AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾಖಲೆ ಇಲ್ಲದ 2.93 ಕೋಟಿ ರೂ. ಪತ್ತೆ: ಎಟಿಎಂಗೆ ಹಣ ತುಂಬುವ ವಾಹನ ಜಪ್ತಿ

ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ಸಿಎಂಎಸ್ ಏಜೆನ್ಸಿಗೆ ಸೇರಿದ ವಾಹನದಲ್ಲಿ ಸೂಕ್ತ ದಾಖಲೆ ಇಲ್ಲದೆ ವಾಹನದಲ್ಲಿದ್ದ ಸಾಗಿಸುತ್ತಿದ್ದ 2.93 ಕೋಟಿ ರೂ. ಅನ್ನು ಹೆಬ್ಬಗೋಡಿ ಪೊಲೀಸರು ಸೀಜ್​ ಮಾಡಿದ್ದಾರೆ. ಹಣದ ಬಗ್ಗೆ ಚುನಾವಣಾ ಆಯೋಗ ಮತ್ತು ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ದಾಖಲೆ ಇಲ್ಲದ 2.93 ಕೋಟಿ ರೂ. ಪತ್ತೆ: ಎಟಿಎಂಗೆ ಹಣ ತುಂಬುವ ವಾಹನ ಜಪ್ತಿ
ಸೀಜ್ ಮಾಡಿರುವ 2.93 ಕೋಟಿ ರೂ.
ರಾಮು, ಆನೇಕಲ್​
| Edited By: |

Updated on: Apr 15, 2024 | 5:34 PM

Share

ಆನೇಕಲ್, ಏಪ್ರಿಲ್​​ 15: ಸೂಕ್ತ ದಾಖಲೆ ಇಲ್ಲದೆ ವಾಹನದಲ್ಲಿದ್ದ ಸಾಗಿಸುತ್ತಿದ್ದ 2.93 ಕೋಟಿ ರೂ. ಅನ್ನು ಹೆಬ್ಬಗೋಡಿ ಪೊಲೀಸರು ಸೀಜ್ (seize)​ ಮಾಡಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ಸಿಎಂಎಸ್ ಏಜೆನ್ಸಿಗೆ ಸೇರಿದ ವಾಹನದಲ್ಲಿ ಎಟಿಎಂಗೆ ಹಣ ಸಾಗಿಸುವಾಗ ವಶಕ್ಕೆ ಪಡೆಯಲಾಗಿದೆ. ಹೆಬ್ಬಗೋಡಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ವಾಹನ ಪರಿಶೀಲನೆ ಮಾಡಿದ್ದು, ಬಂದೂಕು ಸಹಿತ ಸೆಕ್ಯೂರಿಟಿ ಗಾರ್ಡ್ ಇಲ್ಲದೆ ಹಣ ಸಾಗಿಸುತ್ತಿರುವುದು ಪತ್ತೆ ಆಗಿದೆ. ಅನುಮಾನಗೊಂಡು ಪರಿಶೀಲಿಸಿದಾಗ ದಾಖಲೆ ಇಲ್ಲದ ಹಣ ಪತ್ತೆ ಆಗಿದ್ದು, ಹಣದ ಬಗ್ಗೆ ಚುನಾವಣಾ ಆಯೋಗ ಮತ್ತು ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ 30 ಲಕ್ಷ ರೂ. ವಶಕ್ಕೆ 

ಕೊಪ್ಪಳ: ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ 30 ಲಕ್ಷ ರೂ. ಹಣವನ್ನು ಪೊಲೀಸರು ಮತ್ತು ತಹಶಿಲ್ದಾರ್ ಜಪ್ತಿ ಮಾಡಿದ್ದಾರೆ. ಜಿಲ್ಲೆಯ ಗಂಗಾವತಿ ತಾಲೂಕಿನ ಕೆಡೆಬಾಗಿಲು ಬಳಿ ಚೆಕ್ ಪೋಸ್ಟ್​ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ, ಕಾರ್​ನಲ್ಲಿದ್ದ ಹಣವನ್ನು ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾರೊಂದರಿಂದ ಕೋಟ್ಯಾಂತರ ಹಣ ಜಪ್ತು, ಹಣ ಸಾಗಿಸುತ್ತಿದ್ದವರು ಪರಾರಿ

ಬಳ್ಳಾರಿ ಜಿಲ್ಲೆಯ ಶಿರಗುಪ್ಪಾ ತಾಲೂಕಿನ ನಡವಿಯಿಂದ ಹೊಸಪೇಟ್​ಗೆ ಪೀರಸಾಭ್ ಎಂಬುವವರ ಹಣ ಸಾಗಿಸುತ್ತಿದ್ದರು. ಹಣಕ್ಕೆ ಯಾವುದೇ ದಾಖಲಾತಿಗಳು ಇಲ್ಲದೇ ಇರೋದರಿಂದ ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಬಸ್​​​ನಲ್ಲಿ ಸಾಗಿಸುತ್ತಿದ್ದ 30 ಲಕ್ಷ ರೂ. ಹಣ ವಶಕ್ಕೆ

ಕರ್ನಾಟಕ ಗಡಿಗೆ ಹೊಂದಿರುವ ತಮಿಳುನಾಡಿನ ಜೂಜುವಾಡಿ ಚೆಕ್​​ಪೋಸ್ಟ್​ನಲ್ಲಿ 30.5 ಲಕ್ಷ ರೂ. ಹಣವನ್ನ ಸೀಜ್​ ಮಾಡಲಾಗಿದೆ. ಖಾಸಗಿ ಬಸ್​​​ನಲ್ಲಿ 30.5 ಲಕ್ಷ ರೂ. ಹಣ, 500 ಗ್ರಾಮ್​ ಚಿನ್ನಾಭರಣವನ್ನ ರಾಜ್​​​ಕುಮಾರ್ ಎಂಬಾತ ಸಾಗಿಸುತ್ತಿದ್ದ. ಆದರೆ ಸೂಕ್ತ ದಾಖಲೆ ಇಲ್ಲದೆ ಇದಿದ್ರಿಂದ ಹಣವನ್ನ ವಶಕ್ಕೆ ಪಡೆಯಲಾಗಿತ್ತು.

98.56 ಕೋಟಿ ಮೌಲ್ಯದ ಬಿಯರ್, ಕಚ್ಚಾ ವಸ್ತು ವಶಕ್ಕೆ

ಇತ್ತೀಚೆಗೆ ಇತಿಹಾಸದಲ್ಲೇ ಮೊದಲ ಬಾರಿಗೆ 98.56 ಕೋಟಿ ರೂ. ಮೊತ್ತದ ಮದ್ಯ ವಶಪಡಿಸಿಕೊಳ್ಳಲಾಗಿತ್ತು. ಮೈಸೂರು ಜಿಲ್ಲೆಯ ನಂಜನಗೂಡಿನ‌ ಯುಬಿ ತಯಾರಿಕಾ ಘಟಕದ ಮೇಲೆ ಚಾಮರಾಜನಗರ ಅಬಕಾರಿ ಅಧಿಕಾರಿಗಳ ದಾಳಿ ನಡೆಸಿದ್ದರು. ಘಟಕದಲ್ಲಿ ನಿಗದಿಗಿಂತ ಹೆಚ್ಚುವರಿ ಬಿಯರ್ ತಯಾರಿಸಿ, ಕೇರಳಕ್ಕೆ ಸಾಗಾಟ ಮಾಡುತ್ತಿದ್ದರು. ದಾಳಿ ವೇಳೆ 17 ಆರೋಪಿಗಳ ವಿರುದ್ಧ ಕೇಸ್ ದಾಖಲಿಸಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.