5 ಸಾವಿರ ಬದಲಿಗೆ ಬಂತು 4040 ರೂ: ಬಾಕಿ ಹಣ ನೀಡದ ಎಟಿಎಂ ಮಷೀನ್‌, ಯುವತಿ ಕಕ್ಕಾಬಿಕ್ಕಿ

5 ಸಾವಿರ ಬದಲಿಗೆ ಬಂತು 4040 ರೂ: ಬಾಕಿ ಹಣ ನೀಡದ ಎಟಿಎಂ ಮಷೀನ್‌, ಯುವತಿ ಕಕ್ಕಾಬಿಕ್ಕಿ

ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಕಿರಣ್ ಹನುಮಂತ್​ ಮಾದಾರ್

Updated on: May 25, 2024 | 3:59 PM

ರಾಮನಗರ ಬಸ್ ನಿಲ್ದಾಣದ ಬಳಿ ಇರುವ ಇಂಡಿಯಾ ಒನ್ ಎಟಿಎಂ‌ಗೆ ತೆರಳಿ, ಯುವತಿಯೊಬ್ಬರು ಒಟ್ಟು 5 ಸಾವಿರ ರೂ ವಿತ್ ಡ್ರಾ ಮಾಡಿದ್ದರು. ಆದರೆ 4040 ರೂ. ಮಾತ್ರ ಬಂದಿತ್ತು. ಕೂಡಲೇ ಯುವತಿ ಇಂಡಿಯಾ ಒನ್ ಎಟಿಎಂ ವಿರುದ್ಧ ಬ್ಯಾಂಕಿಗೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಬ್ಯಾಂಕ್ ಸಿಬ್ಬಂದಿ, ‘ತಾಂತ್ರಿಕ ದೋಷದಿಂದ ಹೀಗೆ ಆಗಿದೆ ಎಂದು ಸಬೂಬು ನೀಡಿದ್ದಾರೆ.

ರಾಮನಗರ, ಮೇ.25: ಯುವತಿಯೊಬ್ಬರು ಎಟಿಎಂ(ATM)ಗೆ ತೆರಳಿ 5‌ ಸಾವಿರ ರೂಪಾಯಿಯನ್ನು ವಿತ್ ಡ್ರಾ ಮಾಡಿದ್ದಾರೆ. ಆದರೆ, 4040 ರೂ. ಮಾತ್ರ ಬಂದ ಘಟನೆ ಮೇ.23 ರಂದು ರಾಮನಗರ(Ramanagara)ದಲ್ಲಿ ನಡೆದಿದೆ. ಎಟಿಎಂ ಮಷೀನ್‌ ಮಾಡಿದ ಯಡವಟ್ಟಿಗೆ ಯುವತಿ ಒಂದು ಬಾರಿ ಕಕ್ಕಾಬಿಕ್ಕಿ ಆಗಿದ್ದಾರೆ. ಹೌದು, ರಾಮನಗರ ಬಸ್ ನಿಲ್ದಾಣದ ಬಳಿ ಇರುವ ಇಂಡಿಯಾ ಒನ್ ಎಟಿಎಂ‌ಗೆ ತೆರಳಿ, ಯುವತಿಯೊಬ್ಬರು ಒಟ್ಟು 5 ಸಾವಿರ ರೂ ವಿತ್ ಡ್ರಾ ಮಾಡಿದ್ದರು. ಆದರೆ 4040 ರೂ. ಮಾತ್ರ ಬಂದಿತ್ತು. ಕೂಡಲೇ ಯುವತಿ ಇಂಡಿಯಾ ಒನ್ ಎಟಿಎಂ ವಿರುದ್ಧ ಬ್ಯಾಂಕಿಗೆ ದೂರು ನೀಡಿದ್ದಾರೆ. ಈ ವೇಳೆ ತಾಂತ್ರಿಕ ದೋಷದಿಂದ ಹೀಗೆ ಆಗಿದೆ ಎಂದು ಸಬೂಬು ನೀಡಿದ ಬ್ಯಾಂಕ್, ಉಳಿದ ಬಾಕಿ ಮೊತ್ತ ನೀಡುವುದಾಗಿ ಹೇಳಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ