗಗನಕ್ಕೆ
Follow us on

ಆ ಪ್ರದೇಶ ಮೊದಲೇ ಕಾಡು, ಮೇಡು, ಗುಡ್ಡಗಾಡುಗಳಿಂದ ಕೂಡಿತ್ತು. ಅಲ್ಲಿ ಜಮೀನುಗಳನ್ನು ಕಡಿಮೆ ಬೆಲೆಗೆ ಕೊಡ್ತಿವಿ ಎಂದರೂ ಯಾರು ಕೊಂಡುಕೊಳ್ಳುತ್ತಿರಲಿಲ್ಲ. ಆದರೆ ಇತ್ತೀಚೆಗೆ ಆ ಭಾಗದಲ್ಲಿ ಈಶಾ ಫೌಂಡೇಶನ್‍ನಿಂದ (Isha Foundation) 112 ಅಡಿಗಳ ಆದಿಯೋಗಿ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ್ದೇ ತಡ ಭೂಮಿ ಬೆಲೆ (Land price) ಗಗನಕ್ಕೇರಿದೆ. 5-6 ಲಕ್ಷ ರೂಪಾಯಿ ಇದ್ದ ಎಕರೆ ಜಮೀನಿನ ಬೆಲೆ ಈಗ ಕೋಟಿ ರೂಪಾಯಿ ಕೊಟ್ಟರೂ ಸಿಗುತ್ತಿಲ್ಲ. ಈ ಕುರಿತು ಒಂದು ವರದಿ…

ಚಿಕ್ಕಬಳ್ಳಾಪುರ ತಾಲ್ಲೂಕು (Chikkaballapur) ಆವಲಗುರ್ಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ (Avalagurki rural areas) ಹನುಮಂತಪುರ ಗ್ರಾಮದ ಬಳಿ ಆಧ್ಯಾತ್ಮ ಗುರು, ಯೋಗ ಗುರು ಜಗ್ಗಿ ವಾಸುದೇವ್ ಈಶಾ ಫೌಂಡೇಷನ್‍ನಿಂದ 112 ಆದಿಯೋಗಿ ಪ್ರತಿಮೆ ಅನಾವರಣ ಮಾಡಿದ್ದೇ ತಡ ಪ್ರತಿದಿನ ಸಾವಿರಾರು ಜನ ಭಕ್ತರು, ಪ್ರವಾಸಿಗರು ಆಗಮಿಸುತ್ತಿದ್ದು, ಆದಿಯೋಗಿ ಕ್ಷೇತ್ರ ಧಾರ್ಮಿಕ ಪ್ರವಾಸಿ ತಾಣವಾಗಿದೆ. ಇದರಿಂದ ಆದಿಯೋಗಿ ಸುತ್ತಮುತ್ತ 5-6 ಕಿ.ಮೀ. ವ್ಯಾಪ್ತಿಯಲ್ಲಿ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಆದಿಯೋಗಿ ಬೃಹತ್​​ ಮೂರ್ತಿ ಅನಾವರಣಕ್ಕೂ ಮುನ್ನ ಇಲ್ಲಿ 1 ಎಕರೆ ಜಮೀನು ಬೆಲೆ 5-6 ಲಕ್ಷ ರೂಪಾಯಿ ಇತ್ತು. ಆದರೆ ಈಗ ಎಕರೆ ಜಮೀನಿಗೆ ಕೋಟಿ ರೂಪಾಯಿ ಬೆಲೆಗೂ ಅಧಿಕವಾಗಿದೆ ಎನ್ನುತ್ತಾರೆ ಸ್ಥಳೀಯರಾದ ವೆಂಕಟರಮಣಪ್ಪ.

ಇನ್ನು ರಾಷ್ಟ್ರೀಯ ಹೆದ್ದಾರಿ-44 ರಿಂದ ವಡ್ರೇಪಾಳ್ಯ ಗೇಟ್, ಗೇಟ್‍ನಿಂದ ಈಶಾ ಫೌಂಡೇಷನ್‍ವರೆಗೂ ಭೂಮಿಗೆ ಚಿನ್ನದ ಬೆಲೆ ಬಂದಿದ್ದು, ಪ್ರತಿದಿನ ರಿಯಲ್ ಎಸ್ಟೇಟ್ ಉದ್ಯಮಿಗಳು ಆಗಮಿಸಿ ಜಮೀನು ಕೊಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಕೊನೆ ಪಕ್ಷ ಜಾಯಿಂಟ್ ವೆಂಚರ್, ಬಾಡಿಗೆಗಾದರೂ ನೀಡಿ, ನೀವು ಕೇಳಿದಷ್ಟು ಹಣ ನೀಡುವುದಾಗಿ ರೈತರಿಗೆ ಮನವಿ ಮಾಡುತ್ತಿದ್ದಾರಂತೆ.

ಈಶಾ ಫೌಂಡೇಶನ್‍ನ ಆದಿಯೋಗಿ ಪ್ರತಿಮೆ ಅನಾವರಣಗೊಳ್ಳುವುದಕ್ಕೂ ಮುನ್ನ ಅಲ್ಲಿಯ ಜಮೀನನ್ನು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಆದರೆ ಈಗ ಕೋಟಿ ಕೊಡ್ತೀನಿ ಕೊಡಿ ಎಂದರೂ ಯಾರೂ ಭೂಮಿಯನ್ನು ಮಾರುವವರಿಲ್ಲ. ಮಾರುವ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಇದೆಲ್ಲಾ ಆದಿಯೋಗಿ ಆಶೀರ್ವಾದ ಎನ್ನುತ್ತಾರೆ ಸುತ್ತಮುತ್ತಲ ರೈತರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ