ಬಿರುಬಿಸಿಲಿನಲ್ಲೂ ಕೂಲ್​ಕೂಲ್​​ ಕುಕುಂಬರ್​ ಬೆಳೆದ ವಕೀಲ 1ಲಕ್ಷ ಬಂಡವಾಳ ಹಾಕಿ 7 ಲಕ್ಷ ಲಾಭ ಗಳಿಸಿದರು! ಎಲ್ಲಿ?

| Updated By: ಸಾಧು ಶ್ರೀನಾಥ್​

Updated on: May 24, 2024 | 3:51 PM

Lawyer cum Cucumber Farmer: ಬೇಸಿಗೆಯಲ್ಲೂ ರಾತ್ರಿ ವೇಳೆ ಸೌತೆಕಾಯಿಗೆ ನೀರು ಹಾಯಿಸುವ ಮೂಲಕ ಗಿಡಗಳು ಬಿಸಿಲಿನ ಪ್ರತಾಪಕ್ಕೆ ಸೊರಗಿ ಹೋಗದಂತೆ ರೈತ ಗಂಗರಾಜು ಪ್ಲಾನ್ ಮಾಡಿ ಸೌತೆಗಿಡಗಳಿಂದ ಫಸಲು ಸಮೃದ್ದವಾಗಿ ಬರುವಂತೆ ನೋಡಿಕೊಂಡಿದ್ದಾರೆ. ಇದ್ರಿಂದ ಕೈ ಕೆಸರಾದ್ರೆ ಬಾಯಿ ಮೊಸರು ಎನ್ನುವ ಹಾಗೆ ಶ್ರಮಕ್ಕೆ ತಕ್ಕಂತೆ ಒಳ್ಳೆಯ ಬೆಲೆ ಬಂದಿದ್ದು ವಕೀಲ ಗಂಗರಾಜು ಮೊಗದಲ್ಲಿ ಮಂದಹಾಸ ಮೂಡಿ, ಕುಕುಂಬರ್ ಥರಹ ಕೂಲ್​ಕೂಲ್​​ ಆಗಿದ್ದಾರೆ.   

ಬಿರುಬಿಸಿಲಿನಲ್ಲೂ ಕೂಲ್​ಕೂಲ್​​ ಕುಕುಂಬರ್​ ಬೆಳೆದ ವಕೀಲ 1ಲಕ್ಷ ಬಂಡವಾಳ ಹಾಕಿ 7 ಲಕ್ಷ ಲಾಭ ಗಳಿಸಿದರು! ಎಲ್ಲಿ?
ಬಿರುಬಿಸಿಲಿನಲ್ಲೂ ಕೂಲ್​ಕೂಲ್​​ ಕುಕುಂಬರ್​ ಬೆಳೆದ ವಕೀಲನ ಯಶೋಗಾಥೆ
Follow us on
ಈ ಬಾರಿ ಎಲ್ಲೆಲ್ಲೂ ಬರಗಾಲ ಅದ್ರಲ್ಲೂ ಬಯಲುಸೀಮೆ ಚಿಕ್ಕಬಳ್ಳಾಪುರದಲ್ಲಿ ತುಸು ಹೆಚ್ಚೇ ಬಿಸಿಲು! ಈ ಬಾರಿಯ ರಣಬಿಸಿಲಿಗೆ ರೈತರಿಗೆ ಬೆಳೆ ಕಾಪಾಡಿಕೊಳ್ಳೋದೆ ದೊಡ್ಡ ಸವಾಲಾಗಿತ್ತು. ಆದ್ರೆ ಅಲ್ಲೊಬ್ಬ ವಕೀಲರು, ವಕೀಲ ವೃತ್ತಿಯ ಜೊತೆ ಒಂದು ಎಕರೆ ವಿಶಾಲ ಕೃಷಿ ಕೋರ್ಟ್​​​ನಲ್ಲಿ ಕೇವಲ ಒಂದು ಲಕ್ಷ ರೂ ಬಂಡವಾಳ ಹಾಕಿ ಸೌತೆಕಾಯಿ ಬೆಳೆಯಿಂದ (Cucumber Farmer) ಬೆಳೆದಿದ್ದು 7 ಲಕ್ಷ ರೂಪಾಯಿ ಆದಾಯವನ್ನು! ಇತರರಿಗೆ ಮಾದರಿಯಾಗಿರುವ ಈ ರೈತನ ಕುರಿತು (Lawyer cum Cucumber Farmer) ಒಂದು ವರದಿ. ಬಿರು ಬಿಸಲಿನ ನಡುವೆಯೂ ಹಚ್ಚಹಸುರಾಗಿ ನಳನಳಿಸುತ್ತಿರೋ ಸೌತೆಕಾಯಿ ಗಿಡಗಳು, ಕಟಾವು ಮಾಡಿ ರಾಶಿ ಮಾಡಿರೋ ಸೌತೆಕಾಯಿಗಳು, ಭರಪೂರ ಬರದ ನಡುವೆ ಬಿರುಬೇಸಿಗೆಯಲ್ಲೂ ಬಂಪರ್ ಸೌತೆಕಾಯಿ ಬೆಳೆದು ಎಲ್ಲರೂ ಹುಬ್ಬೇರಿಸುವಂತೆ ಮಾಡಿರೋದು ಚಿಕ್ಕಬಳ್ಳಾಪುರ (Chikkaballapur) ತಾಲೂಕು ಮಂಚನಬಲೆ ಗ್ರಾಮದ ವಕೀಲ (Manchanabele Lawyer) ಹಾಗೂ ರೈತ ಗಂಗರಾಜು ಅವರು (Success Story).

ಹೌದು! ಚಿಕ್ಕಬಳ್ಳಾಪುರ ಅಂದ್ರೆ ಅದು ಬರದ ಜಿಲ್ಲೆ, ಈ ಬಾರಿಯ ದಾಖಲೆಯ ಬಿರುಬಿಸಿಲಿನ ತಾಪಮಾನಕ್ಕೆ ಜಿಲ್ಲೆಯ ಎಲ್ಲಾ ಬೆಳೆಗಳು ಬಳಲಿ ಬೆಂಡಾಗಿ ಹೋಗಿ ಜಿಲ್ಲೆಯ ಬಹುತೇಕ ರೈತರು ತಮ್ಮ ತಮ್ಮ ತಲೆಗಳ ಮೇಲೆ ಕೈ ಹೊತ್ತು ಕೂರುವಂತಾಯಿತು….ಆದ್ರೆ ವಕೀಲ ಗಂಗರಾಜು ಮಾತ್ರ ಬಿಡುವಿನ ವೇಳೆಯಲ್ಲಿ ಹಾಗೂ ರಾತ್ರಿ ವೇಳೆಯೂ ಸೌತೆಕಾಯಿ ಬೆಳೆಯತ್ತ ಗಮನ ಹರಿಸಿ ಬಂಪರ್ ಬೆಳೆ ಬೆಳೆದಿದ್ದು ಭರ್ಜರಿ ಲಾಭ ಗಳಿಸಿದ್ದಾರೆ.

Also Read: ಚಿಕ್ಕಬಳ್ಳಾಪುರಕ್ಕೂ ಬಂತು ಮಳೆ, ರೈತ ಮೊಗದಲ್ಲಿ ತಂತು ಕಳೆ, ಬಿಸಿಲಿಗೆ ಬಾಡಿದ್ದ ಬೆಳೆಗಳಿಗೆ ಜೀವಕಳೆ


ಕೇವಲ ತನ್ನ 1 ಎಕರೆ ಜಮೀನಿನಲ್ಲಿ ಸುಮಾರು 1 ಲಕ್ಷ ರೂಪಾಯಿ  ಬಂಡವಾಳ ಹೂಡಿ ಬೆಳೆ ಬೆಳೆಯಲಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಬರೋಬ್ಬರಿ 15 ಟನ್ ಸೌತೆಕಾಯಿ ಇಳುವರಿ ಪಡೆದಿದ್ದಾರೆ. ಇನ್ನೂ ಕೆಲವು ಟನ್ ಸೌತೆಕಾಯಿ ಸಿಗಲಿದೆ. ಈ ಮಧ್ಯೆ ಮಾರುಕಟ್ಟೆಯಲ್ಲಿ ಒಂದು ಮೂಟೆ ಸೌತೆಕಾಯಿ ದಾಖಲೆ ಎಂಬಂತೆ 1200 ರಿಂದ 1500 ರೂಪಾಯಿಯವರೆಗೂ ಮಾರಾಟವಾಗಿದೆ. ಇದ್ರಿಂದ ವಕೀಲ ವೃತ್ತಿಯಲ್ಲಿ ಲಕ್ಷ ಲಕ್ಷ ಹಣ ಗಳಿಸದಿದ್ರೂ ಸೌತೆಕಾಯಿಯಲ್ಲಿ ಲಕ್ಷ ಲಕ್ಷ ಸಂಪಾದನೆ ಮಾಡುವಂತಾಗಿದೆ!

ಬೇಸಿಗೆಯ ನಡುವೆಯೂ ರಾತ್ರಿ ವೇಳೆ ಸೌತೆಕಾಯಿಗೆ ಹೆಚ್ಚಿನ ನೀರು ಹಾಯಿಸುವ ಮೂಲಕ ಸೌತೆಕಾಯಿ ಗಿಡಗಳು ಬಿಸಿಲಿನ ತಾಪಮಾನಕ್ಕೆ ಸೊರಗಿ ಹೋಗದಂತೆ ರೈತ ಗಂಗರಾಜು ಪ್ಲಾನ್ ಮಾಡಿ ಸೌತೆಗಿಡಗಳು ಸಮೃದ್ದ ಫಸಲು ಬರುವಂತೆ ನೋಡಿಕೊಂಡಿದ್ದಾರೆ. ಇದ್ರಿಂದ ಕೈ ಕೆಸರಾದ್ರೆ ಬಾಯಿ ಮೊಸರು ಎನ್ನುವ ಹಾಗೆ ಶ್ರಮಕ್ಕೆ ತಕ್ಕಂತೆ ಒಳ್ಳೆಯ ಬೆಲೆ ಬಂದಿದ್ದು ವಕೀಲ ಗಂಗರಾಜು ಮೊಗದಲ್ಲಿ ಮಂದಹಾಸ ಮೂಡಿ, ಕುಕುಂಬರ್ ಥರಹ ಕೂಲ್​ಕೂಲ್​​ ಆಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.