ಚಿಕ್ಕಬಳ್ಳಾಪುರ: ಹಾವು ಸಂರಕ್ಷಣೆ ವೇಳೆ ಉರಗ ತಜ್ಞನಿಗೆ ಕಚ್ಚಿದ ಹಾವು

| Updated By: ಕಿರಣ್ ಹನುಮಂತ್​ ಮಾದಾರ್

Updated on: May 25, 2024 | 4:55 PM

ಹಾವು ಸಂರಕ್ಷಣೆ ವೇಳೆ ಉರಗ ತಜ್ಞನಿಗೆ ಹಾವು ಕಚ್ಚಿದ ಘಟನೆ ಚಿಕ್ಕಬಳ್ಳಾಪುರ(Chikkaballapur) ನಗರದ ಬಿಬಿ ರಸ್ತೆಯಲ್ಲಿ ನಡೆದಿದೆ. ಸ್ವೀಪ್ಟ್ ಕಾರಿನಲ್ಲಿ ಮಾರುದ್ದ ಕೆರೆ ಹಾವು(Rat Snake) ಸೇರಿಕೊಂಡಿತ್ತು. ಈ ಹಿನ್ನಲೆ ಸ್ಥಳೀಯ ಉರಗ ತಜ್ಞ ಪೃಥ್ವಿರಾಜ್ ಎಂಬುವವರನ್ನು ಕರೆಸಲಾಗಿತ್ತು. ರಕ್ಷಣೆ ಮಾಡುವ ವೇಳೆ ಹಾವು ಅವರ ಕೈಗೆ ಕಚ್ಚಿದೆ.

ಚಿಕ್ಕಬಳ್ಳಾಪುರ, ಮೇ.25: ಹಾವು ಸಂರಕ್ಷಣೆ ವೇಳೆ ಉರಗ ತಜ್ಞನಿಗೆ ಹಾವು ಕಚ್ಚಿದ ಘಟನೆ ಚಿಕ್ಕಬಳ್ಳಾಪುರ(Chikkaballapur) ನಗರದ ಬಿಬಿ ರಸ್ತೆಯಲ್ಲಿ ನಡೆದಿದೆ. ಸ್ವೀಪ್ಟ್ ಕಾರಿನಲ್ಲಿ ಮಾರುದ್ದ ಕೆರೆ ಹಾವು(Rat Snake) ಸೇರಿಕೊಂಡಿತ್ತು. ಈ ಹಿನ್ನಲೆ ಸ್ಥಳೀಯ ಉರಗ ತಜ್ಞ ಪೃಥ್ವಿರಾಜ್ ಎಂಬುವವರನ್ನು ಕರೆಸಲಾಗಿತ್ತು. ಅದರಂತೆ ಸ್ಥಳಕ್ಕೆ ಬಂದ ಅವರು, ‘ಹಾವು ಹಿಡಿದು ರಕ್ಷಣೆ ಮಾಡಿದರು. ಆದರೆ, ಈ ವೇಳೆ ಜನರನ್ನು ನೋಡಿ ಗಾಬಾರಿಯಾದ ಹಾವು, ರೋಷದಿಂದ ಅವರ ಕೈಗೆ ಕಚ್ಚಿದೆ. ಹಾವು ಕಚ್ಚುವ ದೃಶ್ಯ ಸಾರ್ವಜನಿಕರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೂಡಲೇ ಉರಗ ತಜ್ಞ ಪೃಥ್ವಿರಾಜ್​ಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಕೆರೆ ಹಾವುಗಳು

ಕೆರೆ ಹಾವುಗಳು, ಹಾಲು ಹಾವುಗಳು, ಬಳ್ಳಿ ಹಾವುಗಳು ಮತ್ತು ಇಂಡಿಗೊ ಹಾವುಗಳು ಒಂದೇ ಜಾತಿಗೆ ಸೇರಿದೆ. ಇವುಗಳು ಉತ್ತರ ಗೋಳಾರ್ಧದಲ್ಲಿ ಹೆಚ್ಚು ಕಂಡುಬರುತ್ತವೆ. ಇವುಗಳ ಮುಖ್ಯ ಆಹಾರ ದಂಶಕಗಳು ಮತ್ತು ಪಕ್ಷಿಗಳು. ಇವುಗಳ ಕಡಿತ ವಿರಳವಾಗಿ ಗಂಭೀರ, ಇವುಗಳು ಸಾಮಾನ್ಯವಾಗಿ ಮಾನವರಿಗೆ ಅಪಾಯಕಾರಿಯಲ್ಲ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:51 pm, Sat, 25 May 24

Follow us on