ಉಡುಪಿಯಲ್ಲಿ ಮೇ 18ರಂದು ನಡೆದ ಭಯಾನಕ ಗ್ಯಾಂಗ್ವಾರ್ ದೃಶ್ಯಗಳು ಲಭ್ಯ, ಸೆರೆ ಸಿಕ್ಕಿರುವ ಇಬ್ಬರು
ಬಿಳಿ ಬಣ್ಣದ ಕಾರಲ್ಲಿರುವವರು ಕಪ್ಪುಬಣ್ಣದ ಕಾರನಲ್ಲಿದ್ದ ವ್ಯಕ್ತಿ ಲಾಂಗ್ ಹಿಡಿದು ದಾಳಿ ಮಾಡಲು ಬಂದಾಗ ಅವನ ಮೇಲೆ ವಾಹನ ಹರಿಸುವುದನ್ನು ಮತ್ತು ಅವನು ಅಂಗಾತ ನೆಲಕ್ಕೆ ಬೀಳುವುದು ಕಾಣಿಸುತ್ತದೆ. ಬಿಳಿಕಾರಲ್ಲಿದ್ದ ಇಬ್ಬರು ಯುವಕರು ಓಡಿಬಂದು ನೆಲಕ್ಕೆ ಬಿದ್ದವನ ಮೇಲೆ ಆಯುಧಗಳಿಂದ ಪ್ರಹಾರ ನಡೆಸುತ್ತಾರೆ. ಕಪ್ಪು ಬಣ್ಣದ ಕಾರಲ್ಲಿದ್ದ ಯುವಕರು ಹೊರ ಬರುತ್ತಿದ್ದಂತೆಯೇ ಅವರಿಬ್ಬರು ಪರಾರಿಯಾಗುತ್ತಾರೆ.
ಉಡುಪಿ:ಕಳೆದ ಶನಿವಾರ (ಮೇ 18) ಉಡುಪಿ (Udupi) ಕುಂಜಿಬೆಟ್ಟು ರಸ್ತೆಯಲ್ಲಿ ತಡರಾತ್ರಿ ನಡೆದಿದ್ದ ಗ್ಯಾಂಗ್ ವಾರ್ (gang war) ಬಗ್ಗೆ ನಾವು ವರದಿ ಮಾಡಿದ್ದೇವೆ. ಅವತ್ತು ನಡುರಸ್ತೆಯಲ್ಲಿ ನಡೆದ ಹೊಡೆದಾಟದ ದೃಶ್ಯ ಮೊಬೈಲ್ ಫೊನೊಂದರಲ್ಲಿ ಸೆರೆಯಾಗಿದ್ದು ನಮಗೆ ಲಭ್ಯವಾಗಿವೆ. ದೃಶ್ಯಗಳು ಭಯಾನಕವಾಗಿವೆ (dreadful). ಯುವಕರ ಕೈಯಲ್ಲಿ ಮಚ್ಚು, ಲಾಂಗ್ಗಳಿರುವುದನ್ನು ನೋಡಬಹುದು. ಬಿಳಿ ಬಣ್ಣದ ಕಾರಲ್ಲಿರುವವರು ಕಪ್ಪುಬಣ್ಣದ ಕಾರನಲ್ಲಿದ್ದ ವ್ಯಕ್ತಿ ಲಾಂಗ್ ಹಿಡಿದು ದಾಳಿ ಮಾಡಲು ಬಂದಾಗ ಅವನ ಮೇಲೆ ವಾಹನ ಹರಿಸುವುದನ್ನು ಮತ್ತು ಅವನು ಅಂಗಾತ ನೆಲಕ್ಕೆ ಬೀಳುವುದು ಕಾಣಿಸುತ್ತದೆ. ಬಿಳಿಕಾರಲ್ಲಿದ್ದ ಇಬ್ಬರು ಯುವಕರು ಓಡಿಬಂದು ನೆಲಕ್ಕೆ ಬಿದ್ದವನ ಮೇಲೆ ಆಯುಧಗಳಿಂದ ಪ್ರಹಾರ ನಡೆಸುತ್ತಾರೆ. ಕಪ್ಪು ಬಣ್ಣದ ಕಾರಲ್ಲಿದ್ದ ಯುವಕರು ಹೊರ ಬರುತ್ತಿದ್ದಂತೆಯೇ ಅವರಿಬ್ಬರು ಪರಾರಿಯಾಗುತ್ತಾರೆ. ಒಬ್ಬ ಓಡಿ ಹೋಗಿ ಬಿಳಿ ಕಾರು ಹತ್ತುತ್ತಾನೆ ಮತ್ತೊಬ್ಬ ಫೆನ್ಸಿಂಗ್ ಹಾರಿ ಕೆಮೆರಾ ಇರುವ ಕಡೆ ಓಡಿ ಬರುತ್ತಾನೆ. ನಂತರ ಕಪ್ಪು ಕಾರಿನಲಿದ್ದ ಗ್ಯಾಂಗ್ ಕೆಳಗೆ ಬಿದ್ದವನನ್ನು ಕಾರಲ್ಲಿ ಎಳೆದುಕೊಂಡು ಅಲ್ಲಿಂದ ಕಣ್ಮರೆಯಾಗುತ್ತಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗರುಡ ಗ್ಯಾಂಗ್ನ ಆಶಿಕ್ ಮತ್ತು ರಾಕಿಬ್ ಹೆಸರಿನ ಯುವಕರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಆಶಿಕ್ ಕಾಪು ಮೂಲದವನು ಮತ್ತು ರಾಕಿಬ್ ಗುಜ್ಜರಬೆಟ್ಟದವನೆಂದು ಪೊಲೀಸರು ಹೇಳಿದ್ದಾರೆ. ಇದೇ ವಿಡಿಯೋ ಆಧರಿಸಿ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸ್ ಎರಡು ಗುಂಪುಗಳ ನಡುವೆ ನಡೆದ ಹೊಡೆದಾಟದಲ್ಲಿ ಬಳಕೆಯಾಗಿದ್ದ 2 ಕಾರು, ಒಂದು ಬೈಕ್, ತಲ್ವಾರ್ ಹಾಗೂ ಡ್ಯಾಗರ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಿವಾಹ ಸಮಾರಂಭದಲ್ಲಿ ಪಾಕಿಸ್ತಾನದ ಗ್ಯಾಂಗ್ಸ್ಟರ್ ಅಮೀರ್ ಬಾಲಾಜ್ ಟಿಪ್ಪುವನ್ನು ಗುಂಡಿಕ್ಕಿ ಹತ್ಯೆ

ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!

ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು

ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?

‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
