ಉಡುಪಿಯಲ್ಲಿ ನಡೆದಿದ್ದು ಗ್ಯಾಂಗ್ ವಾರ್ ಅಲ್ಲ, ಒಂದೇ ಗುಂಪಿನ ಎರಡು ಪಂಗಡಗಳ ನಡುವಿನ ಕಾದಾಟ: ಎಸ್​ಪಿ, ಉಡುಪಿ

ಉಡುಪಿಯಲ್ಲಿ ನಡೆದಿದ್ದು ಗ್ಯಾಂಗ್ ವಾರ್ ಅಲ್ಲ, ಒಂದೇ ಗುಂಪಿನ ಎರಡು ಪಂಗಡಗಳ ನಡುವಿನ ಕಾದಾಟ: ಎಸ್​ಪಿ, ಉಡುಪಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 25, 2024 | 4:13 PM

ಹೊಡೆದಾಟದ ಸಮಯದಲ್ಲಿ ಬಳಕೆಯಾದ ಒಂದು ಕಾರು, ಎರಡು ಬೈಕ್ ಮತ್ತು ಚಾಕು, ತಲ್ವಾರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ ಕೆ ಅರುಣ್ ಉಳಿದ ಅರೋಪಿಗಳು ನಾಪತ್ತೆಯಾಗಿದ್ದು ಆದಷ್ಟು ಬೇಗ ಅವರನ್ನೂ ಬಂಧಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಉಡುಪಿ: ಕಳೆದ ಶನಿವಾರ ರಾತ್ರಿ ಉಡುಪಿ ನಗರದ ಕುಂಜಿಬೆಟ್ಟು ಬಳಿ ಎರಡು ಗುಂಪುಗಳ ನಡುವೆ ನಡೆದ ಹೊಡೆದಾಟದ (gang war) ವಿಡಿಯೋ ವೈರಲ್ ಆಗಿದೆ. ರಾಜ್ಯ ಪೊಲೀಸ್ ವ್ಯವಸ್ಥೆಯ ಬಗ್ಗೆ ಜನ ಪುನಃ ಪ್ರಶ್ನೆ ಕೇಳಲಾರಂಭಿಸಿದ್ದಾರೆ. ಅವತ್ತು ನಡೆದ ಘಟನೆಯ ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ ಕೆ ಅರುಣ್ (Dr K Arun) ಮಾಧ್ಯಮಗಳಿಗೆ ಬ್ರೀಫ್ ಮಾಡಿದ್ದಾರೆ. ಜನರೆಲ್ಲ ಅಂದುಕೊಂಡಿರುವ ಹಾಗೆ ಇದು ಗ್ಯಾಂಗ್ ವಾರ್ ಅಲ್ಲ, ಒಂದೇ ಗುಂಪಿನ ಎರಡು ಪಂಗಡಗಳ (two groups of same gang) ನಡುವೆ ನಡೆದಿರುವ ಹೊಡೆದಾಟ. ನಾವು ಈಗಾಗಲೇ ವರದಿ ಮಾಡಿರುವ ಹಾಗೆ ಮೇ 20 ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಮತ್ತು ಅದರ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳುತ್ತಾರೆ. ಹೊಡೆದಾಟದ ಸಮಯದಲ್ಲಿ ಬಳಕೆಯಾದ ಒಂದು ಕಾರು, ಎರಡು ಬೈಕ್ ಮತ್ತು ಚಾಕು, ತಲ್ವಾರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ ಕೆ ಅರುಣ್ ಉಳಿದ ಅರೋಪಿಗಳು ನಾಪತ್ತೆಯಾಗಿದ್ದು ಆದಷ್ಟು ಬೇಗ ಅವರನ್ನೂ ಬಂಧಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಉಡುಪಿಯಲ್ಲಿ ಮೇ 18ರಂದು ನಡೆದ ಭಯಾನಕ ಗ್ಯಾಂಗ್​ವಾರ್ ದೃಶ್ಯಗಳು ಲಭ್ಯ, ಸೆರೆ ಸಿಕ್ಕಿರುವ ಇಬ್ಬರು