ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ಬಂದ ಸಿದ್ದರಾಮಯ್ಯ, ಶಿವಕುಮಾರ್ ಗೆ ಪೂರ್ಣಕುಂಭ, ವಾದ್ಯಘೋಷ ಸ್ವಾಗತ
ಮುಖ್ಯಮಂತ್ರಿ ಮತ್ತು ಅವರ ಸಹೋದ್ಯೋಗಿಗಳು ಮುಖ್ಯದ್ವಾರದಿಂದ ದೇವಸ್ಥಾನದವರೆಗೆ ನಡೆದುಕೊಂಡು ಹೋಗುವುದನ್ನು ದೃಶ್ಯಗಳಲ್ಲಿ ನೋಡಬಹುದು. ದೇವಸ್ಥಾನದ ಎರಡು ಆನೆಗಳು ದ್ವಾರದ ಬಳಿ ನಿಂತು ಮುಖ ಅಲ್ಲಾಡಿಸುತ್ತಾ ಸೊಂಡಿಲೆತ್ತಿ ನಮಸ್ಕರಿಸುವ ದೃಶ್ಯ ಮನಸ್ಸಿಗೆ ಮುದ ನೀಡುತ್ತದೆ.
ಮಂಗಳೂರು: ತಮ್ಮ ಸರ್ಕಾರ ಅಧಿಕಾರದಲ್ಲಿ ಒಂದು ವರ್ಷ ಪೂರೈಸಿದ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮತ್ತು ಬೇರೆ ಕೆಲ ನಾಯಕರು ಇಂದು ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿರುವ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ (Manjunath) ದರ್ಶನ ಪಡೆದರು. ದೇವಸ್ಥಾನದ ಆನೆಗಳು ಮತ್ತು ವಾದ್ಯಘೋಷಗಳ ಸ್ವಾಗತವನ್ನು ಗಣ್ಯರಿಗೆ ನೀಡಲಾಯಿತು. ಪುಣ್ಯಕ್ಷೇತ್ರದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರು ದೇವಸ್ಥಾನದ ಮುಖ್ಯದ್ವಾರದ ಬಳಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರನ್ನು ಬರಮಾಡಿಕೊಂಡರು. ಮುಖ್ಯಮಂತ್ರಿ ಮತ್ತು ಅವರ ಸಹೋದ್ಯೋಗಿಗಳು ಮುಖ್ಯದ್ವಾರದಿಂದ ದೇವಸ್ಥಾನದವರೆಗೆ ನಡೆದುಕೊಂಡು ಹೋಗುವುದನ್ನು ದೃಶ್ಯಗಳಲ್ಲಿ ನೋಡಬಹುದು. ದೇವಸ್ಥಾನದ ಎರಡು ಆನೆಗಳು ದ್ವಾರದ ಬಳಿ ನಿಂತು ಮುಖ ಅಲ್ಲಾಡಿಸುತ್ತಾ ಸೊಂಡಿಲೆತ್ತಿ ನಮಸ್ಕರಿಸುವ ದೃಶ್ಯ ಮನಸ್ಸಿಗೆ ಮುದ ನೀಡುತ್ತದೆ. ನಾಯಕರನ್ನು ನೋಡಲು ಸಾಕಷ್ಟು ಜನ ನೆರೆದಿದ್ದರು, ಅವರಲ್ಲಿ ಒಂದು ಗುಂಪು ಸಿದ್ದರಾಮಯ್ಯ ಕಣ್ಣಿಗೆ ಬಿದ್ದ ಕೂಡಲೇ ಜೈ ಶ್ರೀರಾಮ್ ಎಂದು ಘೋಷಣ ಕೂಗಿತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಶಾಸಕ ಹರೀಶ್ ಪೂಂಜಾ ಪ್ರಕರಣ; ಸಿಎಂ ಸಿದ್ದರಾಮಯ್ಯ ಏನಂದ್ರು ಗೊತ್ತಾ?